Monday, August 17, 2026
Google search engine
Homeಮನರಂಜನೆಬಿಗ್ ಬಾಸ್ ಇತಿಹಾಸದಲ್ಲೇ ದಾಖಲೆಯ 37 ಕೋಟಿ ಮತ: ಫಿನಾಲೆಗೂ ಮುನ್ನವೇ ಗೆಲ್ಲುವ ಅಭ್ಯರ್ಥಿ ಸುಳಿವು...

ಬಿಗ್ ಬಾಸ್ ಇತಿಹಾಸದಲ್ಲೇ ದಾಖಲೆಯ 37 ಕೋಟಿ ಮತ: ಫಿನಾಲೆಗೂ ಮುನ್ನವೇ ಗೆಲ್ಲುವ ಅಭ್ಯರ್ಥಿ ಸುಳಿವು ನೀಡಿದ ಸುದೀಪ್!

ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಗೆಲುವಿನ ಅಭ್ಯರ್ಥಿಗೆ ದಾಖಲೆ ಪ್ರಮಾಣದಲ್ಲಿ ಮತಗಳು ಹರಿದು ಬಂದಿದ್ದು, ವೋಟಿಂಗ್ ಮುಗಿಯಲು ಒಂದು ದಿನ ಬಾಕಿ ಇರುವಾಗಲೇ ಗೆಲುವಿನ ಅಭ್ಯರ್ಥಿ ಪರ 37 ಕೋಟಿಗೂ ಅಧಿಕ ಮತಗಳು ಹರಿದು ಬಂದಿದೆ.

ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಗೆ ಕಳೆದ ಸೀಸನ್ 11ರಲ್ಲಿ ಹನುಮಂತುಗೆ 5 ಕೋಟಿಗೂ ಅಧಿಕ ಮತಗಳು ಬಂದಿದ್ದು, ದಾಖಲೆಯಾಗಿತ್ತು. ಆದರೆ ಈ ಬಾರಿ ಶನಿವಾರದ ವೇಳೆ ಗೆಲುವಿನ ಅಭ್ಯರ್ಥಿ ಪರ 37 ಕೋಟಿಗೂ ಅಧಿಕ ಮತಗಳು ಹರಿದು ಬಂದಿದೆ. ಇದು ಬಿಗ್ ಬಾಸ್ ಇತಿಹಾಸದಲ್ಲೇ ದಾಖಲೆ ಮತದಾನವಾಗಿದೆ.

ವೋಟಿಂಗ್ ಭಾನುವಾರ ರಾತ್ರಿ 10 ಗಂಟೆಯವರೆಗೆ ನಡೆಯಲಿದ್ದು, ಸೀಸನ್ 12ರ ಅಭ್ಯರ್ಥಿ ಪರ 50 ಕೋಟಿಗೂ ಅಧಿಕ ಮತಗಳು ದಾಖಲಾಗುವ ಸಾಧ್ಯತೆ ಇದೆ.

ಹೌದು ಕಳೆದ, ‘ಬಿಗ್​ ಬಾಸ್’ಸೀಸನ್​ 11’ರ​​ ಟ್ರೋಫಿಯನ್ನು ಹಳ್ಳಿ ಹೈದ ಹನುಮಂತು ಗೆದ್ದುಕೊಂಡಿದ್ದು, 50 ಲಕ್ಷ ರೂಪಾಯಿಯ ನಗದು ಬಹುಮಾನ ಪಡೆದಿದ್ದಾರೆ.​ ಸೀಸನ್​​ 11ರ ವಿಜೇತ ಬರೋಬ್ಬರಿ 5,23,89,318 ಮತಗಳನ್ನು ಪಡೆದುಕೊಂಡು ಇತಿಹಾಸ ಸೃಷ್ಟಿಸಿದ್ರು. ಹಿಂದಿನ 10 ಸೀಸನ್​​ಗಳಲ್ಲಿ ಯಾರೂ ಕೂಡಾ ಈ ಮಟ್ಟಿನ ಮತಗಳನ್ನು ಪಡೆದುಕೊಂಡಿರಲಿಲ್ಲ. 10ನೇ ಸೀಸನ್​ ವಿನ್ನರ್​ ಸರಿ-ಸುಮಾರು 2 ಕೋಟಿ ಮತಗಳನ್ನು ಪಡೆದುಕೊಂಡಿದ್ದರು.

11ನೇ ಸೀಸನ್​​ಗೆ ವೈಲ್ಡ್​ ಕಾರ್ಡ್ ಸ್ಪರ್ಧಿಯಾಗಿ ಬಂದ ಹನುಮಂತು ಬರೋಬ್ಬರಿ 5.23 ಕೋಟಿಗೂ ಹೆಚ್ಚು ಮತಗಳನ್ನು ಸ್ವೀಕರಿಸಿದ್ರು. ಇಷ್ಟೊಂದು ಮತಗಳನ್ನು ಪಡೆದ ಮೊದಲ ಸ್ಪರ್ಧಿ ಇವರು. ಈ ಹಿನ್ನೆಲೆಯಲ್ಲಿ ಬಿಗ್​ ಬಾಸ್​​​​ ಸೀಸನ್​​ 12ರ ವಿಜೇತರು ಎಷ್ಟು ಮತಗಳನ್ನು ಪಡೆದುಕೊಳ್ಳಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಅಭಿನಯ ಚಕ್ರವರ್ತಿ ಸುದೀಪ್​​ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಸೀಸನ್​ 12 ಅಂತಿಮ ಘಟ್ಟ ತಲುಪಿದೆ. ಈ ಸೀಸನ್​​ನ ಎಲ್ಲಾ ಫೈನಲಿಸ್ಟ್​​ಗಳು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅದಾಗ್ಯೂ, ಗಿಲ್ಲಿ ನಟ ಟ್ರೆಂಡ್​ ಸೆಟ್ಟರ್, ಇದೊಂದು ಒನ್​ ಮ್ಯಾನ್​ ಶೋ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಕರುನಾಡಿನ ಮನೆಮಾತಾಗಿರುವ ಗಿಲ್ಲಿ ವಿಜೇಯರಾಗಲಿ ಎಂದು ಎಲ್ಲೆಡೆಯಿಂದ ಶುಭ ಹಾರೈಕೆಗಳು ವ್ಯಕ್ತವಾಗುತ್ತಿವೆ.

111 ದಿನಗಳ ಕಾರ್ಯಕ್ರಮಕ್ಕೆ 24 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. 6 ಮಂದಿ ಫೈನಲಿಸ್ಟ್​​ಗಳಾಗಿದ್ದಾರೆ. ಪ್ರೋಮೋ ಅನಾವರಣಗೊಳಿಸಿರುವ ತಂಡ, ”6 ಫೈನಲಿಸ್ಟ್ಸ್, 1 ವಿನ್ನರ್; ನೀವು ಪ್ರೀ ಫಿನಾಲೆಗೆ ರೆಡಿ ತಾನೇ? ಬಿಗ್ ಬಾಸ್, ಪ್ರೀ ಗ್ರಾಂಡ್ ಫಿನಾಲೆ, ಇಂದು ರಾತ್ರಿ 9”ಕ್ಕೆ ಎಂದು ಬರೆದುಕೊಂಡಿದೆ. ಈ ಪೋಸ್ಟ್​​ಗೆ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದು, ಗಿಲ್ಲಿ ವಿನ್ನರ್, ರಕ್ಷಿತಾ ರನ್ನರ್ ಎಂಬ ಅಭಿಪ್ರಾಯಗಳು ಹೆಚ್ಚಾಗಿ ವ್ಯಕ್ತವಾಗಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments