Sunday, June 7, 2026
Google search engine
Homeರಾಜ್ಯಲಕ್ಕುಂಡಿ ಕೋಟೆಯ ಗೋಡೆಯಲ್ಲಿ ಪುರಾತನ ಶಿವಲಿಂಗ ಪತ್ತೆ

ಲಕ್ಕುಂಡಿ ಕೋಟೆಯ ಗೋಡೆಯಲ್ಲಿ ಪುರಾತನ ಶಿವಲಿಂಗ ಪತ್ತೆ

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ವೇಳೆ ಕೋಟೆಯ ಗೋಡೆಯಲ್ಲಿ ಅಡಗಿದ್ದ ಪುರಾತನ ಕಾಲದ ಶಿವಲಿಂಗ ಪತ್ತೆಯಾಗಿದೆ.

ಎರಡನೇ ದಿನದ ಉತ್ಖನನ ವೇಳೆ ಶಿವಲಿಂಗದ ಮಾದರಿಯ ಅವಶೇಷ ಪತ್ತೆಯಾಗಿತ್ತು. ಆದರೆ ಇದನ್ನು ಹಾಗೆಯೇ ಬಿಟ್ಟಿದ್ದ ಅಧಿಕಾರಿಗಳು ಭಾನುವಾರ ಬೆಳಿಗ್ಗೆ ವಶಕ್ಕೆ ಪಡೆದಿದ್ದಾರೆ.

ಮೂರನೇ ದಿನದ ಉತ್ಖನನ ಭಾನುವಾರ ನಡೆದಿದ್ದು, ಜನತಾ ಶಿಕ್ಷಣ ಸಂಸ್ಥೆ ಕಟ್ಟಡ ತೆರವು ಮಾಡಲಾಯಿತು. ಈ ವೇಳೆ ಕೋಟೆಯ ಗೋಡೆಯಲ್ಲಿ ಅಡಗಿದ್ದ ಶಿವಲಿಂಗ ಪತ್ತೆಯಾಗಿದೆ. ಇದು ಹಿತ್ತಳೆಯದ್ದಾ.? ಕಂಚಿನದ್ದಾ? ತಾಮ್ರದ್ದಾ? ಅಥವಾ ಬೆಳ್ಳಿಯದ್ದಾ? ಯಾವ ಲೋಹದ್ದು ಎಂಬ ಕುತೂಹಲ ಮೂಡಿದೆ. ಪುರಾತತ್ವ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟಪಡಿಸಬೇಕಿದೆ.

ಮೊದಲು ಈ ಪ್ರದೇಶ ಸಪ್ತ ಗ್ರಾಮಗಳ ಅಗ್ರಹಾರವಾಗಿತ್ತು. ಈ ಅಗ್ರಹಾರ ಸೊಕಮನಕಟ್ಟಿ, ತಂಗಾಬೆಂಚಿ, ಜವಳಬೆಂಚಿ, ನರಸಿಪುರ, ಮೊಟಬಸಪ್ಪ, ಬೂದಿಬಸಪ್ಪ, ಲಕ್ಕುಂಡಿ ಗ್ರಾಮಗಳನ್ನು ಒಳಗೊಂಡಿತ್ತು.

ವಿಜಯನಗರ ಅರಸರ ಆಳಿಕ್ವೆ ಅಧಿಪತ್ಯದ ನಂತರ ೭ ಗ್ರಾಮದ ಜನರು ಲಕ್ಕುಂಡಿಗೆ ಬಂದು ನೆಲೆಸಿದರು. ಇಲ್ಲಿ ನಾಣ್ಯಗಳನ್ನು ತಯಾರಿಸುವ ಟಂಕಸಾಲೆಗಳಿದ್ದವು ಎಂಬ ಇತಿಹಾಸವಿದೆ. ಇತಿಹಾಸಕ್ಕೆ ಸಂಬಂಧಿಸಿದ ಪುರಾತನ ಕಾಲದ ಕಲ್ಲಿನ ವಿಗ್ರಹಗಳು, ಅವಶೇಷಗಳು, ಪುರಾವೆಗಳು ಲಕ್ಕುಂಡಿಯ ಅಲ್ಲಲ್ಲಿ ಸಿಗುತ್ತಿವೆ. ಅಷ್ಟೇ ಅಲ್ಲದೇ ಬೆಳ್ಳಿ, ಬಂಗಾರ, ಮುತ್ತು, ರತ್ನ, ಹವಳಗಳ ತುಣುಕುಗಳು ಅನೇಕ ವರ್ಷಗಳಿಂದ ಸಿಗುತ್ತಲೇ ಇವೆ ಎಂದು ಸ್ಥಳೀಯರು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments