Wednesday, June 24, 2026
Google search engine
Homeದೇಶಬಿಜೆಪಿ ಸಂಸದನ ಮೇಲೆ ಕಲ್ಲು ಎಸೆದ ಜನ: ತಲೆಗೆ ಗಂಭೀರ ಗಾಯ!

ಬಿಜೆಪಿ ಸಂಸದನ ಮೇಲೆ ಕಲ್ಲು ಎಸೆದ ಜನ: ತಲೆಗೆ ಗಂಭೀರ ಗಾಯ!

ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಸ್ಥಳೀಯರು ಕಲ್ಲುತೂರಾಟ ನಡೆಸಿದ್ದರಿಂದ ಬಿಜೆಪಿ ಸಂಸದನ ತಲೆಗೆ ಬಡಿದು ರಕ್ತಸ್ರಾವಗೊಂಡ ಘಟನೆ ಪಶ್ಚಿಮ ಬಂಗಳಾದ ಜಲ್ ಪಾಯಿ ಗುರಿಯಲ್ಲಿ ನಡೆದಿದೆ.

ಮಲ್ದಾನಾ ಉತ್ತರ್ ಕ್ಷೇತ್ರದ ಬಿಜೆಪಿ ಸಂಸದ ಖಾಗೇನ್ ಮರ್ಮು ಕಲ್ಲು ಬಡಿದು ತಲೆಗೆ ಗಂಭೀರ ಗಾಯವಾಗಿದೆ. ತೀವ್ರ ರಕ್ರಸ್ರಾವದಿಂದ ಅವರ ಬಿಳಿ ವಸ್ತ್ರ ಕೆಂಪುಬಣ್ಣಕ್ಕೆ ತಿರುಗಿದ್ದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಸಂಸದ ಮರ್ಮು, ಬಿಜೆಪಿ ಶಾಸಕ ಶಂಕರ್ ಘೋಷ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಪ್ರವಾಹದಿಂದ ತತ್ತರಿಸಿರುವ ಜಲಪಾಯಿ ಗುರಿ ಪ್ರದೇಶಕ್ಕೆ ಭೇಟಿ ಸಾಂತ್ವಾನಾ ಹೇಳಲು ಪ್ರಯತ್ನಿಸಿದ್ದರು. ಅಲ್ಲದೇ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿ ವಿತರಿಸಲು ಬಯಸಿದ್ದರು.

ಸ್ಥಳೀಯರ ಆಕ್ರೋಶದ ಹಿಂದೆ ರಾಜಕಾರಣ ಅಡಗಿದೆ ಎಂದು ಹೇಳಲಾಗಿದೆ. ಮುಂದಿನ ವರ್ಷ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಜೆಪಿ ಹಾಗೂ ಟಿಎಂಸಿ ನಡುವೆ ತಿಕ್ಕಾಟ ಮುಂದುವರಿದಿದೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments