Monday, June 8, 2026
Google search engine
Homeಮನರಂಜನೆಧುರಂಧರ್ ಮೊದಲ ವಾರದ ದಾಖಲೆ ಮುರಿದ ಬಾರ್ಡರ್-2!

ಧುರಂಧರ್ ಮೊದಲ ವಾರದ ದಾಖಲೆ ಮುರಿದ ಬಾರ್ಡರ್-2!

1997ರ ದಶಕದ ಯಶಸ್ವಿ ಚಿತ್ರ ಬಾರ್ಡರ್ ಸಿಕ್ವೆಲ್ ಚಿತ್ರವಾದ ಬಾರ್ಡರ್-2 ಬಾಲಿವುಡ್ ನಲ್ಲಿ ಹೊಸ ಅಲೆ ಸೃಷ್ಟಿಸುತ್ತಿದ್ದು, ಮೊದಲ ವಾರಾಂತ್ಯದ ಗಳಿಕೆಯಲ್ಲಿ ದುರಂದರ್ ದಾಖಲೆ ಮುರಿದಿದೆ.

ಸನ್ನಿ ಡಿಯೋಲ್, ಸುನೀಲ್​ ಶೆಟ್ಟಿ ಪುತ್ರ ಅಹಾನ್​ ಶೆಟ್ಟಿ, ವರುಣ್ ಧವನ್ ಸೇರಿದಂತೆ ಬಹುತಾರಾಗಣದ ಬಾರ್ಡರ್-2 ಚಿತ್ರ ಮೊದಲ ವಾರಾಂತ್ಯದಲ್ಲಿ 150 ಕೋಟಿ ರೂ. ಗಳಿಸಿದೆ. ಇದರಲ್ಲಿ ದೇಶದಲ್ಲೇ 121 ಕೋಟಿ ರೂ. ಗಳಿಸುವ ಮೂಲಕ ದುರಂದರ್ ದಾಖಲೆ ಮುರಿದಿದೆ.

ಬಿಡುಗಡೆ ಆದ ಮೊದಲ ದಿನವಾದ ಶುಕ್ರವಾರ 30 ಕೋಟಿ, ಶನಿವಾರ 36.5 ಕೋಟಿ ಹಾಗೂ ಭಾನುವಾರ 54.5 ಕೋಟಿ ರೂ. ಗಳಿಸುವ ಮೂಲಕ ದಿನದಿಂದ ದಿನಕ್ಕೆ ಗಳಿಕೆ ಹೆಚ್ಚಿಸಿಕೊಂಡು ಭಾರತದಲ್ಲಿ 121 ಕೋಟಿ ರೂ. ಸಂಪಾದಿಸಿದೆ.

ಬಾರ್ಡರ್-2 ಚಿತ್ರ ಸನ್ನಿ ಡಿಯೋಲ್ ವೃತ್ತಿಜೀವನದಲ್ಲೇ ಅತೀ ದೊಡ್ಡ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ದುರಂಧರ್ ಚಿತ್ರ ಮೊದಲ ವಾರಾಂತ್ಯದಲ್ಲಿ 103 ಕೋಟಿ ರೂ.ಗಳಿಸಿತ್ತು. ಪ್ರಸ್ತುತ ದುರಂದರ್ 1000 ಕೋಟಿ ರೂ. ಕ್ಲಬ್ ಸೇರಿದ್ದು, ಈ ದಾಖಲೆಯನ್ನು ಬಾರ್ಡರ್-2 ಮುರಿಯುವುದೇ ಎಂಬುದು ಕಾದು ನೋಡಬೇಕಾಗಿದೆ. ಗಣರಾಜ್ಯೋತ್ಸವ ಪ್ರಯುಕ್ತ ಸೋಮವಾರವೂ ರಜೆ ಇರುವುದರಿಂದ ಗಳಿಕೆ ಸೋಮವಾರವೂ ಸ್ಥಿರತೆ ಕಾಪಾಡಿಕೊಳ್ಳುವ ಸಾಧ್ಯತೆ ಇದೆ.

ಶುಕ್ರವಾರದಂದು ಹಲವು ಮಾರ್ನಿಂಗ್​ ಶೋಗಳು ರದ್ದಾದರೂ ಸಹ ಬಾರ್ಡರ್-2, 30 ಕೋಟಿ ರೂಪಾಯಿ ನಿವ್ವಳ ಆದಾಯ ಸಂಗ್ರಹಿಸಿತು. 2026ರ ಈ ಬಹುನಿರೀಕ್ಷಿತ ಚಿತ್ರವು ತನ್ನ ದೇಶಭಕ್ತಿಯ ವಿಷಯ ಮತ್ತು ಭರವಸೆಯ ತಾರಾಬಳಗದಿಂದ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

ನಿರೀಕ್ಷೆಯಂತೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರವನ್ನು ಇಷ್ಟಪಟ್ಟರು. ಯಶಸ್ವಿ ಚೊಚ್ಚಲ ಪ್ರದರ್ಶನಗಳ ನಂತರ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಕ್ಕೆ ಬಲವಾದ ಬೆಂಬಲ ವ್ಯಕ್ತವಾಯಿತು. ಅದರಂತೆ, ಶನಿವಾರದ ಆದಾಯವು 36.5 ಕೋಟಿ ರೂ.ಗಳಾಗಿತ್ತು. ಚಿತ್ರಕ್ಕೆ ಈ ಉನ್ನತ ಮಟ್ಟದ ಸಕಾರಾತ್ಮಕ ಪ್ರಚಾರವು ಭಾನುವಾರವೂ ಆದಾಯವನ್ನು ಹೆಚ್ಚಿಸಲು ಕಾರಣವಾಯಿತು.

ಬಾರ್ಡರ್ 2 ಚಿತ್ರವು 3ನೇ ದಿನದಂದು ಬರೋಬ್ಬರಿ 54.5 ಕೋಟಿ ರೂಪಾಯಿ ಕಲೆಕ್ಷನ್​​ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು. ಇದು ಶನಿವಾರಕ್ಕಿಂತ ಸುಮಾರು ಶೇ.50ರಷ್ಟು ಹೆಚ್ಚಾಗಿದೆ.

ಚಿತ್ರವು ತನ್ನ ಆರಂಭಿಕ ವಾರಾಂತ್ಯದಲ್ಲಿ ಭಾರತದಲ್ಲಿ 121 ಕೋಟಿ ರೂಪಾಯಿ ನೆಟ್​ ಕಲೆಕ್ಷನ್​​ ಮಾಡಿದೆ. 3 ದಿನಗಳ ಭಾರತದ ಒಟ್ಟು ಸಂಗ್ರಹವು (ಗ್ರಾಸ್​​ ಕಲೆಕ್ಷನ್​​) 142.5 ಕೋಟಿ ರೂಪಾಯಿಗಳಷ್ಟಿದೆ. ಸಾಗರೋತ್ತರ ಪ್ರದೇಶಗಳಲ್ಲೂ ಉತ್ತಮ ವ್ಯವಹಾರ ನಡೆದಿದ್ದು, ಮೊದಲ ವಾರಾಂತ್ಯದಲ್ಲಿ ಈ ಚಿತ್ರವು ಸುಮಾರು 16 ಕೋಟಿ ರೂಪಾಯಿ ಗ್ಲೋಬಲ್​ ಕಲೆಕ್ಷನ್​​ ಮಾಡಿದೆ. ಅಲ್ಲಿಗೆ ಬಾರ್ಡರ್​ 2 ಮೂರು ದಿನಗಳಲ್ಲಿ ವಿಶ್ವಾದ್ಯಂತ 158.5 ಕೋಟಿ ರೂಪಾಯಿಗೆ ತಲುಪಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments