Friday, May 15, 2026
Google search engine
Homeಕ್ರೀಡೆಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯಾಗೆ ನಾಲ್ವರು ಅರ್ಧಶತಕದ ಬಲ; ಬುಮ್ರಾ ಹೋರಾಟ!

ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯಾಗೆ ನಾಲ್ವರು ಅರ್ಧಶತಕದ ಬಲ; ಬುಮ್ರಾ ಹೋರಾಟ!

ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್ ಮನ್ ಗಳು ಸಿಡಿಸಿದ ಅರ್ಧಶತಗಳ ನೆರವಿನಿಂದ ಆಸ್ಟ್ರೇಲಿಯಾ ತಂಡ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಟೆಸ್ಟ್ ಪಂದ್ಯದ ಮೊದಲ ದಿನ ಮೇಲುಗೈ ಸಾಧಿಸಿದೆ.

ಮೆಲ್ಬೋರ್ನ್ ನಲ್ಲಿ ಬುಧವಾರ ಆರಂಭಗೊಂಡ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಆಸ್ಟ್ರೇಲಿಯಾ ತಂಡ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು 311 ರನ್ ಗಳಿಸಿದೆ.

5 ಪಂದ್ಯಗಳ ಸರಣಿಯಲ್ಲಿ 1-1ರಿಂದ ಉಭಯ ತಂಡಗಳು ಸಮಬಲ ಸಾಧಿಸಿದ್ದರಿಂದ ಈ ಪಂದ್ಯ ಮಹತ್ವದ್ದಾಗಿದ್ದು, ಆಸ್ಟ್ರೇಲಿಯಾ ತಂಡದಲ್ಲಿ ಪಾದರ್ಪಣೆ ಮಾಡಿದ ಸ್ಯಾಮ್ ಕೊನ್ಸಾಟ್ಸ್ ಮತ್ತು ಉಸ್ಮಾನ್ ಖ್ವಾಜಾ ಮೊದಲ ವಿಕೆಟ್ ಗೆ ೮೯ ರನ್ ಪೇರಿಸಿ ಉತ್ತಮ ಆರಂಭ ಒದಗಿಸಿದರು.

ಸ್ಯಾಮ್ ಕೊನ್ಸಾಟ್ಸ್ 65 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 60 ರನ್ ಬಾರಿಸಿ ಔಟಾದರೆ, ಉಸ್ಮಾನ್ ಖ್ವಾಜಾ 121 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ 57 ರನ್ ಗಳಿಸಿ ನಿರ್ಗಮಿಸಿದರು.

ನಂತರ ಮಾರ್ನೂಸ್ ಲ್ಯಾಂಬ್ಸ್ ಚೇಜ್ 145 ಎಸೆತಗಳಲ್ಲಿ 7 ಬೌಂಡರಿ ಸಹಾಯದಿಂದ 72 ರನ್ ಗಳಿಸಿ ಔಟಾದರೆ, ಸ್ಟೀವನ್ ಸ್ಮಿತ್ 111 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 72 ರನ್ ಬಾರಿಸಿ ವಿಕೆಟ್ ಉಳಿಸಿಕೊಂಡಿದ್ದಾರೆ. ಇವರಿಬ್ಬರು 3ನೇ ವಿಕೆಟ್ ಗೆ 83 ರನ್ ಜೊತೆಯಾಟ ನಿಭಾಯಿಸಿದರು. ಈ ಹಂತದಲ್ಲಿ ಭಾರತದ ಬೌಲರ್ ಗಳು ತಿರುಗೇಟು ನೀಡಿದರೂ ಅಲೆಕ್ಸ್ ಕ್ಯಾರಿ (31) ತಂಡವನ್ನು 300ರ ಗಡಿ ದಾಟಿಸಿದರು.

ಭಾರತದ ಪರ ಜಸ್ ಪ್ರೀತ್ ಬುಮ್ರಾ 3 ವಿಕೆಟ್ ಕಬಳಿಸಿದರೆ, ವಾಷಿಂಗ್ಟನ್ ಸುಂದರ್, ಆಕ್ಷ್ ದೀಪ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments