ಬೆಂಗಳೂರು: ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಅಧ್ಯಕ್ಷ ಬಿ.ವಿ. ನಾಯ್ಡು ಅವರಿಗೆ ‘2025–26 ಸಾಲಿನ ಜೀವಮಾನದ ಸಾಧನೆಯ ಐ ಇ ಎಸ್ ಎ ಸಾರಾಭಾಯ್ ಪ್ರಶಸ್ತಿ’ ನೀಡಿ ಸನ್ಮಾನಿಸಲಾಗಿದೆ. ಇದು ಇಂಡಿಯಾ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಶನ್ (ಐ ಇ ಎಸ್ ಎ) ವತಿಯಿಂದ ನೀಡಲಾಗುವ ಅತ್ಯುನ್ನತ ಗೌರವವಾಗಿದೆ.
ಮೂರು ದಶಕಗಳಿಗಿಂತ ಕಾಲ ನಾವೀನ್ಯತೆ, ಕೌಶಲ್ಯ ಅಭಿವೃದ್ಧಿ, ನೀತಿ ರೂಪಣೆ, ಕೈಗಾರಿಕಾ ವೃದ್ಧಿ ಹಾಗೂ ಜಾಗತಿಕ ವೇದಿಕೆಯಲ್ಲಿ ‘ಬ್ರ್ಯಾಂಡ್ ಇಂಡಿಯಾ’ಗೆ ಉತ್ತಮ ಸ್ಥಾನ ಸೃಜಿಸಲು ಶಕ್ತಿಶಾಲಿ ಇ ಎಸ್ ಡಿ ಎಂ ಪರಿಸರ ವ್ಯವಸ್ಥೆ ನಿರ್ಮಿಸುವಲ್ಲಿ ನಾಯ್ಡು ಅವರ ನೀಡಿದ ಮಹತ್ತರ ಕೊಡುಗೆಗಳನ್ನು ನ್ಯಾಯಸಮ್ಮತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಐ ಇ ಎಸ್ ಎ ವಿಷನ್ ಶೃಂಗಸಭೆ 2026 ಸಂದರ್ಭದಲ್ಲಿ ನಡೆಯಿತು. ಇತ್ತೀಚೆಗೆ ಬೆಂಗಳೂರಿನ ದ ಲೀಲಾ ಭಾರತಿಯಾ ಸಿಟಿಯಲ್ಲಿ ಭಾರತದ ಪ್ರಮುಖ ಕೈಗಾರಿಕಾ ನಾಯಕರು, ನೀತಿನಿರ್ಧಾರಕರು ಹಾಗೂ ತಂತ್ರಜ್ಞಾನ ದರ್ಶಿಗಳ ಸಮ್ಮುಖದಲ್ಲಿ ಈ ಸಮಾರಂಭ ಜರುಗಿತು.
ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಡಾ. ವಿಕ್ರಂ ಸಾರಾಭಾಯಿ ಅವರ ಗೌರವಾರ್ಥವಾಗಿ ಹೆಸರಿಸಲಾದ ‘ಐ ಇ ಎಸ್ ಎ ಸಾರಾಭಾಯಿ ಪ್ರಶಸ್ತಿ’ ಕೈಗಾರಿಕಾ ವಲಯದ ಅತ್ಯುನ್ನತ ಗೌರವಗಳಲ್ಲಿ ಒಂದಾಗಿದ್ದು, ಸಂಸ್ಥೆ ನಿರ್ಮಾಣದ ದೃಷ್ಟಿ ಹಾಗೂ ದೀರ್ಘಕಾಲೀನ ಪ್ರಭಾವದ ಮೂಲಕ ಜಾಗತಿಕ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಲ್ಲಿ ಭಾರತದ ಸ್ಥಾನವನ್ನು ಉತ್ತೇಜಿಸಿದ ನಾಯಕರನ್ನು ಸನ್ಮಾನಿಸುತ್ತದೆ. ಶ್ರೀ ಬಿ.ವಿ. ನಾಯ್ಡು ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿರುವುದು, ನಿಜಕ್ಕೂ ಒಂದು ರಾಷ್ಟ್ರದ ಡಿಜಿಟಲ್ ಭವಿಷ್ಯ ರೂಪಿಸಿದ ವೃತ್ತಿಜೀವನದ ಪ್ರತಿಫಲನವಾಗಿದೆ.
ಈ ಪ್ರಮಾಣೀಕರಣವು ಕರ್ನಾಟಕದ ತಂತ್ರಜ್ಞಾನ ನಾಯಕತ್ವವನ್ನು ರೂಪಿಸಲು ಒಟ್ಟಾಗಿ ಶ್ರಮಿಸಿದ ಅನೇಕ ನವೋದ್ಯಮಿಗಳು, ಉದ್ಯಮಿಗಳು, ನೀತಿನಿರ್ಧಾರಕರು ಹಾಗೂ ಪರಿಸರ ವ್ಯವಸ್ಥೆ ನಿರ್ಮಾತೃಗಳಿಗೆ ಸೇರಿದೆ. ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ತಂತ್ರಜ್ಞಾನ ಸಮೂಹಗಳು ನಿರ್ಮಿಸುವುದು, ರಾಜ್ಯದಾದ್ಯಂತ ಡಿಜಿಟಲ್ ಸಾಮರ್ಥ್ಯಗಳನ್ನು ಬಲಪಡಿಸುವುದು ಮತ್ತು ಕರ್ನಾಟಕವು ಭಾರತದ ನವೀನತೆಯಾಧಾರಿತ ಬೆಳವಣಿಗೆಯ ಮುಂಚೂಣಿಯಲ್ಲಿ ಮುಂದುವರಿಯುವಂತೆ ಖಚಿತಪಡಿಸುವುದು ನಮ್ಮ ಸಮೂಹದ ಮಿಷನ್ ಆಗಿದೆ. ಭಾರತದ ಡಿಜಿಟಲ್ ಭವಿಷ್ಯ ನಿರ್ಧರಿಸುವ ಮುಂದಿನ ತಲೆಮಾರಿನ ಉದ್ಯಮಿಗಳು, ಇಂಜಿನಿಯರ್‌ಗಳು ಮತ್ತು ಸಂಸ್ಥೆಗಳನ್ನು ಬೆಂಬಲಿಸಲು ನಾನು ಬದ್ಧನಾಗಿದ್ದೇನೆ,” ಎಂದು ಕೆಡಿಇಎಂ ಮುಖ್ಯಸ್ಥ ಬಿ.ವಿ. ನಾಯ್ಡು ಮುಕ್ತವಾಗಿ ಹೇಳಿದರು.
ನಾಯ್ಡು ಅವರು ಕೇವಲ ಭಾರತದ ಡಿಜಿಟಲ್ ಪರಿವರ್ತನೆಯ ಸಾಕ್ಷಿಯಾಗಿರಲಿಲ್ಲ; ಅದನ್ನು ರೂಪಿಸಿದ ಶಿಲ್ಪಿಯಾಗಿದ್ದರು. ಸಂಸ್ಥಾತ್ಮಕ ಚೌಕಟ್ಟುಗಳನ್ನು ಬಲಪಡಿಸುವುದರಿಂದ ಹಿಡಿದು ಉದ್ಯಮ-ಸರ್ಕಾರ ಸಹಕಾರವನ್ನು ಮತ್ತಷ್ಟು ಬಲಗೊಳಿಸುವವರೆಗೆ, ಅವರ ಕೆಲಸವು ದೇಶದಲ್ಲಿ ವಿನ್ಯಾಸಾಧಾರಿತ ನವೀನತೆ ಮತ್ತು ಉತ್ಪಾದನಾ ವೃದ್ಧಿಗೆ ದೃಢ ಅಡಿಪಾಯವನ್ನು ನಿರ್ಮಿಸಲು ಸಹಾಯ ಮಾಡಿದೆ. ಇ ಎಸ್ ಡಿ ಎಂ ಕ್ಷೇತ್ರದ ಮತ್ತು ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ನೀತಿಗೆ ಅವರ ಕೊಡುಗೆಗಳು, ಅನೇಕ ತಲೆಮಾರುಗಳ ನವೋದ್ಯಮಿಗಳು ಕಟ್ಟಿಕೊಳ್ಳುವಂತಹ ದೃಢವಾದ ಅಡಿಪಾಯ ಹಾಕಿವೆ. ನಾಯ್ಡು ಅವರೊಂದಿಗೆ ಸಂಬಂಧ ಹೊಂದಿರುವುದಕ್ಕೆ ಐ ಇ ಎಸ್ ಎ ಗೆ ಹೆಮ್ಮೆ ಇದೆ ಮತ್ತು ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನಿಸುವುದು ನಮಗೆ ಗೌರವದ ಸಂಗತಿ, ಇದು ಅವರ ಪರಂಪರೆಯ ಸಂಭ್ರಮವಾಗಿರುವುದರ ಜೊತೆಗೆ ಮುಂದಿನ ಪಯಣಕ್ಕೆ ಪ್ರೇರಣೆ ಆಗಿದೆ,” ಎಂದು ಐಇಎಸ್ಎ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ್ ಚಂದಕ್ ಮೆಚ್ಚುಗೆಯ ಮಾತುಗಳಾಡಿದರು.
“ಐ ಇ ಎಸ್ ಎ ಸಾರಾಭಾಯಿ ಪ್ರಶಸ್ತಿಯನ್ನು ಪಡೆದ ಬಿ.ವಿ. ನಾಯ್ಡು ಅವರಿಗೆ ಇಡೀ ಕೆ ಡಿ ಇ ಎಂ ಕುಟುಂಬದ ಪರವಾಗಿ, ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ಈ ಗೌರವ ಅವರಿಗೆ ದೊರಕಿರುವುದು ಅತ್ಯಂತ ಸಮರ್ಪಕವಾಗಿದೆ. ಅವರೊಂದಿಗೆ ಕೆಲಸ ಮಾಡುವುದು ನನ್ನ ವೃತ್ತಿಪರ ಪ್ರಯಾಣದ ಅತ್ಯಂತ ದೊಡ್ಡ ಸವಲತ್ತುಗಳಲ್ಲಿ ಒಂದಾಗಿದೆ. ನಾಯ್ಡು ಅವರು ಸರಳವಾಗಿ ಮುನ್ನಡೆಸುವುದಿಲ್ಲ, ಅವರು ತಮ್ಮ ಸುತ್ತಲಿನ ಎಲ್ಲರನ್ನೂ ಉತ್ತೇಜಿಸಿ ಮತ್ತಷ್ಟು ಉನ್ನತ ಮಟ್ಟಕ್ಕೆ ತರುತ್ತಾರೆ. ಮಾರ್ಗದರ್ಶಕ ಮತ್ತು ಸಂಸ್ಥೆ ನಿರ್ಮಾಪಕರಾಗಿ ಅವರು ಉದ್ಯಮ ವಲಯ ಮತ್ತು ನೀತಿ ರೂಪಕರನ್ನು ಸೇವಾಧಾರಿತ ವಿಸ್ತರಣೆ ಅಷ್ಟೇ ಅಲ್ಲದೇ, ವಿನ್ಯಾಸ ಸ್ವಾಮ್ಯತೆ, ಉತ್ಪಾದನಾ ಆಳತೆ, ಪ್ರತಿಭೆಯ ವಿಸ್ತರಣೆ, ತಂತ್ರಜ್ಞಾನ ಕ್ಲಸ್ಟರ್ ಗಳ ಅಭಿವೃದ್ಧಿ ಮತ್ತು ಜಾಗತಿಕ
ಸ್ಪರ್ಧಾತ್ಮಕತೆಯ ಕಡೆಗೆ ಸಾಗಲು ನಿರಂತರವಾಗಿ ಪ್ರೋತ್ಸಾಹಿಸಿದ್ದಾರೆ. ಕೆ ಡಿ ಇ ಎಂ ನಲ್ಲಿ ನಾವು ಆಚರಿಸುವ ಪ್ರತಿಯೊಂದು ಮೈಲಿಗಲ್ಲಿನ ಮೇಲೂ ಅವರ ಛಾಪು ಇದೆ, ಅವರ ಕಾರ್ಯತಂತ್ರದ ಸ್ಪಷ್ಟತೆ, ಬೆಂಗಳೂರನ್ನು ಮೀರಿ ಕರ್ನಾಟಕದ ಸಾಮರ್ಥ್ಯದ ಮೇಲೆ ಇರುವ ಅಚಲ ನಂಬಿಕೆ, ಮತ್ತು ಮುಂದಿನ ಪೀಳಿಗೆಯ ತಂತ್ರಜ್ಞಾನ ನಾಯಕರನ್ನು ಉತ್ತೇಜಿಸಲು ಅವರು ತೋರಿಸಿರುವ ದಣಿವರಿಯದ ಪ್ರಯತ್ನ. ಈ ಪ್ರಶಸ್ತಿಯು ಭಾರತದ ಡಿಜಿಟಲ್ ಭವಿಷ್ಯವನ್ನು ರೂಪಿಸುವ ದೃಷ್ಟಿಕೋನವನ್ನು ಗೌರವಿಸುತ್ತದೆ” ಎಂದು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ್ ಗುಪ್ತಾ ಹೇಳಿದರು.
ಐಇಎಸ್ ಎ ಸಾರಾಭಾಯಿ ಪ್ರಶಸ್ತಿ, ಬಿ.ವಿ. ನಾಯ್ಡು ಅವರಿಗೆ ಲಭಿಸಿರುವ ಗೌರವಗಳ ಸರಣಿಗೆ ಮತ್ತೊಂದು ಮೌಲ್ಯಯುತ ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಟೈ (ಟಿಐಇ) ‘ಸ್ಪಿರಿಟ್ ಆಫ್ ಎಂಟ್ರಪ್ರಿನರ್‌ಶಿಪ್’ ಪ್ರಶಸ್ತಿ, ನಾಸ್ಕಾಂ “ಪಯೋನಿಯರ್ ಪರ್ಸನ್ಸ್” ಪ್ರಶಸ್ತಿ ಲಭಿಸಿದ್ದವು.
ಇತ್ತೀಚೆಗೆ, 2025ರ ಬೆಂಗಳೂರು ತಂತ್ರಜ್ಞಾನ ಶೃಗಸಭೆಯಲ್ಲಿ ಕರ್ನಾಟಕವನ್ನು ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮುನ್ನಡೆಸುವಲ್ಲಿ ದಶಕಗಳ ಕಾಲ ನೀಡಿದ ಅವರ ನಾಯಕತ್ವವನ್ನು ಗೌರವಿಸಿ ಪ್ರಥಮ ‘ಪ್ರಥಮ ಎಸ್.ಟಿ.ಪಿ.ಐ ಪ್ರಶಂಸಾ ಪ್ರಶಸ್ತಿ ಕೂಡ ಪಡೆದಿದ್ದಾರೆ. ಪ್ರತಿಯೊಂದು ಗೌರವವೂ ಶ್ರೀಯುತ ನಾಯ್ಡು ಅವರು ಅಪರೂಪದ ನಾಯಕರಲ್ಲಿ ಒಬ್ಬರು ಎಂಬುದನ್ನು ಮತ್ತಷ್ಟು ದೃಢಪಡಿಸುತ್ತದೆ, ಕ್ಷಣಿಕ ಸಾಧನೆಗಳನ್ನು ಮೀರಿ, ಒಂದು ಯುಗವನ್ನು ನಿರ್ಧರಿಸುವಂತಹ ಕೊಡುಗೆಗಳನ್ನು ನೀಡಿದ ನಾಯಕರು ಎಂಬ ಸ್ಥಾನಮಾನವನ್ನು ಅವರಿಗೆ ಒದಗಿಸುತ್ತದೆ.



