Monday, June 29, 2026
Google search engine
Homeದೇಶವಾರಸುದಾರರಿಲ್ಲದ 78,000 ಕೋಟಿ ವಿಲೇವಾರಿಗೆ ಕೇಂದ್ರ ಸರ್ಕಾರ ಬ್ಯಾಂಕ್ ಗಳಿಗೆ ಸೂಚನೆ

ವಾರಸುದಾರರಿಲ್ಲದ 78,000 ಕೋಟಿ ವಿಲೇವಾರಿಗೆ ಕೇಂದ್ರ ಸರ್ಕಾರ ಬ್ಯಾಂಕ್ ಗಳಿಗೆ ಸೂಚನೆ

ನವದೆಹಲಿ: ವಾರಸುದಾರರೇ ಇಲ್ಲದ ದೇಶದ ಬ್ಯಾಂಕುಗಳು, ವಿಮಾದಾರರು, ಮ್ಯೂಚುವಲ್ ಫಂಡ್‌ಗಳು ಮತ್ತು ಪಿಂಚಣಿ ಖಾತೆಗಳಲ್ಲಿ ಕೊಳೆಯುತ್ತಿರುವ 78 ಸಾವಿರ ಕೋಟಿ ರೂ. ವಿಲೇವಾರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಭಾರತ-ಪಾಕಿಸ್ತಾನ ಸಂಘರ್ಷದ ನಂತರ ಸೈಬರ್ ದಾಳಿಗಳು ಹೆಚ್ಚಾದ ಹಿನ್ನೆಲೆಯಲ್ಲಿ ವಾರಸುದಾರರು ಕ್ಲೈಮ್‌ ಮಾಡದೆ ಅನಾಥವಾಗಿರುವ ಠೇವಣಿಗಳ ಹಂಚಿಕೆಗೆ ಸರ್ಕಾರ ಆದ್ಯತೆ ನೀಡಲು ಮುಂದಾಗಿದೆ.

ಕ್ಲೈಮ್‌ ಮಾಡದ ಹಣವನ್ನು ತ್ವರಿತವಾಗಿ ಹಿಂದಿರುಗಿಸುವಂತೆ ಹಣಕಾಸು ನಿಯಂತ್ರಕ ಸಂಸ್ಥೆಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯಲ್ಲಿ ನಡೆದ ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಮಾರುಕಟ್ಟೆ ನಿಯಂತ್ರಣ ಮಂಡಳಿಮುಖ್ಯಸ್ಥ ತುಹಿನ್ ಕಾಂತ ಪಾಂಡೆ ಮತ್ತು ಸಚಿವಾಲಯದ ಅಧಿಕಾರಿಗಳು ಭಾಗವಹಿಸಿ ದ್ದರು. ಬ್ಯಾಂಕು ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಅನಾಥವಾಗಿರುವ ಠೇವಣಿಗಳನ್ನು ಸೂಕ್ತ ವಾರಸುದಾರರಿಗೆ ಅಥವಾ ಉತ್ತರಾಧಿಕಾರಿಗಳನ್ನು ಸುಪ್ತ ನಿಧಿಯೊಂದಿಗೆ ಮರುಸಂಪರ್ಕಿಸುವ ಸಂಘಟಿತ ವಿಧಾನವನ್ನು ಅನುಸರಿಸುವಂತೆ ಸಚಿವೆ ಸೂಚಿಸಿದರು.

ಹಳೆಯ ಸಂಪರ್ಕ ವಿವರಗಳು, ಅಪೂರ್ಣ ದಾಖಲೆಗಳು ಅಥವಾ ವರದಿಯಾಗದ ಸಾವುಗಳಿಂದಾಗಿ ಮಾರ್ಚ್ 2024 ರ ಹೊತ್ತಿಗೆ ಕ್ಲೈಮ್‌ ಪಡೆಯದ ಬ್ಯಾಂಕ್ ಠೇವಣಿಗಳು 78,213 ಕೋಟಿ ರೂಪಾಯಿ ತಲುಪಿದ್ದು, ಹಿಂದಿನ ವರ್ಷಕ್ಕಿಂತ ಶೇಕಡಾ 26ರಷ್ಟು ಹೆಚ್ಚಾಗಿದೆ. ಅಪೂರ್ಣ ನಾಮಿನಿ ವಿವರಗಳು ಅಥವಾ ಅರಿವಿನ ಕೊರತೆಯಿಂದಾಗಿ ಹಲವಾರು ಡಿಮ್ಯಾಟ್ ಖಾತೆಗಳು ಮತ್ತು ಮ್ಯೂಚುಯಲ್ ಫಂಡ್ ಘಟಕಗಳು ಬಳಕೆ ಆಗದೆ ಉಳಿದಿವೆ.

ಲೆಕ್ಕಪರಿಶೋಧಕ ಸೇವೆಗಳ ಲಭ್ಯತೆ ಮತ್ತು ವ್ಯಾಪ್ತಿ ಎರಡನ್ನೂ ವಿಸ್ತರಿಸುವುದರ ಜೊತೆಗೆ ಹಣಕಾಸು ಒಳಗೊಳ್ಳುವಿಕೆಯನ್ನು ಸುಧಾರಿಸುವ ಮತ್ತು ಕ್ಲೈಮ್‌ ಮಾಡದ ಸ್ವತ್ತುಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮಕ್ಕೆ ಮಂಡಳಿಯು ಗಮನ ಹರಿಸಿದೆ. ವಿಶೇಷವಾಗಿ ಅನಿವಾಸಿ ಭಾರತೀಯರು, ಪಿಐಒಗಳು ಮತ್ತು ಒಸಿಐಗಳಿಗೆ ಆಸ್ತಿ ಮರುಪಡೆಯುವಿಕೆ ಪ್ರಕ್ರಿಯೆ ಯನ್ನು ಸರಳೀಕರಿಸಬೇಕು ಎಂದು ಸಚಿವೆ ಸೂಚನೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments