Saturday, May 16, 2026
Google search engine
Homeಮನರಂಜನೆಸತತ 16 ಫ್ಲಾಪ್ ನಂತರ ಹಿಟ್ ಚಿತ್ರ ನೀಡಿದ ಅಕ್ಷಯ್ ಕುಮಾರ್: 17 ನಟರಿಗೂ ಪಾಲು!

ಸತತ 16 ಫ್ಲಾಪ್ ನಂತರ ಹಿಟ್ ಚಿತ್ರ ನೀಡಿದ ಅಕ್ಷಯ್ ಕುಮಾರ್: 17 ನಟರಿಗೂ ಪಾಲು!

ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಸತತ 16 ಫ್ಲಾಪ್ ಚಿತ್ರಗಳ ನಂತರ ಮೊದಲ ಬಾರಿ ಹಿಟ್ ಚಿತ್ರ ನೀಡಿದ್ದಾರೆ. ಆದರೆ ಈ ಚಿತ್ರದ ಯಶಸ್ಸಿನಲ್ಲಿ 17 ಸ್ಟಾರ್ ನಟ-ನಟಿಯರು ಪಾಲು ಪಡೆದಿದ್ದಾರೆ!

ಹೌದು, ಹೌಸ್ ಫುಲ್-5 ಚಿತ್ರ ಬಿಡುಗಡೆ ಆದ ನಾಲ್ಕೇ ದಿನದಲ್ಲಿ ಭಾರತದಲ್ಲಿ 100 ಕೋಟಿ ರೂ. ಕ್ಲಬ್ ಸೇರಿದೆ. ಮೂಲಗಳ ಪ್ರಕಾರ ಚಿತ್ರ 200 ಕೋಟಿ ರೂ. ಗಳಿಸಿದ್ದು, ಒಟ್ಟಾರೆ 300 ಕೋಟಿ ರೂ. ದಾಟಿದೆ ಎಂದು ಹೇಳಲಾಗಿದೆ. ಈ ಮೂಲಕ ಹಿಟ್ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಿದೆ.

ಹೌಸ್ ಫುಲ್ -5 ಚಿತ್ರವನ್ನು ತರುಣ್ ಮನ್ಸೂಖಾನಿ ನಿರ್ದೇಶಿಸಿದ್ದು, ಸಾಜಿದ್ ನಡಿಯವಾಲಾ ಸಂಸ್ಥೆ ನಿರ್ಮಿಸಿದೆ. ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಜಾಕಿಶ್ರಫ್, ಜಾಕ್ವೆಲಿನ್ ಫೆರ್ನಾಂಡೀಸ್, ನರ್ಗಿಸ್ ಫರ್ಕಿ, ಸಂಜಯ್ ದತ್, ನಾನಾ ಪಟೇಕರ್, ರಿತೇಶ್ ದೇಶ್ ಮುಖ್, ಫರ್ದಿನ್ ಖಾನ್ ಸೇರಿದಂತೆ 18 ಖ್ಯಾತ ನಟ-ನಟಿಯರ ದೊಡ್ಡ ಗುಂಪೇ ಇದೆ.

ಹೌಸ್ ಫುಲ್ ಚಿತ್ರದಲ್ಲಿ ಎರಡು ಕ್ಲೈಮ್ಯಾಕ್ಸ್ ಗಳಿದ್ದು,  (ಹೌಸ್ ಫುಲ್-ಎ ಮತ್ತು ಹೌಸ್ ಫುಲ್-ಬಿ) ಜನರು ಎರಡೂ ಕ್ಲೈಮ್ಯಾಕ್ಸ್ ಗಳನ್ನು ಇಷ್ಟಪಟ್ಟಿದ್ದಾರೆ. ಸಿನಿಮಾವನ್ನು 300 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಿಸಲಾಗಿದೆ.

ಅಕ್ಷಯ್ ಕುಮಾರ್ ಸತತ 16 ಫ್ಲಾಪ್ ನಂತರ ಮೊದಲ ಬಾರಿ ಹಿಟ್ ಸಿನಿಮಾದಲ್ಲಿ ನಟಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನಟಿಸಿದ್ದ ಸೂರ್ಯವಂಶಿ ನಂತರ ಇದೇ ಮೊದಲ ಬಾರಿ ಅವರ ಸಿನಿಮಾ 100 ಕೋಟಿ ರೂ. ಕ್ಲಬ್ ಸೇರಿದೆ. ಸೂರ್ಯವಂಶಿ ಚಿತ್ರ 100 ಕೋಟಿ ರೂ. ಕ್ಲಬ್ ಸೇರುವ ಮೂಲಕ ಸಕ್ಸಸ್ ಆಗಿದ್ದರೂ ದೊಡ್ಡ ಮಟ್ಟದಲ್ಲಿ ಹಿಟ್ ಆಗಿರಲಿಲ್ಲ.

ಇದೇ ವರ್ಷ ಬಿಡುಗಡೆ ಆಗಿದ್ದ ಕೇಸರಿ-2 ಮತ್ತು ಸ್ಕೈ ಫೋರ್ಸ್ ಚಿತ್ರಗಳು 100ರ ಗಡಿ ಸಮೀಪ ಬಂದು ಮುಗ್ಗರಿಸಿದ್ದವು. ಸ್ಕೈಫೋರ್ಸ್ ಚಿತ್ರ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಒಟ್ಟಾರೆ 142 ಕೋಟಿ ರೂ. ಗಳಿಸಿತ್ತು. ಕೇಸರಿಯ ಚಿತ್ರ 150-160 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, 120 ಕೋಟಿ ರೂ. ಮಾತ್ರ ಗಳಿಸಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments