Tuesday, 17 November 2026 — Kannadavahini
BREAKING NEWS
ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ
ತಂತ್ರಜ್ಞಾನ

ಏರ್‌ ಟೆಲ್ ನಿಂದ ಜಗತ್ತಿನ ಮೊದಲ ನಕಲಿ ಜಾಲತಾಣ ಪತ್ತೆ ತಂತ್ರಜ್ಞಾನ ಆವಿಷ್ಕಾರ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 20 ವೀಕ್ಷಣೆಗಳು
airtel
airtel

ನವದೆಹಲಿ: ಏರ್‌ಟೆಲ್ ಇಂದು ವಾಟ್ಸಾಪ್, ಟೆಲಿಗ್ರಾಮ್, ಫೇಸ್ಬುಕ್, ಇನಸ್ಟಾಗ್ರಾಮ್, ಎಸ್ಎಂಎಸ್ ರೀತಿಯ ಓಟಿಟಿಗಳು, ಇಮೇಲ್ ಗಳು, ಬ್ರೌಸರ್ ಸೇರಿದಂತೆ ವೇದಿಕೆಗಳು ಮತ್ತು ಓವರ್-ದಿ-ಟಾಪ್(ಓಟಿಟಿ) ಆಪ್ಸ್ ಮತ್ತು ಎಲ್ಲಾ ಸಂವಹನ ವೇದಿಕೆಗಳಾದ್ಯಂತ ರಿಯಲ್ ಟೈಮ್ ನಲ್ಲಿ ನಕಲಿ ಮತ್ತು ಮೋಸದ ಜಾಲತಾಣಗಳನ್ನು ಪತ್ತೆಮಾಡುವ ಮತ್ತು ನಿರ್ಬಂಧಿಸುವ ನವೀನ ತಂತ್ರಜ್ಞಾನ ಪರಿಹಾರ ಪರಿಚಯಿಸುತ್ತಿದೆ.

ಈ ಸುರಕ್ಷಿತ ಸೇವೆಯನ್ನು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಎಲ್ಲಾ ಏರ್‌ಟೆಲ್ ಮೊಬೈಲ್ ಮತ್ತು ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಸಾಟಿಯಿಲ್ಲದೆ ಸಂಯೋಜಿಸಿ, ಸ್ವಯಂ-ಸಕ್ರಿಯಗೊಳಿಸಲಾಗುತ್ತದೆ. ಏರ್‌ಟೆಲ್ ನ ಸುಧಾರಿತ ಭದ್ರತಾ ವ್ಯವಸ್ಥೆಯ ಮೂಲಕ ಮೋಸ ಅಥವಾ ನಕಲಿ ಎಂದು ಗುರುತಿಸಲ್ಪಟ್ಟ ಜಾಲತಾಣವನ್ನು ಒಬ್ಬ ಗ್ರಾಹಕನು ಪ್ರವೇಶಿಸಲು ಬಯಸಿದರೆ, ಪುಟ ಲೋಡ್ ಆಗುವುದು ನಿರ್ಬಂಧವಾಗುತ್ತದೆ ಮತ್ತು ನಿರ್ಬಂಧದ ಕಾರಣವನ್ನು ವಿವರಿಸುವ ಪುಟಕ್ಕೆ ಗ್ರಾಹಕರನ್ನು ನಿರ್ದೇಶಿಸಲಾಗುತ್ತದೆ.

ಡಿಜಿಟಲ್ ವೇದಿಕೆಗಳು ದೇಶಾದ್ಯಂತ ಹೆಚ್ಚು ಸರ್ವತ್ರವಾಗಿರುತ್ತಿರುವುದರಿಂದ ಪ್ರತಿ ದಿನ ಆನ್ಲೈನ್ ವಂಚನೆಯ ಬೆದರಿಕೆ ಹೆಚ್ಚಾಗುತ್ತಿದೆ ಮತ್ತು ಗ್ರಾಹಕರಿಗೆ ಗಂಭೀರ ಅಪಾಯವನ್ನು ಒಡ್ಡುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಅಂತಹ ಬೆದರಿಕೆಗಳಲ್ಲಿ ಆತಂಕಕಾರಿ ಏರಿಕೆ ಕಂಡುಬಂದಿದೆ. ವಂಚನೆಯ ಸ್ಕೀಮ್ ಗಳು ಒಟಿಪಿ ವಂಚನೆಗಳು ಮತ್ತು ಮೋಸದ ಕರೆಗಳನ್ನು ಮೀರಿ ಬೆಳೆದು ನಿಂತಿವೆ, ಈ ಮೂಲಕ ವಂಚನೆಯ ಆನ್ಲೈನ್ ಸ್ಕೀಮ್ ಗಳಿಗೆ ಸಹಸ್ರಾರು ಜನರು ಬಲಿಪಶುಗಳಾಗಿರುವುದನ್ನು ಇತ್ತೀಚಿನ ವರದಿಗಳಲ್ಲಿ ಕಾಣಬಹುದು.

ಈ ಸಮಸ್ಯೆಯ ಆಳವನ್ನು ಗುರುತಿಸಿ, ಏರ್‌ಟೆಲ್ ಒಂದು ಎಐ-ಚಾಲಿತ, ಬಹು-ಹಂತವುಳ್ಳ ಬುದ್ದಿವಂತಿಕೆ ವೇದಿಕೆಯನ್ನು ಅಳವಡಿಸಿದ್ದು, ಇದು ಮೋಸ ಮತ್ತು ವಂಚನೆಯ ಸಮಗ್ರ ಜಾಲದಿಂದ ಗ್ರಾಹಕರನ್ನು ಸುರಕ್ಷಿತವಾಗಿಡುತ್ತದೆ. ಇದು ಸಾಧನಗಳಾದ್ಯಂತ ಲಿಂಕ್ ಬ್ಲಾಕ್ ಮಾಡುವುದು ಮತ್ತು ಎಲ್ಲಾ ವೇದಿಕೆಗಳಾದ್ಯಂತ ಡೊಮೇನ್ ಫಿಲ್ಟರ್ ಮಾಡುವ ಮೂಲಕ ಅತ್ಯಾಧುನಿಕ ಬೆದರಿಕೆ ಪತ್ತೆಹಚ್ಚುವಿಕೆ ವೇದಿಕೆಯನ್ನು ಪರಿಚಯಿಸುವ ಉದ್ದೇಶವನ್ನು ಹೊಂದಿದೆ.

ಈ ಉಪಕ್ರಮದ ಬಗ್ಗೆ ಮಾತಾಡಿದ ಭಾರತಿ ಏರ್‌ಟೆಲ್ ನ ಉಪಾಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಗೋಪಾಲ್ ವಿಠ್ಠಲ್ ಅವರು, “ಕಳೆದ ಕೆಲವು ವರ್ಷಗಳಿಂದ, ಅಪರಾಧಿಗಳು ಅನೇಕ ಗ್ರಾಹಕರ ಕಷ್ಟಪಟ್ಟ ಹಣವನ್ನು ಅವರಿಗೆ ತಿಳಿಯದಂತೆಯೇ ಲಪಟಾಯಿಸಿರುವುದನ್ನು ನಾವು ನೋಡಿದ್ದೇವೆ. ನಮ್ಮ ಫ್ರಾಡ್ ಡಿಟೆಕ್ಷನ್ ಸೊಲ್ಯೂಷನ್ ನ ಪರಿಚಯದ ಮೂಲಕ ನಮ್ಮ ಇಂಜಿನಿಯರುಗಳು ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಮಾಡಿದ್ದಾರೆ.

ಗ್ರಾಹಕರು ಮೋಸಕ್ಕೆ ಬಲಿಯಾಗುವ ಚಿಂತೆಯನ್ನು ಬಿಟ್ಟು ಇಂಟರ್ನೆಟ್ ಬ್ರೌಸ್ ಮಾಡುವಾಗ ಇದು ಸಂಪೂರ್ಣ ನೆಮ್ಮದಿ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ. ನಮ್ಮ ಎಐ ಆಧಾರಿತ ಸಾಧನವು ಇಂಟರ್ನೆಟ್ ದಟ್ಟಣೆಯನ್ನು ತಪಾಸಣೆ ಮಾಡುತ್ತದೆ, ಜಾಗತಿಕ ರೆಪೊಸಿಟರಿಗಳೊಂದಿಗೆ ಮತ್ತು ರಿಯಲ್ ಟೈಮ್ ನಲ್ಲಿ ಬೆದರಿಕೆ ಪಾತ್ರಧಾರಿಗಳ ನಮ್ಮ ಸ್ವಂತದ ಡೇಟಾಬೇಸ್ ಪರಿಶೀಲಿಸುತ್ತದೆ ಮತ್ತು ವಂಚನೆಯ ಜಾಲತಾಣಗಳನ್ನು ನಿರ್ಬಂಧಿಸುತ್ತದೆ.

ಈ ಸೊಲ್ಯೂಷನ್ 6 ತಿಂಗಳ ಪ್ರಾಯೋಗಿಕ ಸಮಯದಲ್ಲಿ ಗಮನಾರ್ಹ ಮಟ್ಟದ ನಿಖರತೆಯನ್ನು ಈಗಾಗಲೇ ತಲುಪಿದೆ. ನಮ್ಮ ನೆಟ್‌ವರ್ಕ್‌ಗಳನ್ನು ಸ್ಪ್ಯಾಮ್ ಮತ್ತು ಹಗರಣಗಳಿಂದ ಸಂಪೂರ್ಣವಾಗಿ ಸುರಕ್ಷಿತಗೊಳಿಸುವವರೆಗೆ ನಾವು ಅವಿರತವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದರು.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8422 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment