Wednesday, 18 November 2026 — Kannadavahini
BREAKING NEWS
ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು
ವಾಣಿಜ್ಯ

ವಿಪ್ರೋ ಬ್ರಾಹ್ಮಿನ್ಸ್ ನಿಂದ 6 ವಿಧದ ಸಿರಿಧಾನ್ಯ ಶ್ರೇಣಿ ಬಿಡುಗಡೆ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
3 ನಿಮಿಷ ಓದು 429 ವೀಕ್ಷಣೆಗಳು
brahmins

ಕೇರಳ: ವಿಪ್ರೋ ಕನ್ಸೂಮರ್ ಕೇರ್ ಅಂಡ್ ಲೈಟಿಂಗ್‌ ನ ಆಹಾರ ವ್ಯವಹಾರದ ಭಾಗವಾಗಿರುವ ವಿಪ್ರೋ ಬ್ರಾಹ್ಮಿನ್ಸ್, ದಿನಸಿ ವಿಭಾಗದಲ್ಲಿ ತನ್ನ ಮಾರುಕಟ್ಟೆ ವಿಸ್ತರಣೆಯ ಅಂಗವಾಗಿ ಬ್ರಾಹ್ಮಿನ್ಸ್ ಸಿರಿಧಾನ್ಯ ಶ್ರೇಣಿ ಬಿಡುಗಡೆ ಮಾಡಿದೆ. ಆರೋಗ್ಯಕರ ಮತ್ತು ವಿವೇಚನಾಯುಕ್ತ ಆಹಾರದ ಆಯ್ಕೆಗಳ ಬಗ್ಗೆ ಗ್ರಾಹಕರಲ್ಲಿ ಹೆಚ್ಚುತ್ತಿರುವ ಆಸಕ್ತಿಗೆ ಸ್ಪಂದಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ಸಿರಿಧಾನ್ಯಗಳು ತಮ್ಮ ಪೌಷ್ಟಿಕಾಂಶದ ಅನುಕೂಲಗಳಿಗೆ ಹೆಚ್ಚು ಹೆಚ್ಚು ಗುರುತಿಸಲ್ಪಡುತ್ತಿದ್ದರೂ, ಅವುಗಳ ರುಚಿಯೇ ಅವುಗಳನ್ನು ವ್ಯಾಪಕವಾಗಿ ಬಳಸಲು ಇಂದಿಗೂ ಪ್ರಮುಖ ಅಡೆತಡೆಯಾಗಿದೆ. ಸಿರಿಧಾನ್ಯಗಳ ವಿಶಿಷ್ಟವಾದ ಸ್ವಾದ ಮತ್ತು ಕಹಿ ಮಿಶ್ರಿತ ನಂತರದ ರುಚಿಯಿಂದಾಗಿ ಅನೇಕ ಗ್ರಾಹಕರು ಇವುಗಳನ್ನು ಅಕ್ಕಿ ಮತ್ತು ಗೋಧಿಯಂತಹ ಪರಿಚಿತ ದಿನಸಿ ಪದಾರ್ಥಗಳಿಗಿಂತ ಕಡಿಮೆ ಆಕರ್ಷಕವೆಂದು ಭಾವಿಸುತ್ತಾರೆ.

ಈ ಸವಾಲನ್ನು ಪರಿಹರಿಸಲು, ಬ್ರಾಹ್ಮಿನ್ಸ್ ಸಂಸ್ಥೆಯು ಒಂದು ವಿಶಿಷ್ಟವಾದ ಹುರಿಯುವ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದೆ. ಇದು ಧಾನ್ಯಗಳ ನೈಸರ್ಗಿಕ ಸುವಾಸನೆಯನ್ನು ಹೆಚ್ಚಿಸುವುದರ ಜೊತೆಗೆ ಕಹಿ ಗುಣವನ್ನು ದೂರ ಮಾಡುತ್ತದೆ, ಆ ಮೂಲಕ ಸಿರಿಧಾನ್ಯಗಳನ್ನು ದೈನಂದಿನ ಊಟಕ್ಕೆ ಹೆಚ್ಚು ರುಚಿಕರವಾದ ಮತ್ತು ಆನಂದಿಸಬಹುದಾದ ಆಯ್ಕೆಯನ್ನಾಗಿ ಮಾಡುತ್ತದೆ.

ಹೊಸದಾಗಿ ಬಿಡುಗಡೆ ಮಾಡಲಾದ ಈ ಉತ್ಪನ್ನಗಳ ಶ್ರೇಣಿಯು ಭಾರತದಾದ್ಯಂತ ಪ್ರಮುಖ ಸಿರಿಧಾನ್ಯ ಬೆಳೆಯುವ ಪ್ರದೇಶಗಳಿಂದ ಸಂಗ್ರಹಿಸಲಾದ ಆರು ವಿಧದ ಸಿರಿಧಾನ್ಯಗಳನ್ನು ಒಳಗೊಂಡಿದೆ – ನವಣೆ, ಸಾಮೆ, ಕೊರಲೆ ಊದಲು, ಅರ್ಕ, ಮತ್ತು ಬರಗು. ನೈಸರ್ಗಿಕವಾಗಿಯೇ ಗ್ಲುಟನ್ ಮುಕ್ತ ನಾರು ಪದಾರ್ಥ ಮತ್ತು ಪ್ರೊಟೀನ್‌ ನಿಂದ ಸಮೃದ್ಧವಾಗಿರುವ ಹಾಗೂ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಈ ಉತ್ಪನ್ನಗಳನ್ನು, ರುಚಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಸಿರಿಧಾನ್ಯಗಳ ಪೌಷ್ಟಿಕಾಂಶದ ಪ್ರಯೋಜನಗಳನ್ನು ದೈನಂದಿನ ಆಹಾರ ಪದ್ಧತಿಗೆ ತರಲು ವಿನ್ಯಾಸಗೊಳಿಸಲಾಗಿದೆ. ಈ ಸಿರಿಧಾನ್ಯಗಳನ್ನು ಬಿರಿಯಾನಿ, ಉಪ್ಪಿಟ್ಟು, ಮೊಸರನ್ನ, ಪಾಯಸ, ಗಂಜಿ ಮತ್ತು ಇತರ ಮನೆ ಶೈಲಿಯ ವೈವಿಧ್ಯಮಯ ಪರಿಚಿತ ಖಾದ್ಯಗಳ ತಯಾರಿಕೆಯಲ್ಲಿ ಬಳಸಿಕೊಳ್ಳಬಹುದು.

ಈ ಬಿಡುಗಡೆಯ ಕುರಿತು ಮಾತನಾಡಿದ ವಿಪ್ರೋ ಫುಡ್ಸ್‌ ಅಧ್ಯಕ್ಷ ಶ್ರೀ ಅನಿಲ್ ಚುಗ್, “ವಿಪ್ರೋ ಫುಡ್ಸ್‌ ನಲ್ಲಿ, ನಾವು ರುಚಿ ಮತ್ತು ಗುಣಮಟ್ಟ ಎರಡನ್ನೂ ಸಂಯೋಜಿಸುವ ಉತ್ಪನ್ನಗಳನ್ನು ತಲುಪಿಸುವತ್ತ ಗಮನ ಹರಿಸುತ್ತೇವೆ. ಗ್ರಾಹಕರು ತಮ್ಮ ಆಹಾರದ ಆಯ್ಕೆಗಳು ಮತ್ತು ಪೌಷ್ಟಿಕಾಂಶದ ಬಗ್ಗೆ ಹೆಚ್ಚು ಜಾಗರೂಕರಾಗುತ್ತಿರುವ ಈ ಸಮಯದಲ್ಲಿ, ಸಮತೋಲಿತ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳು ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರಿಸಿವೆ. ಬ್ರಾಹ್ಮಿನ್ಸ್ ಮಿಲೆಟ್ಸ್ ಸರಣಿಯ ಮೂಲಕ, ಇಂದಿನ ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಸಾಂಪ್ರದಾಯಿಕ ಅಡುಗೆ ಶೈಲಿಯನ್ನು ಉಳಿಸಿಕೊಂಡು, ಈ ಉತ್ಪನ್ನಗಳು ಅವರ ಗಮನ ಸೆಳೆಯುವಂತೆ ಮಾಡುವುದು ನಮ್ಮ ಗುರಿಯಾಗಿದೆ” ಎಂದರು.

ವಿಪ್ರೋ ಫುಡ್ಸ್ ಬ್ರಾಹ್ಮಿನ್ಸ್ ಅಂಡ್ ನಿರಪರ ಬಿಸಿನೆಸ್ ಹೆಡ್ ಶ್ರೀ ಸನ್ನಿ ಥಾಮಸ್, “ಈ ಬಿಡುಗಡೆಯು ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಭವಿಷ್ಯಕ್ಕೆ ಪೂರಕವಾದ ಆಹಾರ ಉತ್ಪನ್ನಗಳ ಪೋರ್ಟ್‌ ಫೋಲಿಯೊವನ್ನು ರೂಪಿಸುವಲ್ಲಿ ನಮ್ಮ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಸಾಂಪ್ರದಾಯಿಕ ಆಹಾರದ ಆಯ್ಕೆಗಳಲ್ಲೇ ಬೇರೂರಿರುವ ಈ ಉತ್ಪನ್ನಗಳ ಸರಣಿಯನ್ನು, ದೈನಂದಿನ ಅಡುಗೆಗೆ ಅಗತ್ಯವಿರುವ ಸುಲಭ ಬಳಕೆಯ ಜೊತೆಗೆ ಸ್ಥಿರವಾದ ಗುಣಮಟ್ಟವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ” ಎಂದರು.

ಬ್ರಾಹ್ಮಿನ್ಸ್ ಮಿಲೆಟ್ಸ್ ಶ್ರೇಣಿಯ 500 ಗ್ರಾಂ ಪ್ಯಾಕ್‌ಗಳು ರೂ.149 ಬೆಲೆಯಲ್ಲಿ ಲಭ್ಯವಿದ್ದು, ಇವು 365 ದಿನಗಳ ಬಳಕೆಯ ಅವಧಿ ಹೊಂದಿರುವ ಸುಧಾರಿತ ಮೂರು-ಪದರಗಳ ಪ್ಯಾಕೇಜಿಂಗ್‌ ನಲ್ಲಿ ಬರುತ್ತವೆ. ಈ ಉತ್ಪನ್ನಗಳ ಸರಣಿಯು ಸದ್ಯಕ್ಕೆ ಕರ್ನಾಟಕ ಮತ್ತು ಕೇರಳದಾದ್ಯಂತ ಸಾಂಪ್ರದಾಯಿಕ ಮಳಿಗೆಗಳಲ್ಲಿ ಹಾಗೂ ಪ್ರತ್ಯೇಕವಾಗಿ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ನಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇದನ್ನು ಇತರ ಪ್ರಮುಖ ಮೆಟ್ರೋ ಹಾಗೂ ಟೈಯರ್ 2 ನಗರಗಳ ಇ-ಕಾಮರ್ಸ್ ವೇದಿಕೆಗಳಿಗೂ ವಿಸ್ತರಿಸುವ ಯೋಜನೆ ಇದೆ.

ಈ ಬಿಡುಗಡ ಮೂಲ ವಿಪ್ರೋ ಬ್ರಾಹ್ಮಿನ್ಸ್ ಸಿರಿಧಾನ್ಯಗಳನ್ನು ಪ್ರತಿನಿತ್ಯದ ಭೋಜನದ ಭಾಗವಾಗಲು ಹೆಚ್ಚು ಇಷ್ಟವಾಗುವ ಮತ್ತು ಲಭ್ಯವಾಗುವಂತೆ ಮಾಡುವುದಲ್ಲದೆ ವಿಕಾಸಗೊಳ್ಳುತ್ತಿರುವ ದಿನಸಿ ವಿಭಾಗದಲ್ಲಿ ತನ್ನ ಸ್ಥಾನವನ್ನು ಸದೃಢಗೊಳಿಸಿಕೊಳ್ಳುತ್ತಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8423 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment