Thursday, June 25, 2026
Google search engine
Homeಜಿಲ್ಲಾ ಸುದ್ದಿಸಾರ್ವಜನಿಕರ ಕೆಲಸ ವಿಳಂಬ: ಶಿವಮೊಗ್ಗ ಪಾಲಿಕೆ ಕಚೇರಿಗೆ ಲೋಕಾಯುಕ್ತ ದಿಢೀರ್ ದಾಳಿ!

ಸಾರ್ವಜನಿಕರ ಕೆಲಸ ವಿಳಂಬ: ಶಿವಮೊಗ್ಗ ಪಾಲಿಕೆ ಕಚೇರಿಗೆ ಲೋಕಾಯುಕ್ತ ದಿಢೀರ್ ದಾಳಿ!

ಶಿವಮೊಗ್ಗ : ಮಹಾನಗರ ಪಾಲಿಕೆ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದೆ. ಪಾಲಿಕೆಯ ವಿವಿಧ ವಿಭಾಗಗಳಲ್ಲಿ ಪರಿಶೀಲನೆ ನಡೆಯುತ್ತಿದೆ.

ಲೋಕಾಯುಕ್ತ ಎಸ್‌.ಪಿ ಎಂ.ಎಸ್‌. ಕೌಲಾಪುರೆ ಮಾರ್ಗದರ್ಶನದಲ್ಲಿ ಇವತ್ತು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ದಿಢೀರ್‌ ಪರಿಶೀಲನೆ ನಡೆಸಲಾಗುತ್ತಿದೆ. ಪಾಲಿಕೆಯ ಕಂದಾಯ ವಿಭಾಗ, ಆಡಳಿತ ವಿಭಾಗ, ನ್ಯಾಯಾಂಗ ವಿಭಾಗ, ಟಪಾಲು ಸೆಕ್ಷನ್‌, ಸಹಾಯವಾಣಿ, ನಲ್ಮ್‌ ವಿಭಾಗ ಸೇರಿದಂತೆ ಪಲಿಕೆಯ ಪ್ರತಿ ಕಚೇರಿಯಲ್ಲಿಯು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಸಾರ್ವಜನಿಕರ ಕೆಲಸಗಳು ವಿಳಂಬ ಸಂಬಂಧ ಲೋಕಾಯುಕ್ತಕ್ಕೆ ಹಲವು ದೂರು ಬಂದಿತ್ತು. ಈ ಹಿನ್ನೆಲೆ ಇವತ್ತು ಲೋಕಾಯುಕ್ತ ಅಧಿಕಾರಿಗಳು ದಿಢೀರ್‌ ಭೇಟಿ ನೀಡಿ ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಪರಿಶೀಲಿಸುತ್ತಿದ್ದಾರೆ. ಎಸ್‌.ಪಿ. ಕೌಲಾಪುರೆ ನೇತೃತ್ವದಲ್ಲಿ ಡಿವೈಎಸ್‌ಪಿ, ಮೂವರು ಇನ್ಸ್‌ಪೆಕ್ಟರ್‌ಗಳು ಸೇರಿ 25ಕ್ಕು ಹೆಚ್ಚು ಸಿಬ್ಬಂದಿ ಪರಿಶೀಲನೆ ಕಾರ್ಯದಲ್ಲಿ ತೊಡಿಗಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು ದಿಢೀರ್‌ ಭೇಟಿ ವೇಳೆ ಮಹಾನಗರ ಪಾಲಿಕೆ ಸಿಬ್ಬಂದಿ ತಬ್ಬಿಬ್ಬಾದರು. ಇವತ್ತು ಏನೆಲ್ಲ ಕೆಲಸ ಮಾಡುವುದಿದೆ, ಯಾವೆಲ್ಲ ಕಡತ ಬಾಕಿ ಇದೆ, ಎಂದು ಪ್ರಶ್ನಿಸಿದಾಗ ಪಾಲಿಕೆ ಸಿಬ್ಬಂದಿ ಉತ್ತರಿಸಲು ತಡಬಡಾಯಿಸಿದರು. ಬೆಳಗ್ಗೆ 11 ಗಂಟೆಯಾದರು ಕಚೇರಿಯ ಕೆಲವು ಸಿಬ್ಬಂದಿ ಬೀಗ ಹುಡುಕುತ್ತಿರುವುದು ಗೊತ್ತಾಗಿ ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು. ಪಾಲಿಕೆಯಲ್ಲಿ ವಿಲೇವಾರಿಗೆ ಬಾಕಿ ಇರುವ ಕಡತಗಳ ಕುರಿತು ಮಾಹಿತಿ ಪಡೆಯುತ್ತಿರುವ ಲೋಕಾಯುಕ್ತರು, ವಿಲೇವಾರಿ ವಿಳಂಬಕ್ಕೆ ಕಾರಣ ಕೇಳಿದರು.

ಐಡಿ ಇಲ್ಲದೆ ಓಡಾಡ್ತಿದ್ದವರಿಗೆ ಕ್ಲಾಸ್‌ ಮತ್ತೊಂದೆಡೆ ಪಾಲಿಕೆ ಗುರುತಿನ ಚೀಟಿ ಧರಿಸಿದೆ, ಎಲ್ಲೆಂದರಲ್ಲಿ ಓಡಾಡುತ್ತಿದ್ದ ಪಾಲಿಕೆಗೆ ಸಿಬ್ಬಂದಿಗು ಇವತ್ತು ಬಿಸಿ ಮುಟ್ಟಿದೆ. ಕಮಿಷನರ್‌ ಮಾಯಣ್ಣ ಗೌಡ ಅವರು ಇಂತಹ ಸಿಬ್ಬಂದಿಗೆ ಕಂಡ ಕಂಡಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅಲ್ಲದೆ ಪ್ರತಿ ವಿಭಾಗಕ್ಕು ಭೇಟಿ ನೀಡಿ, ಲೋಕಾಯುಕ್ತ ಅಧಿಕಾರಿಗಳು ಕೇಳುವ ದಾಖಲೆಗಳನ್ನು ಒದಗಿಸಿಬೇಕು, ಸೂಕ್ತ ಉತ್ತರ ನೀಡಬೇಕು ಎಂದು ಸಿಬ್ಬಂದಿಗೆ ಸೂಚನೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments