Thursday, July 2, 2026
Google search engine
Homeವಿದೇಶಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್!

ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್!

ವಿಶ್ವದ ದೊಡ್ಡಣ್ಣ ಎಂದೇ ಹೆಸರು ಪಡೆದಿರುವ ಅಮೆರಿಕದ 47ನೇ ಬಾರಿ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಮಾತನಾಡಿದ ಡೊನಾಲ್ಡ್ ಟ್ರಂಪ್, ಶಿಕ್ಷಣ ವ್ಯವಸ್ಥೆ, ಉದ್ಯಮ, ವಲಸೆ ನೀತಿ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಬದಲಾವಣೆ ಮಾಡಲಾಗುವುದು. ಮತ್ತು ಈ ಪ್ರಕ್ರಿಯೆ ಅತ್ಯಂತ ಶೀಘ್ರವಾಗಿ ಆರಂಭಿಸುವ ಮೂಲಕ ಹೊಸ ಅಮೆರಿಕ ಯುಗಾರಂಭವಾಗಲಿದೆ ಎಂದರು.

ಅತ್ಯಂತ ದಟ್ಟವಾದ ಇಬ್ಬನಿಯಿಂದ ಚಳಿ ಆವರಿಸಿದೆ. ಈ ಹಿನ್ನೆಲೆಯಲ್ಲಿ 1985ರಲ್ಲಿ ರೋನಾಲ್ಡ್ ರೀಗನ್ಸ್ ಅಮೆರಿಕದ ಎರಡನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿ ರಾಜಧಾನಿ ರೊಟುಂಡಾದ ಒಳಾಂಗಣದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಧ್ಯಕ್ಷರಾಗಿ ಪ್ರಮಾಣ ವಚನ ್ೀಕರಿಸುತ್ತಿದ್ದು, ಸುಮಾರು 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು ಶ್ವೇತಭವನದ ಮುಂದೆ ಹಾಜರಾಗಿದ್ದರು. ಜೆಡಿ ವೆನ್ಸ್ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷ ಜೋ ಬಿಡೈನ್, ಪ್ರತಿಸ್ಪರ್ಧಿಯಾಗಿದ್ದ ಕಮಲಾ ಹ್ಯಾರಿಸ್, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಜಾರ್ಜ್ ಬುಷ್, ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೈ, ಇಟಲಿಯನ್ ಪ್ರಧಾನಿ ಜಾರ್ಜಿಯಾ ಮೆಲೊನಿ, ಚೀನಾ ಮಾಜಿ ಅಧ್ಯಕ್ಷ ಹಾನ್ ಜೆಂಗ್ ಪಾಲ್ಗೊಂಡಿದ್ದರು.

ಉದ್ಯಮ ದೈತ್ಯರಾದ ಸ್ಪೇಸ್ ಎಕ್ಸ್ ನ ಇಲಾನ್ ಮಸ್ಕ್, ಅಮೆಜಾನ್ ಸಂಸ್ಥಾಪಕ ಜೆಫ್ ಬೊನ್ಸ್, ಮೆಟಾ ಸಿಇಒ ಮಾರ್ಕ್ ಜುಕೆನ್ ಬರ್ಗ್, ಆಪಲ್ ನ ಕುಕ್, ಟಿಕ್ ಟಾಕ್ ಸಿಇಒ ಶುಹೊ ಜಿ ಚ್ಯುವ್, ಗೂಗಲ್ ಸಿಇಒ ಸುಂದರ್ ಪಿಚೊಯ್ ಅಲ್ಲದೇ ಸಂಗೀತ ಕ್ಷೇತ್ರದಿಂದ ರಾಸ್ಕಲ್ ಫ್ಲರ್ಟ್ಸ್, ಜೇಸನ್ ಅಲಾದಿನ್, ಗಾವಿನ್ ಡೆಕ್ ಗ್ರಾವ್, ರ್ಯಾಪರ್ ನೆಲ್ಲಿ ಮುಂತಾದವರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments