Sunday, December 7, 2025
Google search engine
Homeಮನರಂಜನೆಹಳ್ಳಿಹೈದ ಹನುಮಂತು ಬಿಗ್ ಬಾಸ್ ಸೀಸನ್ 11ರ ವಿನ್ನರ್

ಹಳ್ಳಿಹೈದ ಹನುಮಂತು ಬಿಗ್ ಬಾಸ್ ಸೀಸನ್ 11ರ ವಿನ್ನರ್

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಆಗಿ ಹಳ್ಳಿ ಹೈದ ಗಾಯಕ ಹನುಮಂತಿ ಹೊರಹೊಮ್ಮಿದ್ದಾರೆ.

ಕಿಚ್ಚ ಸುದೀಪ್ ಕೊನೆಯ ಬಾರಿಗೆ ನಡೆಸಿಕೊಟ್ಟ ಬಿಗ್ ಬಾಸ್ ಸೀಸನ್ 11ರ ಫಿನಾಲೆ ಭಾನುವಾರ ನಡೆದಿದ್ದು, 4ನೇ ವಾರದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ ಹನುಮಂತು ಟ್ರೋಫಿ ಗೆದ್ದಿದ್ದೂ ಅಲ್ಲದೇ 50 ಲಕ್ಷ ರೂ. ನಗದು ಬಹುಮಾನ ವಿಜೇತರಾದರು.

ಈ ಮೂಲಕ ಹನುಮಂತು ವೈಲ್ಡ್ ಕಾರ್ಡ್ ಪ್ರವೇಶ ಪಡೆದು ಟ್ರೋಫಿ ಗೆದ್ದ ಮೊದಲ ಸ್ಪರ್ಧಿ ಎಂಬ ಗೌರವಕ್ಕೆ ಪಾತ್ರರಾದರೆ, ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಮೂರನೇ ಸ್ಪರ್ಧಿ ರಜತ್ ಮೂರನೇ ಸ್ಥಾನಕ್ಕೆ ಕುಸಿದರು.

ಶನಿವಾರ ನಡೆದ ಫಿನಾಲೆ ಮೊದಲ ದಿನ ಕಿಚ್ಚ ಸುದೀಪ್ ಬಹುಮಾನ ವಿಜೇತ ಸ್ಪರ್ಧಿ 5 ಕೋಟಿಗೂ ಅಧಿಕ ಮತಗಳನ್ನು ಪಡೆದಿದ್ದಾರೆ ಎಂದು ಘೋಷಿಸಿದ್ದರು. ರನ್ನರ್ ಅಪ್ ಸ್ಥಾನಕ್ಕೆ ತೃಪ್ತರಾದ ತ್ರಿವಿಕ್ರಮ್ 2 ಕೋಟಿ ಗೂ ಅಧಿಕ ಪಡೆದರು. ಇದರೊಂದಿಗೆ ಹನುಮಂತು ಸುಮಾರು 3 ಕೋಟಿಗೂ ಅಧಿಕ ಮತಗಳ ಭಾರೀ ಅಂತರರದಿಂದ ಗೆದ್ದು ಬಿಗ್ ಬಾಸ್ ಇತಿಹಾಸದಲ್ಲೇ ಅತೀ ಹೆಚ್ಚು ಮತ ಹಾಗೂ ಮತಗಳ ಅಂತರದಿಂದ ಗೆದ್ದ ಮೊದಲ ಸ್ಪರ್ಧಿ ಎಂಬ ಮತ್ತೊಂದು ಹೆಗ್ಗಳಿಕೆಗೆ ಪಾತ್ರರಾದರು.

ಕಿರುತೆರೆ ನಟಿ ಮೋಕ್ಷಿತಾ ನಾಲ್ಕನೇ ಸ್ಥಾನಕ್ಕೆ ಕುಸಿದರೆ, ಉಗ್ರಂ ಮಂಜು 5ನೇ ಸ್ಥಾನ ಪಡೆದು ಭಾನುವಾರ ಹೊರಬಿದ್ದ ಮೊದಲ ಸ್ಪರ್ಧಿ ಎನಿಸಿಕೊಂಡರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments