Thursday, June 25, 2026
Google search engine
Homeಮನರಂಜನೆ90ರ ದಶಕದ ಖ್ಯಾತ ಎಂಟಿವಿ ಚಾನೆಲ್ ಕ್ಲೋಸ್!

90ರ ದಶಕದ ಖ್ಯಾತ ಎಂಟಿವಿ ಚಾನೆಲ್ ಕ್ಲೋಸ್!

90ರ ದಶಕದಲ್ಲಿ ಹದಿಹರೆಯದವರ ನೆಚ್ಚಿನ ಮನರಂಜನಾ ಚಾನೆಲ್ ಆಗಿದ್ದ ಎಂಟಿವಿ ಇತಿಹಾಸ ಪುಟ ಸೇರಿಕೊಂಡಿದೆ.

ಕೇವಲ ಮನರಂಜನಾ ಚಾನೆಲ್ ಆಗಿರದೇ ಹಲವು ಪ್ರಯೋಗಗಳ ಮೂಲಕ 1990-2000ರ ನಡುವೆ ಭಾರೀ ಜನಪ್ರಿಯವಾಗಿದ್ದ ಎಂಟಿವಿ ಬಾಗಿಲು ಮುಚ್ಚುತ್ತಿರುವ ಸುದ್ದಿ ಇದೀಗ ಗೂಗಲ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಕ್ರಾ, ಮ್ಯೂಸಿಕ್ ಆಲ್ಬಂ, ದಿಗ್ಗಜರ ಸಂದರ್ಶನ, ತಮಾಷೆಯ ಕಾರ್ಯಕ್ರಮಗಳ ಮೂಲಕ ಭಾರತೀಯ ಕಿರುತೆರೆಯಲ್ಲಿ ಎಂಟಿವಿ ಸಂಚಲನ ಸೃಷ್ಟಿಸಿತ್ತು.

90ರ ದಶಕದ ಯುವಪೀಳಿಗೆ ಎಂಟಿವಿ ನೋಡದವರೇ ಇಲ್ಲ ಎಂಬ ಪರಿಸ್ಥಿತಿ ಇತ್ತು. ಈ ಚಾನೆಲ್ ನಿಂದ ಅದೆಷ್ಟೋ ಹೊಸಮುಖಗಳು ಸೆಲೆಬ್ರೆಟಿಗಳಾಗಿ ಹೊರಹೊಮ್ಮಿದ್ದಾರೆ. ಆದರೆ ಬದಲಾದ ಕಾಲಘಟ್ಟದಲ್ಲಿ ರೀಲ್ಸ್, ಶಾರ್ಟ್ಸ್ ಮುಂತಾದ ಸಾಮಾಜಿಕ ಜಾಲತಾಣಗಳ ಟ್ರೆಂಡ್ ನಿಂದಾಗಿ ಎಂಟಿವಿ ತೆರೆಮರೆಗೆ ಸರಿಯುತ್ತಿದೆ.

ಪ್ಯಾರಾಮೌಂಟ್ ಗ್ಲೋಬಲ್ ಸಂಸ್ಥೆ ಎಂಟಿವಿಯ ಮಾತೃಸಂಸ್ಥೆಯಾಗಿದ್ದು, ಸಾಂಪ್ರದಾಯಿಕ ಹಾಡುಗಳು, ಟ್ರೆಂಡಿಂಗ್ ಹಾಡುಗಳ ಮೂಲಕ ಮನರಂಜನೆ ನೀಡುತ್ತಿತ್ತು. ಆದರೆ ಈಗಿನ ಯುವ ಸಮುದಾಯದ ಆಲೋಚನೆ ಮತ್ತು ಅಭಿರುಚಿ ಬದಲಾಗಿದ್ದರಿಂದ ಮುಚ್ಚುವ ಸ್ಥಿತಿಗೆ ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments