Wednesday, June 24, 2026
Google search engine
Homeಅಪರಾಧಮದುವೆಗೆ ಮೊದಲೇ ಮೊಮ್ಮಗಳಿಗೆ ಹುಟ್ಟಿದ ಕಂದನ ಕೊಂದು ತಿಪ್ಪೆಗುಂಡಿಯಲ್ಲಿ ಹೂತಿಟ್ಟ ಅಜ್ಜಿ!

ಮದುವೆಗೆ ಮೊದಲೇ ಮೊಮ್ಮಗಳಿಗೆ ಹುಟ್ಟಿದ ಕಂದನ ಕೊಂದು ತಿಪ್ಪೆಗುಂಡಿಯಲ್ಲಿ ಹೂತಿಟ್ಟ ಅಜ್ಜಿ!

ಮದುವೆಗೆ ಮೊದಲೇ ಮೊಮ್ಮಗಳಿಗೆ ಹುಟ್ಟಿದ ಗಂಡು ಮಗುವನ್ನು ಜನಿಸಿದ ಒಂದೇ ನಿಮಿಷಕ್ಕೆ ಅಜ್ಜಿ ಕತ್ತು ಹಿಚುಕಿ ಕೊಂದು ತಿಪ್ಪೆಗುಂಡಿಯಲ್ಲಿ ಹೂತಿಟ್ಟ ಆಘಾತಕಾರಿ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮದುವೆಯಾಗದ ಮೊಮ್ಮಗಳು ಮಗುವಿಗೆ ಜನ್ಮ ನೀಡಿರುವುದು ಹೊರಗೆ ತಿಳಿದರೆ ಕುಟುಂಬದ ಮರ್ಯಾದೆ ಹೋಗುವ ಭಯದಿಂದ ಅಜ್ಜಿ ಈ ಕೃತ್ಯ ಎಸಗಿರುವ ಘಟನೆ ಚಿಕ್ಕಮಗಳೂರು ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ 15 ದಿನಗಳ ಹಿಂದೆ ನಡೆದಿದೆ.

ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದಳು, ಕುಟುಂಬದ ಗೌರವದ ದೃಷ್ಟಿಯಿಂದ ವಿಷಯ ಗುಟ್ಟಾಗಿಡಲಾಗಿತ್ತು. ಯುವತಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಹೆರಿಗೆ ಮಾಡಿಸಿಕೊಂಡಿದ್ದಾಳೆ.

ಮಗು ಹುಟ್ಟಿದ ತಕ್ಷಣ ಮನೆಯವರೆಲ್ಲ ಸೇರಿ ಮಗುವನ್ನು ಸಾಯಿಸಲು ನಿಧರಿಸಿದ್ದು, ಅಜ್ಜಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.

ಸತ್ತ ಮಗುವನ್ನು ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಹೋಗಿ ತಿಪ್ಪೆಯ ಗುಂಡಿಯೊಂದರಲ್ಲಿ ಹೂತಿದ್ದಾರೆ. 15 ದಿನ ಕಳೆದ ನಂತರ ತಿಪ್ಪೆ ಗುಂಡಿ ಪಕ್ಕದ ಮನೆಯ ಯುವಕನಿಗೆ ಏನೋ ಹೂತು ಹಾಕಿರುವ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಲಕ್ಕವಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದಾಗ ಹೂತು ಹಾಕಿದ್ದ ಮಗುವಿನ ಮೃತದೇಹ ಪತ್ತೆಯಾಗಿದೆ. ಲಕ್ಕವಳ್ಳಿ ಪೊಲೀಸರು ಮಗುವಿನ ತಾಯಿ, ಅಪ್ಪ, ಅಮ್ಮ ಮತ್ತು ಅಜ್ಜಿಯನ್ನು ವಶಕ್ಕೆ ಪಡೆದು, ವಿಚಾರಣೆ ಮುಂದುವರಿಸಿದ್ದಾರೆ.

ಸ್ಟಾಫ್ ನರ್ಸ್‌ ಆಗಿದ್ದ ಯುವತಿ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಮದುವೆಗೆ ಗರ್ಭ ಧರಿಸಿದ್ದಳು. ಗರ್ಭಿಣಿ ಎಂದು ಗೊತ್ತಾದ ಮೇಲೂ ಮಗು ತೆಗೆಸದೇ ಗುಟ್ಟಾಗಿ ಇಟ್ಟಿದ್ದು ಏಕೆ ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪೊಲೀಸರ ತನಿಖೆಯಿಂದ ಹೆಚ್ಚಿನ ವಿವರಗಳು ಹೊರ ಬರಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments