Sunday, June 28, 2026
Google search engine
Homeವಿದೇಶಐಆರ್ ಜಿಸಿ ಗುಪ್ತಚರ ಮುಖ್ಯಸ್ಥ ಖಾದೇಮಿ ಸಾವು

ಐಆರ್ ಜಿಸಿ ಗುಪ್ತಚರ ಮುಖ್ಯಸ್ಥ ಖಾದೇಮಿ ಸಾವು

ಟೆಹರಾನ್: ಅಮೆರಿಕ – ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಗುಪ್ತಚರ ಮುಖ್ಯಸ್ಥ ಮಜೀದ್ ಖಾದೇಮಿ ಹತ್ಯೆಯಾಗಿದ್ದಾರೆ.

ಇರಾನ್ ರಾಜಧಾನಿ ಟೆಹರಾನ್ ಸುತ್ತಮುತ್ತ ಪ್ರದೇಶಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಮಜೀದ್ ಖಾದೇಮಿ ಮೃತಪಟ್ಟಿದ್ದಾರೆ. ಈ ವಿಷಯವನ್ನು ಐಆರ್‌ಜಿಸಿ ಅಧಿಕೃತವಾಗಿ ಹೇಳಿಕೊಂಡಿದೆ. ಆದರೆ ಖಾದೇಮಿ ಸಾವಿನ ವಿವರ ಬಹಿರಂಗಪಡಿಸಿಲ್ಲ.

ಕಳೆದ ಜೂನ್‌ ತಿಂಗಳಲ್ಲಿ ನಡೆದಿದ್ದ 12 ದಿನಗಳ ಯುದ್ಧದ ವೇಳೆ ಇಸ್ರೇಲ್, ಜನರಲ್ ಮೊಹಮ್ಮದ್ ಕಜೆಮಿ‌ ಅವರನ್ನ ಹತ್ಯೆ ಮಾಡಿತ್ತು. ಆ ಬಳಿಕ ಖಾದೇಮಿ ಗುಪ್ತಚರ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದರು.

ಸುಮಾರು ಅರ್ಧಶತಮಾನಗಳಿಗೂ ಹೆಚ್ಚು ಕಾಲ ಐಆರ್‌ಜಿಸಿನಲ್ಲಿ ತೊಡಗಿಸಿಕೊಂಡಿದ್ದ ಖಾದೇಮಿ, ಪ್ರಾಮಾಣಿಕ ಮತ್ತು ಧೈರ್ಯಶಾಲಿಯೂ ಆಗಿದ್ದರು. ಗುಪ್ತಚರ, ಭದ್ರತಾ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದರು. ಶತ್ರುಗಳನ್ನು ಎದುರಿಸುವಾಗ ಉತ್ತಮ ಕಾರ್ಯತಂತ್ರ ರೂಪಿಸುತ್ತಿದ್ದರು. ಅವರ ಪ್ರಯತ್ನಗಳು ಮುಂದಿನ ಹಲವು ವರ್ಷಗಳವರೆಗೂ ದೇಶದ ಗುಪ್ತಚರ ಸಂಸ್ಥೆಗೆ ಮಾರ್ಗದರ್ಶಕವಾಗಿರಲಿದೆ ಎಂದು ಹೇಳುತ್ತಾ ಇರಾನ್‌ ಸೇನೆ ಸಂತಾಪ ಸೂಚಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments