Wednesday, May 20, 2026
Google search engine
Homeವಿದೇಶಇರಾನ್ 6 ವಾಯುನೆಲೆಗಳ ಮೇಲೆ ಇಸ್ರೇಲ್ ದಾಳಿ: 15 ವಿಮಾನ ಧ್ವಂಸ

ಇರಾನ್ 6 ವಾಯುನೆಲೆಗಳ ಮೇಲೆ ಇಸ್ರೇಲ್ ದಾಳಿ: 15 ವಿಮಾನ ಧ್ವಂಸ

ಇರಾನ್ ನ 6 ವಾಯುನೆಲೆಗಳ ದಾಳಿ ಮಾಡಲಾಗಿದ್ದು, 15 ವಿಮಾನಗಳನ್ನು ಧ್ವಂಸ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ.

1979ರ ನಂತರ ಇಸ್ಲಾಮಿಕ್ ದೇಶದ ಮೇಲೆ ಅತೀ ದೊಡ್ಡ ದಾಳಿ ನಡೆಯುತ್ತಿದ್ದು, ಇಸ್ರೇಲ್ ಜೊತೆ ಕೈ ಜೋಡಿಸಿರುವ ಅಮೆರಿಕ 3 ಅಣು ಸ್ಥಾವರಗಳ ಮೇಲೆ ದಾಳಿ ಮಾಡಿತ್ತು.

ಇದೀಗ ಇಸ್ರೇಲ್ ಮತ್ತೆ  ದಾಳಿಯನ್ನು ತೀವ್ರಗೊಳಿಸಿದ್ದು, ಇದುವರೆಗೆ 950ಕ್ಕೂ ಹೆಚ್ಚು ಮಂದಿ ಇರಾನಿಯರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಇರಾನ್ ಮೇಲೆ ದಾಳಿಗೆ ಯಾವುದೇ ರಾಷ್ಟ್ರ ಸಹಕರಿಸಿದರೂ ಅವರನ್ನು ಕೂಡ ಶತ್ರು ರಾಷ್ಟ್ರ ಎಂದು ಪರಿಗಣಿಸಲಾಗುವುದು. ಅಲ್ಲದೇ ನಮ್ಮ ಸೇನೆಯ ಮೇಲೆ ದಾಳಿ ನಡೆಸಿದೆ ಎಂದು ಪರಿಗಣಿಸಲಾಗುವುದು ಎಂದು ಒರಾನ್ ಸುಪ್ರೀಂ ಖಮೈನಿ ಹೇಳಿಕೆ ನೀಡಿದ್ದಾರೆ.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಎಲ್ಲಾ ಬೆಳವಣಿಗೆಗಳ ನಡುವೆ ಅಮೆರಿಕ ಜಾಗತಿಕ ಮಟ್ಟದಲ್ಲಿ ಕಟ್ಟೆಚ್ಚರ ವಹಿಸುವಂತೆ ದೇಶಗಳಿಗೆ ಕರೆ ನೀಡಿದೆ. ಪ್ರವಾಸ ಕೈಗೊಂಡವರು ಎಚ್ಚರಿಕೆ ವಹಿಸಬೇಕು ಹಾಗೂ ಪ್ರಯಾಣ ಮಾರ್ಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಎಚ್ಚರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments