Sunday, June 28, 2026
Google search engine
Homeವಿದೇಶಸ್ವಪಕ್ಷೀಯರಿಂದಲೇ ಅವಿಶ್ವಾಸ: ಕೆನಡಾ ಪಿಎಂ ಜಸ್ಟಿನ್ ಟ್ರುಡೋ ರಾಜೀನಾಮೆ

ಸ್ವಪಕ್ಷೀಯರಿಂದಲೇ ಅವಿಶ್ವಾಸ: ಕೆನಡಾ ಪಿಎಂ ಜಸ್ಟಿನ್ ಟ್ರುಡೋ ರಾಜೀನಾಮೆ

ಒಟ್ಟಾವ: ಸ್ವಪಕ್ಷೀಯರ ಅವಿಶ್ವಾಸಕ್ಕೆ ಗುರಿಯಾಗಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ತಮ್ಮ ಪಕ್ಷದೊಳಗೆ ಅಸಮಾಧಾನ, ಭಿನ್ನಮತ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಈ ವಾರವೇ ಲಿಬರ್ ಪಾರ್ಟಿ ಮುಖ್ಯಸ್ಥನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಗುರುತು ಬಹಿರಂಗಪಡಿಸದಂತೆ ಷರತ್ತು ವಿಧಿಸಿ ಪತ್ರಿಕೆಗೆ ಮಾಹಿತಿ ನೀಡಿದ ಕೆನಡಾ ಸರ್ಕಾರದ ಮೂಲಗಳು, ಟ್ರೂಡೋ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಆದರೆ ಪಕ್ಷದ ರಾಷ್ಟ್ರೀಯ ನಾಯಕರ ಮಹತ್ವದ ಸಭೆಯಲ್ಲಿ ಈ ಬೆಳವಣಿಗೆ ನಡೆಯುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ತನ್ನ ಪಕ್ಷದ ಸಂಸತ್ ಸದಸ್ಯರಿಂದಲೇ ಉಚ್ಛಾಟಿತನಾಗುವ ಅವಮಾನದಿಂದ ಪಾರಾಗಲು ತಾನಾಗಿಯೇ ಪಕ್ಷದ ಸಭೆಗೂ ಮುನ್ನವೇ ರಾಜೀನಾಮೆ ಘೋಷಣೆ ಮಾಡುವುದು ಒಳಿತೆಂಬುದನ್ನು ಟ್ರೂಡೋ ಅರ್ಥಮಾಡಿಕೊಂಡಿದ್ದಾರೆ.

ಅದೇ ರೀತಿ, ಲಿಬರಲ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯು ನಾಯಕತ್ವ ಪರಿವರ್ತನೆಯನ್ನು ನಿರ್ವಹಿಸಲು ಯಾವ ರೀತಿ ಯೋಜನೆ ರೂಪಿಸಿಕೊಂಡಿದೆ ಎಂಬ ಕುರಿತು ಸ್ಪಷ್ಟನೆ ದೊರೆತಿಲ್ಲ.

ಮುಂದಿನ ನಾಯಕತ್ವದ ವಿಚಾರಗಳನ್ನು ನಿರ್ಧರಿಸುವ ಲಿಬರಲ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಈ ವಾರ ಸಭೆ ಸೇರಲಿದೆ.  ಈ ಸಭೆ ಪಕ್ಷದ ಸಂಸತ್ ಸದಸ್ಯರ ಅಧಿವೇಶನದ ನಂತರ ನಡೆಯಲಿದೆ ಎಂದು ದಿ ಗ್ಲೋಬ್ ಆಕ್ಲೆಂಡ್  ಮೇಲ್ ವರದಿ ಹೇಳಿದೆ.

ಮುಖ್ಯವಾಗಿ, ರಾಜೀನಾಮೆಗೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ಟ್ರೂಡೋ ಅವರ ಲಿಬರಲ್ ಪಕ್ಷದ ಸದಸ್ಯರು ಬುಧವಾರವೇ ಸಭೆ ಸೇರುವ ಸಾಧ್ಯತೆ ಗೋಚರಿಸಿದೆ. ಇದಕ್ಕಾಗಿ ಎಂಪಿಗಳು ಜನವರಿ 27ಕ್ಕೆ ರಾಜಧಾನಿ ಒಟ್ಟಾವಗೆ ಆಗಮಿಸಬೇಕಿದೆ. ಇದರ ಮಧ್ಯೆ ಪ್ರಮುಖ ಮೂರು ಪ್ರತಿಪಕ್ಷಗಳು ಹಾಲಿ ಸರ್ಕಾರವನ್ನು ಉರುಳಿಸಲು ಪಣ ತೊಟ್ಟಿವೆ ಎಂದು ರೇಡಿಯೋ ಕೆನಡಾ ವರದಿ ತಿಳಿಸಿದೆ.

ಕೆನಡಾದಲ್ಲಿ ಕಳೆದ ಕೆಲವು ತಿಂಗಳುಗಳಿಂದ ರಾಜಕೀಯ ಪ್ರಕ್ಷುಬ್ದತೆ ಇದೆ. ಡಿಸೆಂಬರ್ ೧೬ರಂದು ದೇಶದ ಆರ್ಥಿಕತೆಯ ಕುರಿತು ಹೇಳಿಕೆ ಬಿಡುಗಡೆಯ ಕೆಲವೇ ಗಂಟೆಗಳಿಗೆ ಮುನ್ನ ಮಾಜಿ ಪ್ರಧಾನಿ ಮತ್ತು ಹಣಕಾಸು ಸಚಿವೆ ಕ್ರಿಸ್ಟಿಯಾ ಫ್ರೀಲ್ಯಾಂಡ್ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments