Friday, May 17, 2024
Google search engine
Homeಅಪರಾಧಆಸ್ತಿಗಾಗಿ ಅಪ್ಪ ಸಾಯುವಂತೆ ಮುಖದ ಮೇಲೆ ಪದೇಪದೆ ಗುದ್ದಿದ ಕಿರಾತಕ ಮಗ!

ಆಸ್ತಿಗಾಗಿ ಅಪ್ಪ ಸಾಯುವಂತೆ ಮುಖದ ಮೇಲೆ ಪದೇಪದೆ ಗುದ್ದಿದ ಕಿರಾತಕ ಮಗ!

ಆಸ್ತಿ ಹಂಚಿಕೆ ಕುರಿತು ಅಸಮಾಧಾನಗೊಂಡ ಮಗ ಮುಖದ ಮೇಲೆ ಪದೇಪದೆ ಪಂಚ್ ಮಾಡಿದ್ದೂ ಅಲ್ಲದೇ ಕಾಲಿನಿಂದ ಜಾಡಿಸಿ ಒದಿದ್ದರಿಂದ ತಂದೆ ಮೃತಪಟ್ಟ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಪೆರಂಬೂರಿನಲ್ಲಿ 65 ವರ್ಷದ ವೃದ್ಧ ತಂದೆ ಕುಲಂದೈವೆಲು ಪುತ್ರ ಸಂತೋಷ್ ಹಲ್ಲೆ ನಂತರ ಕೆಲವೇ ದಿನಗಳಲ್ಲಿ ಮೃತಪಟ್ಟಿದ್ದಾರೆ.

ಪೊಲೀಸರು ತಂದೆ ಸಾವಿನ ಕುರಿತು ತನಿಖೆ ನಡೆಸುವಾಗ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದು, ಮಗ ಸಂತೋಷ್ ಪದೇಪದೆ ತಂದೆ ಮುಖದ ಮೇಲೆ ಹಲ್ಲೆ ಮಾಡಿದ ಭೀಕರ ದೃಶ್ಯ ನೋಡಿ ಬೆಚ್ಚಿಬಿದ್ದಿದ್ದಾರೆ.

ಕುಲಂದೈವೆಲು ಖಾಸಗಿ ಕಂಪನಿ ಹೊಂದಿದ್ದು, ಆಸ್ತಿ ಹಂಚಿಕೆ ಮಾಡಿದ್ದರು. ಆಸ್ತಿ ಹಂಚಿಕೆಯಲ್ಲಿ ಅಸಮಾಧಾನಗೊಂಡ ಸಂತೋಷ್ ಏಕಾಏಕಿ ಬಂದು ತಂದೆಯ ಮುಖದ ಮೇಲೆ ಹಲ್ಲೆ ಮಾಡಿದ್ದಾನೆ. ಅಸಹಾಯಕ ತಂದೆ ರಕ್ತಸ್ರಾವದಿಂದ ಬಳಲುತ್ತಿದ್ದು, ಕುಟುಂಬದ ಇತರೆ ಸದಸ್ಯರು ಬಂದು ಸಂತೋಷ್ ನನ್ನು ತಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments