Friday, May 17, 2024
Google search engine
Homeಅಪರಾಧತಮಾಷೆ ಮಾಡಿದ್ದಕ್ಕೆ ಯುವತಿಗೆ ರಸ್ತೆ ಮಧ್ಯದಲ್ಲೇ ಇರಿದ ಯುವಕ!

ತಮಾಷೆ ಮಾಡಿದ್ದಕ್ಕೆ ಯುವತಿಗೆ ರಸ್ತೆ ಮಧ್ಯದಲ್ಲೇ ಇರಿದ ಯುವಕ!

ತಮಾಷೆ ಮಾಡಿದ್ದಕ್ಕಾಗಿ ಯುವಕನೊಬ್ಬ ರಸ್ತೆ ಮಧ್ಯೆದಲ್ಲೇ ಯುವತಿಗೆ ಚಾಕುವಿನಿಂದ ಪದೇಪದೆ ಇರಿದ ಘಟನೆ ದೆಹಲಿಯಲ್ಲಿ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮುಖರ್ಜಿ ನಗರದಲ್ಲಿ ಈ ಘಟನೆ ನಡೆದಿದ್ದು, ಲೈಬ್ರರಿಗೆ ಹೋಗುತ್ತಿದ್ದ ಯುವತಿ ತಮಾಷೆ ಮಾಡಿದ್ದಕ್ಕಾಗಿ ಅಮನ್ ಎಂಬ ಯುವಕ ಚಾಕುವಿನಿಂದ ಇರಿದಿದ್ದಾನೆ. ಯುವತಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಅಮನ್ ಎಂಬ ಯುವಕ ಯಾವ ಕೆಲಸ ಮಾಡದೇ ಬಿಲ್ಡಪ್ ತಗೊಂಡು ಓಡಾಡುವುದನ್ನು ನೋಡಿ ಯುವತಿಯರನ್ನು ತಮಾಷೆ ಮಾಡುತ್ತಿದ್ದರು. ಇದೇ ರೀತಿ ಲೈಬ್ರರಿಗೆ ತೆರಳುತ್ತಿದ್ದ ಯುವತಿ ಅಮನ್ ನನ್ನು ಕೆಣಕಿದಳು. ಇದರಿಂದ ಸಿಟ್ಟಿಗೆದ್ದ ಆತ ಪಕ್ಕದಲ್ಲೇ ಇದ್ದ ತರಕಾರಿ ಅಂಗಡಿಯಲ್ಲಿ ಇರಿಸಿದ್ದ ಚಾಕು ತೆಗೆದು ಯುವತಿಗೆ ಇರಿದಿದ್ದಾನೆ.

ಕೂಡಲೇ ಸ್ಥಳೀಯರನ್ನು ಆತನನ್ನು ತಡೆದು ಯುವತಿಯನ್ನು ರಕ್ಷಿಸಿದ್ದಾರೆ. ಪೊಲೀಸರು ಅಮನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments