Wednesday, October 16, 2024
Google search engine
Homeತಾಜಾ ಸುದ್ದಿಉತ್ತರ ಪ್ರದೇಶದ ಹಿಂದೂ ದೇವಸ್ಥಾನಗಳಿಂದ ಸಾಯಿಬಾಬಾ ಮೂರ್ತಿಗಳ ತೆರವು!

ಉತ್ತರ ಪ್ರದೇಶದ ಹಿಂದೂ ದೇವಸ್ಥಾನಗಳಿಂದ ಸಾಯಿಬಾಬಾ ಮೂರ್ತಿಗಳ ತೆರವು!

ಸಾಯಿಬಾಬಾ ಮುಸ್ಲಿಂ ವ್ಯಕ್ತಿಯಾಗಿದ್ದು, ಸನಾತನ ಧರ್ಮಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸನಾತನ ರಕ್ಷಕ ದಳ ಉತ್ತರ ಪ್ರದೇಶದ ವಾರಣಾಸಿಯಲ್ಲಿ 14 ಹಿಂದೂ ದೇವಾಲಯಗಳಿಂದ ಸಾಯಿಬಾಬಾ ಮೂರ್ತಿಗಳನ್ನು ತೆರವುಗೊಳಿಸಲಾಗುತ್ತಿದೆ.

ಪ್ರಸಿದ್ಧ ಬಡಾ ಗಣೇಶ ದೇವಸ್ಥಾನ ಸೇರಿದಂತೆ ವಾರಣಾಸಿಯಲ್ಲಿರುವ 14 ಹಿಂದೂ ದೇವಸ್ಥಾನಗಳಿಂದ ಸಾಯಿಬಾಬಾ ಮೂರ್ತಿಗಳನ್ನು ತೆರವುಗಳಿಸಲಾಗಿದ್ದು, ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಯಿಬಾಬಾ ಮುಸ್ಲಿಂ ವ್ಯಕ್ತಿಯಾಗಿದ್ದು, ಅವರಿಗೂ ಸನಾತನ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹಿಂದೂ ಸಂಘಟನೆಗಳು ಹಿಂದೂ ದೇವಾಲಯಗಳಿಂದ ಸಾಯಿಬಾಬಾ ಮೂರ್ತಿ ತೆರವು ಕಾರ್ಯ ನಡೆಸಿದ್ದು, ಇನ್ನೂ 28 ದೇವಾಲಯಗಳಲ್ಲಿನ ಸಾಯಿ ಬಾಬಾ ವಿಗ್ರಹ ತೆರವು ಗುರಿ ಹೊಂದಲಾಗಿದೆ ಎಂದು ಸನಾತನ ರಕ್ಷಕ ದಳದ ಅಧ್ಯಕ್ಷ ಅಜಯ್ ಶರ್ಮಾ ಹೇಳಿದ್ದಾರೆ.

ನಾವು ಸಾಯಿಬಾಬಾ ವಿರೋಧಿಗಳಲ್ಲ. ಆದರೆ ಅವರ ಮೂರ್ತಿಗಳನ್ನು ಹಿಂದೂಗಳ ದೇವಾಲಯಗಳಲ್ಲಿ ಸ್ಥಾಪಿಸಲು ಬಿಡುವುದಿಲ್ಲ ಎಂದು ಅಜಯ್ ಶರ್ಮಾ ಹೇಳಿದ್ದಾರೆ.

ಸಾಯಿಬಾಬಾ ಅನುಯಾಯಿಗಳು ಅವರಿಗಾಗಿಯೇ ಗುಡಿ ನಿರ್ಮಿಸಿ, ಅಲ್ಲಿಯೇ ಪೂಜಿಸಲಿ. ಸನಾತನ ಧರ್ಮದಲ್ಲಿ ಅವರ ಮೂರ್ತಿ ಸ್ಥಾಪನೆಗೆ ಅವಕಾಶವಿಲ್ಲ. ಸನಾತನ ಧರ್ಮದ ದೇಗುಲಗಳಲ್ಲಿ ಐದು ದೇವರ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಪೂಜೆಗಷ್ಟೇ ಅವಕಾಶವಿದೆ ಎಂದು ಅವರು ಸ್ಪಷ್ಟಪಡಿಸಿದರು.

ಭೂತೇಶ್ವರ ಹಾಗೂ ಅಗಸ್ತೇಶ್ವರ ದೇವಾಲಯಗಳಲ್ಲಿರುವ ಸಾಯಿಬಾಬು ಮೂರ್ತಿಗಳನ್ನು ಮುಂದಿನ ವಾರದೊಳಗೆ ತೆರವುಗೊಳಿಸಲಾಗುವುದು ಎಂದು ಶರ್ಮಾ ಹೇಳಿದ್ದಾರೆ. ಸಾಯಿಬಾಬಾ ಹಿಂದೂ ದೇವರಲ್ಲ. ಪ್ರಾಚೀನ ಪುರಾಣಗಳಲ್ಲಿ ಸಾಯಿಬಾಬಾ ಅವರ ಉಲ್ಲೇಖವಿಲ್ಲ ಎದು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments