Tuesday, September 17, 2024
Google search engine
Homeತಾಜಾ ಸುದ್ದಿಗೋಟ್ ಚಿತ್ರಕ್ಕೆ 200 ಕೋಟಿ ಸಂಭಾವನೆ ಪಡೆದ ವಿಜಯ್!

ಗೋಟ್ ಚಿತ್ರಕ್ಕೆ 200 ಕೋಟಿ ಸಂಭಾವನೆ ಪಡೆದ ವಿಜಯ್!

ತಳಪತಿ ವಿಜಯ್ ನಟಿಸುತ್ತಿರುವ ಕೊನೆಯ ಚಿತ್ರ ಎಂದು ಹೇಳಲಾಗಿರುವ ಗೋಟ್ (GOAT) ಚಿತ್ರಕ್ಕೆ ಪಡೆದ ಅಧಿಕೃತ ಸಂಭಾವನೆ 200 ಕೋಟಿ ರೂ.!

ರಾಜಕೀಯಕ್ಕೆ ಕಾಲಿಡುತ್ತಿರುವ ವಿಜಯ್ ಗೋಟ್ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದು, 150 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ನಿರ್ಮಾಪಕಿ ಅರ್ಚನಾ ಕಲಪತಿ ಸಂದರ್ಶನವೊಂದರಲ್ಲಿ ವಿಜಯ್ ಗೆ 200 ಕೋಟಿ ರೂ. ಸಂಭಾವನೆ ನೀಡಿದ್ದಾಗಿ ಅಧಿಕೃತವಾಗಿ ದೃಢಪಡಿಸಿದ್ದಾರೆ.

ಒಂದು ವೇಳೆ ಇದು ನಿಜವಾದರೆ ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ನಟ ಎಂಬ ಗೌರವಕ್ಕೆ ವಿಜಯ್ ಪಾತ್ರರಾಗಲಿದ್ದಾರೆ. ಆದರೆ ಚಿತ್ರ ಬಿಡುಗಡೆ ಆದ ನಂತರ ಷೇರು ಎಷ್ಟು ಮೊತ್ತ ಬರುತ್ತದೆ ಎಂಬುದು ದೃಢಪಡಬೇಕಿದೆ.

ರಜನಿಕಾಂತ್ ಅಣ್ಣಯ್ಯ ಚಿತ್ರಕ್ಕಾಗಿ ಒಟ್ಟಾರೆ 250 ಕೋಟಿ ರೂ. ಸಂಭಾವನೆ ಪಡೆದಿದ್ದರು. ಅಲ್ಲದೇ ಹೊಸ ಚಿತ್ರಗಳು ಸರಣಿಯಲ್ಲಿ ಬಿಡುಗಡೆ ಆಗುತ್ತಿದ್ದು, ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬುದು ಇನ್ನೂ ದೃಢಪಟ್ಟಿಲ್ಲ.

ಗೋಟ್ ಚಿತ್ರದ ಬಜೆಟ್ 340 ಕೋಟಿ ರೂ. ಆಗಿದ್ದು, ವಿಜಯ್ ಸಂಭಾವನೆ ಚಿತ್ರದ ಬಜೆಟ್ ಗಿಂತ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಈ ಹಿಂದೆ ಬಿಜಿಲ್ ಚಿತ್ರದಲ್ಲೂ ದೊಡ್ಡ ಮೊತ್ತವನ್ನೇ ನೀಡಿದ್ದು, ಆ ಚಿತ್ರವೂ ಭಾರೀ ಲಾಭವನ್ನೇ ತಂದುಕೊಟ್ಟಿತ್ತು.

ಇತ್ತೀಚಿನ ಕೆಲವು ವರ್ಷಗಳಲ್ಲಿ ವಿಜಯ್ ಅವರ ಚಿತ್ರಗಳು ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಅವರ ಸಂಭಾವನೆ ಕೂಡ ಹೆಚ್ಚಾಗಿದೆ. ಅಲ್ಲದೇ ಗೋಟ್ ಚಿತ್ರ ಬಿಡುಗಡೆಗೆ ಮುನ್ನವೇ ಲಾಭದತ್ತ ಮುಖ ಮಾಡಿದೆ. ಅಲ್ಲದೇ ಮುಂಗಡ ಬುಕ್ಕಿಂಗ್ ನಲ್ಲೂ ದಾಖಲೆ ಮಾಡಿದೆ ಎಂದು ಹೇಳಲಾಗಿದ್ದು, ಈ ಎಲ್ಲಾ ಲೆಕ್ಕಾಚಾರದ ನಂತರ 200 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎಂದು ನಿರ್ಮಾಪಕಿ ಅರ್ಚನಾ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments