Kannadavahini

ಬಾರಿಸು ಕನ್ನಡ ಡಿಂಡಿಮವ

ಕ್ರೀಡೆ ತಾಜಾ ಸುದ್ದಿ

ವಿರಾಟ್ ಕೊಹ್ಲಿ ಭಾರತದ ನಂ.1 ಸೆಲೆಬ್ರೆಟಿ, ಶಾರೂಖ್, ರಣವೀರ್ ಸ್ಥಾನ ಎಷ್ಟು ಗೊತ್ತಾ?

ಬಾಲಿವುಡ್ ಸ್ಟಾರ್ ನಟ ಶಾರೂಖ್ ಖಾನ್, ರಣವೀರ್ ಸಿಂಗ್ ಅವರನ್ನೇ ಹಿಂದಿಕ್ಕಿದ ಭಾರತ ತಂಡದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಭಾರತದಲ್ಲಿ ಅತ್ಯಂತ ಜನಪ್ರಿಯ ಹಾಗೂ ಮೌಲ್ಯಯುತ ಸೆಲೆಬ್ರೆಟಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಪ್ರಸ್ತುತ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ನಲ್ಲಿ ಭಾರತ ತಂಡದಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ ರನ್ ಕೊರತೆ ಎದುರಿಸುತ್ತಿದ್ದರೂ ಅವರ ಜನಪ್ರಿಯತೆಗೆ ಮಾತ್ರ ಯಾವುದೇ ಧಕ್ಕೆ ಬಂದಿಲ್ಲ.

ಕಳೆದ ವರ್ಷಕ್ಕೆ ಹೋಲಿಸಿದರೆ ವಿರಾಟ್ ಕೊಹ್ಲಿ ಅವರ ಮೌಲ್ಯ ಶೇ.29ರಷ್ಟು ಹೆಚ್ಚಾಗಿದೆ. ಪ್ರಸ್ತುತ ಕೊಹ್ಲಿಯ ಬ್ರ್ಯಾಂಡ್ ಮೌಲ್ಯ 227.9 ದಶಲಕ್ಷ ಡಾಲರ್ ಆಗಿದೆ. ಬಾಲಿವುಡ್ ನಟ ರಣವೀರ್ ಸಿಂಗ್ ಮೌಲ್ಯ 203.51 ದಶಲಕ್ಷ ಡಾಲರ್ ಆಗಿದ್ದು ಎರಡನೇ ಸ್ಥಾನದಲ್ಲಿದ್ದಾರೆ.

ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಮಾಲೀಕ ಹಾಗೂ ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್ ಮೌಲ್ಯ 120.7 ದಶಲಕ್ಷ ಡಾಲರ್ ಗೆ ಇಳಿದಿದ್ದು, ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಭಾರತ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಹೇಂದ್ರ ಸಿಂಗ್ ಧೋನಿ ಮತ್ತು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ. ಧೋನಿ ಮೌಲ್ಯ 95.8 ದಶಲಕ್ಷ ಡಾಲರ್ ಹಾಗೂ ಸಚಿನ್ ಮೌಲ್ಯ 91.3 ದಶಲಕ್ಷ ಡಾಲರ್ ಆಗಿದೆ.

LEAVE A RESPONSE

Your email address will not be published. Required fields are marked *