ಹರಿಯಾಣದ ಆರಂಭಿಕ ಆಟಗಾರ ಯಶುವರ್ಧನ್ ದಲಾಲ್ ಕರ್ನಲ್ ಸಿಕೆ ನಾಯ್ಡು ಟ್ರೋಫಿಗಾಗಿ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಅಜೇಯ 426 ರನ್ ಬಾರಿಸಿ ದಾಖಲೆ ಬರೆದಿದ್ದಾರೆ.
25 ವರ್ಷದೊಳಗಿನವರ ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಹರಿಯಾಣ ಪರ ಯಶುವರ್ಧನ್ ದಲಾಲ್ ಮತ್ತು ಅರ್ಷ್ ರಂಗಾ ಮೊದಲ ವಿಕೆಟ್ ಗೆ 410 ರನ್ ಭರ್ಜರಿ ಜೊತೆಯಾಟ ನಿಭಾಯಿಸಿದರು.
ಅರ್ಷ್ ರಂಗಾ 151 ರನ್ ಬಾರಿಸಿ ಔಟಾದರೆ, ಯಶುವರ್ಧನ್ ದಿನದಾಂತ್ಯಕ್ಕೆ 463 ಎಸೆತಗಳಲ್ಲಿ 46 ಬೌಂಡರಿ ಮತ್ತು 12 ಸಿಕ್ಸರ್ ಒಳಗೊಂಡ 426 ರನ್ ಬಾರಿಸಿ ಔಟಾಗದೇ ಉಳಿದಿದ್ದಾರೆ. ಯಶುವರ್ಧನ್ ಸಾಹಸದಿಂದ ಹರಿಯಾಣ ತಂಡ 8 ವಿಕೆಟ್ ಕಳೆದುಕೊಂಡು 732 ರನ್ ಗಳಿಸಿದೆ.
ಯಶುವರ್ಧನ್ ಇದೇ ಮೊದಲ ಬಾರಿಗೆ ದೊಡ್ಡ ಮೊತ್ತ ಗಳಿಸಿಲ್ಲ. 2016ರಲ್ಲಿ 16 ವರ್ಷದೊಳಗಿನವರ ಕ್ರಿಕೆಟ್ ಪಂದ್ಯದಲ್ಲಿ 237 ರನ್ ಗಳಿಸಿದ್ದರು.
Leave a Reply