Friday, May 15, 2026
Google search engine
Homeಕ್ರೀಡೆ16 ವರ್ಷದ ಹಿಂದಿನ ಕುಂಬ್ಳೆ ದಾಖಲೆ ಮುರಿದ ಹಾರ್ದಿಕ್ ಪಾಂಡ್ಯ!

16 ವರ್ಷದ ಹಿಂದಿನ ಕುಂಬ್ಳೆ ದಾಖಲೆ ಮುರಿದ ಹಾರ್ದಿಕ್ ಪಾಂಡ್ಯ!

ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಪಡೆದು ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿ 5 ವಿಕೆಟ್ ಪಡೆದ ಮೊದಲ ನಾಯಕ ಎಂಬ ದಾಖಲೆ ಬರೆದಿದ್ದಾರೆ.

ಲಕ್ನೋದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 5 ವಿಕೆಟ್ ಪಡೆದು 16 ವರ್ಷಗಳ ಹಿಂದೆ ಕರ್ನಾಟಕ ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿದಿದ್ದಾರೆ.

ಹಾರ್ದಿಕ್ ಪಾಂಡ್ಯ ಲಕ್ನೋ ವಿರುದ್ಧ ಬೌಲಿಂಗ್ ನಲ್ಲಿ 4 ಓವರ್ ದಾಳಿಯಲ್ಲಿ 36 ರನ್ ನೀಡಿ 4 ವಿಕೆಟ್ (4-0-36-5 ) ಪಡೆದರು. ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಅನಿಲ್ ಕುಂಬ್ಳೆ 2019ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ಮೈದಾನದಲ್ಲಿ 4 ಓವರ್ ಎಸೆದು 16 ರನ್ ನೀಡಿ 4 ವಿಕೆಟ್ ಪಡೆದಿದ್ದರು.

ಇದಕ್ಕೂ ಮುನ್ನ ಕುಂಬ್ಳೆ 2010ರ ಐಪಿಎಲ್ ನಲ್ಲಿ ನವೀ ಮುಂಬೈ ಮೈದಾನದಲ್ಲಿ ಇದೇ ಡೆಕ್ಕನ್ ಚಾರ್ಜರ್ಸ್ ವಿರುದ್ಧ 3.3-0-14-4 ಸಾಧನೆ ಮಾಡಿದ್ದರು. ಈ ಎರಡೂ ದಾಖಲೆಗಳನ್ನು ಯಾವುದೇ ಐಪಿಎಲ್ ತಂಡದ ನಾಯಕ ಮಾಡಿರಲಿಲ್ಲ. ಇದೀಗ 16 ವರ್ಷಗಳ ನಂತರ ಹಾರ್ದಿಕ್ ಪಾಂಡ್ಯ ಮುರಿದಿದ್ದಾರೆ.

ಇದಕ್ಕೂ ಮುನ್ನ ನಾಯಕರಾಗಿ ಶೇನ್ ವಾರ್ನ್ ಮತ್ತು ಯುವರಾಜ್ ಸಿಂಗ್ 4 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ 4-0-31-3 ಶ್ರೇಷ್ಠ ಸಾಧನೆ ಮಾಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments