Sunday, June 28, 2026
Google search engine
Homeಅಪರಾಧಅತ್ಯಾಚಾರಕ್ಕೆ ಯತ್ನ, 6 ವರ್ಷದ ಬಾಲಕಿಯ ಮರ್ಮಾಂಗಕ್ಕೆ ರಾಡ್ ಹಾಕಿದ ಕಿರಾತಕ!

ಅತ್ಯಾಚಾರಕ್ಕೆ ಯತ್ನ, 6 ವರ್ಷದ ಬಾಲಕಿಯ ಮರ್ಮಾಂಗಕ್ಕೆ ರಾಡ್ ಹಾಕಿದ ಕಿರಾತಕ!

ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ನಂತರ ಆಕೆಯ ಮರ್ಮಾಂಗಕ್ಕೆ ರಾಡ್ ತುರುಕಿ ಪರಾರಿಯಾದ ಕಿರಾತಕನನ್ನು ಗುಜರಾತ್ ನ ರಾಜಕೋಟ್ ಪೊಲೀಸರು ಬಂಧಿಸಿದ್ದಾರೆ.

ರಾಜ್ ಕೋಟ್ ನ ಅಟ್ಕೊಟ್ ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪೊಲೀಸರು 100ಕ್ಕೂ ಅಧಿಕ ಮಂದಿಯ ತಪಾಸಣೆ ನಡೆಸಿದ ನಂತರ 35 ವರ್ಷದ ಫಾರ್ಮ್ಸ್ ಹೌಸ್ ನೌಕರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾಹೋದ್ ಜಿಲ್ಲೆಯಿಂದ ಕೃಷಿ ಕೆಲಸಕ್ಕಾಗಿ ವಲಸೆ ಬಂದಿದ್ದ ಕುಟುಂಬಕ್ಕೆ ಸೇರಿದ ಬಾಲಕಿ ಸಮೀಪದ ಮೈದಾನದಲ್ಲಿ ಅಪರಿಚಿತ ವ್ಯಕ್ತಿ ಹಿಡಿದು ಅತ್ಯಾಚಾರಕ್ಕೆ ಯತ್ನಿಸಿದ್ದ. ಬಾಲಕಿ ಕಿರುಚಿದ್ದರಿಂದ ಸಿಟ್ಟೆಗೆದ್ದ ಕಿರಾತಕ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ತುರುಕಿ ಪರಾರಿಯಾಗಿದ್ದ.

ಕುಟುಂಬದವರು ಬಾಲಕಿಯನ್ನು ಹುಡುಕಿಕೊಂಡು ಮೈದಾನದ ಬಳಿ ಬಂದಾದ ಅಸ್ವಸ್ಥಳಾಗಿ ಬಿದ್ದದ್ದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರು. ಡಿಸೆಂಬರ್ 4ರಂದು ಈ ಘಟನೆ ನಡೆದಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕಿ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದು, ಕೆಲವು ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಣಗಿಸಿದ ಪೊಲೀಸ್ ಇಲಾಖೆ ಆರೋಪಿ ಪತ್ತೆಗೆ 10 ತಂಡ ರಚಿಸಿದ್ದು, 100ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದರು. ಬಾಲಕಿ ಆರೋಪಿಯ ಗುರುತು ಪತ್ತೆ ಹಚ್ಚಿದಾಗ ಕೂಡಲೇ ಬಂಧಿಸಿದ್ದಾರೆ.

ಆರೋಪಿ ಮಧ್ಯಪ್ರದೇಶದ ಅಲಿರಾಜ್ ಪುರದ ನಿವಾಸಿಯಾಗಿದ್ದಾನೆ. ಪ್ರಕರಣದಲ್ಲಿ ಆರೋಪಿ ಒಬ್ಬನೇ ಆಗಿದ್ದು, ಸಹಚರರು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments