Sunday, September 13, 2026
Google search engine
Homeದೇಶಮಧ್ಯಪ್ರಾಚ್ಯ ಯುದ್ಧ: ಭಾರತದಲ್ಲಿ ಗ್ಯಾಸ್, ಅಡುಗೆ ಅನಿಲ ದರ ಏರಿಕೆ

ಮಧ್ಯಪ್ರಾಚ್ಯ ಯುದ್ಧ: ಭಾರತದಲ್ಲಿ ಗ್ಯಾಸ್, ಅಡುಗೆ ಅನಿಲ ದರ ಏರಿಕೆ

ನವದೆಹಲಿ:  ಇರಾನ್-ಇಸ್ರೇಲ್- ಅಮೆರಿಕ ನಡುವಣ ಯುದ್ಧ ವಾರ ಕಳೆದರೂ ನಿಲ್ಲುವ ಸೂಚನೆ ಕಾಣುತ್ತಿಲ್ಲ. ಇದರಿಂದ ಗ್ಯಾಸ್ ಸಿಲಿಂಡರ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆ ಬಿಸಿ ಭಾರತೀಯರಿಗೆ ತಟ್ಟಿದೆ.

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಹೆಚ್ಚುತ್ತಿರುವ ಇಂಧನ ವೆಚ್ಚಗಳ ನಡುವೆ ದೇಶೀಯ ಎಲ್‌ಪಿಜಿ ಬೆಲೆಯನ್ನು 60 ರೂ. ಹೆಚ್ಚಿಸಲಾಗಿದ್ದು, ವಾಣಿಜ್ಯ ಸಿಲಿಂಡರ್‌ಗಳ ಬೆಲೆ 114.5 ರೂ. ಹೆಚ್ಚಾಗಿದೆ. ಅಡುಗೆ ಅನಿಲ ದರ 855 ರೂ.ನಿಂದ 915 ರೂ.ಗೆ ಏರಿಕೆಯಾಗಿದ್ದರೆ, ವಾಣಿಜ್ಯ ಬಳಕೆಯ ಸಿಲಿಂಡರ್ ದರ 1814ರೂ.ನಿಂದ 1929 ರೂ.ಗೆ ಏರಿಕೆಯಾಗಿದೆ.

ಉಜ್ವಲ ಫಲಾನುಭವಿಗಳನ್ನು ಹೊರತುಪಡಿಸಿ, ಹೆಚ್ಚಿನ ಮನೆಗಳು ಬಳಸುತ್ತಿರುವ ಸಬ್ಸಿಡಿ ರಹಿತ ಎಲ್‌ಪಿಜಿ, ದೆಹಲಿಯಲ್ಲಿ ಈ ಹಿಂದೆ 853 ರೂ.ಗಳಿಂದ ಈಗ 913 ರೂ.ಗಳಿಗೆ ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ವೆಬ್‌ಸೈಟ್ ತಿಳಿಸಿದೆ. ಬೆಲೆ ಏರಿಕೆ ಮಾರ್ಚ್ 7 ರಿಂದ ಜಾರಿಗೆ ಬರಲಿದೆ ಎಂದು ವೆಬ್‌ಸೈಟ್ ತೋರಿಸಿದೆ.

ಮುಂಬೈನಲ್ಲಿ, ಸಬ್ಸಿಡಿ ರಹಿತ ಎಲ್‌ಪಿಜಿ ಈಗ 912.50 ರೂ., ಕೋಲ್ಕತ್ತಾದಲ್ಲಿ 939 ರೂ. ಮತ್ತು ಚೆನ್ನೈನಲ್ಲಿ 928.50 ರೂ.ಗಳಿಗೆ ಏರಿಕೆಯಾಗಿದೆ ಎಂದು ಐಒಸಿ ವೆಬ್‌ಸೈಟ್ ತಿಳಿಸಿದೆ. ಬೆಂಗಳೂರಿನಲ್ಲಿ, ಹಿಂದಿನ 855.5 ರೂ.ಗಳಿಂದ ಈಗ 915.5 ರೂ.ಗಳಿಗೆ ಏರಿಕೆಯಾಗಿದೆ.

ಕಳೆದ ಒಂದು ವರ್ಷದಲ್ಲಿ ಈಗ ಬೆಲೆಯನ್ನು ಎರಡು ಬಾರಿ ಹೆಚ್ಚಿಸಲಾಗಿದೆ. ಕೊನೆಯದಾಗಿ ಏಪ್ರಿಲ್ 2025 ರಲ್ಲಿ 50 ರೂ.ಗಳಿಗೆ ಏರಿಕೆ ಮಾಡಲಾಗಿತ್ತು.

ಅಡುಗೆ ಎಣ್ಣೆ 8 ರೂ.ಹೆಚ್ಚಳ

ಮಧ್ಯಪ್ರಾಚ್ಯದಲ್ಲಿ ವಾರ ಕಳೆದರೂ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ದೇಶದಲ್ಲಿ ಅಡುಗೆ ಎಣ್ಣೆ ದರ 8 ರೂ. ಏರಿಕೆಯಾಗಿದೆ.

ಅಡುಗೆ ಎಣ್ಣೆ ದರ ಲೀಟರ್ ಗೆ 168 ರೂ.ಗೆ ಏರಿಕೆಯಾಗಿದ್ದು, ಇರಾನ್-ಇಸ್ರೇಲ್-ಅಮೆರಿಕ ನಡುವಣ ಯುದ್ಧ ಮುಂದುವರಿದರೆ ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆ ದರ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಭಾರತದ ಕುಕ್ಕುಟೋದ್ಯಮಕ್ಕೆ ಹೊಡೆತ

ಅರಬ್ ರಾಷ್ಟ್ರಗಳ ಮೇಲೆ ಇರಾನ್ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಮೊಟ್ಟೆ ದರ ಇಳಿಕೆಯಾಗಲಿದ್ದು, ಕುಕ್ಕುಟೊದ್ಯಮಕ್ಕೆ ಹೊಡೆತ ಬೀಳಲಿದೆ.

ಭಾರತದಿಂದ ಅರಬ್ ರಾಷ್ಟ್ರಗಳಿಗೆ ಸುಮಾರು 1 ಕೋಟಿಯಷ್ಟು ಮೊಟ್ಟೆಗಳು ರಫ್ತಾಗುತ್ತಿದ್ದವು. ಆದರೆ ಯುದ್ಧದ ಹಿನ್ನೆಲೆಯಲ್ಲಿ ಮೋಟೆ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಕುಕ್ಕುಟೋದ್ಯಮ ತತ್ತರಿಸಿದೆ.

ಪ್ರಸ್ತುತ ಭಾರತದಲ್ಲಿ ಸರಕು ಮಾರುಕಟ್ಟೆಯಲ್ಲಿ ಮೊಟ್ಟೆ ದರ 4.80 ರೂ. ಇದ್ದರೆ ಚಿಲ್ಲರೆ ದರ 5.80 ರಿಂದ 6 ರೂ.ವರೆಗೂ ಇದೆ. ಒಂದು ವೇಳೆ ಮೊಟ್ಟೆ ರಫ್ತು ಮಾಡಲು ಮುಂದಿನ ದಿನಗಳಲ್ಲಿ ಸಾಧ್ಯವಾಗದೇ ಇದ್ದರೆ ಮೊಟ್ಟೆ ದರ ಕುಸಿಯುವ ಜೊತೆಗೆ ಕುಕ್ಕುಟೋದ್ಯಮ ದೊಡ್ಡ ನಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments