ಭಾರೀ ಮಳೆಯ ಕಾರಣ ಮುಂಬೈನಲ್ಲಿ ಮೋನೋರೈಲು ಬ್ರೇಕ್ ಫೇಲ್ ಆಗಿ ದಾರಿ ಮಧ್ಯೆದಲ್ಲೇ ಸಿಲುಕಿಕೊಂಡಿದ್ದು, ಇದರಿಂದ ಸುಮಾರು 200 ಪ್ರಯಾಣಿಕರು ಸುಮಾರು 2 ಗಂಟೆಗಳ ಕಾಲ ಸಿಲುಕಿದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.
ಮೋನೋ ರೈಲು ವಿದ್ಯುತ್ ಆಧರಿಸಿದ ಹಳಿಗಳ ಮೇಲೆ ಸಂಚರಿಸುತ್ತದೆ. ಆದರೆ ಮಳೆಯ ಕಾರಣ ವಿದ್ಯುತ್ ಪ್ರಸಾರದಲ್ಲಿ ತೊಡಕು ಉಂಟಾಗಿದ್ದರಿಂದ ರೈಲು ದಿಢೀರನೆ ನಿಲುಗಡೆ ಆಗಿದೆ.
ರೈಲು ತಾಂತ್ರಿಕ ಕಾರಣದಿಂದ ಮಧ್ಯದಲ್ಲೇ ನಿಲುಗಡೆ ಆಗಿದ್ದು, ಮಾಹಿತಿ ದೊರೆಯುತ್ತಿದ್ದಂತೆ ತಂಡ ಕೂಡಲೇ ಸ್ಥಳಕ್ಕೆ ತೆರಳಿದ್ದು, ಪ್ರಯಾಣಿಕರನ್ನು ರಕ್ಷಿಸುವ ಕೆಲಸ ನಡೆದಿದೆ ಎಂದು ಮುಂಬೈ ಪೆಟ್ರೋಪಾಲಿಟಿನ್ ರೀಜನ್ ಡೆವಲಪ್ ಮೆಂಟ್ ಪ್ರಾಧಿಕಾರ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಸಂಜೆ 6.15ರ ಸುಮಾರಿಗೆ ಚೆಂಬೂರ್ ಮತ್ತು ಭಕ್ತಿ ಪಾರ್ಕ್ ನಡುವಿನ ರೈಲು ನಿಲ್ದಾಣಗಳ ಮಧ್ಯೆ ರೈಲು ನಿಂತಿದ್ದು, ೨೦೦ ಪ್ರಯಾಣಿಕರು ಇಳಿಯಲು ಆಗದೇ ಪರದಾಡುತ್ತಿದ್ದರು.
ಪ್ರಯಾಣಿಕರು ಮೋನೋ ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಆತಂಕಕ್ಕೆ ಒಳಗಾಗುವುದು ಬೇಡ. ಪ್ರಯಾಣಿಕರನ್ನು ಸುರಕ್ಷತೆ ಕಡೆ ಗಮನ ಹರಿಸಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಭರವಸೆ ನೀಡಿದ್ದಾರೆ.