Monday, May 11, 2026
Home ದೇಶ ಆಲಿಕಲ್ಲು ಬಡಿದು ವಿಮಾನಕ್ಕೆ ಹಾನಿ: 200 ಪ್ರಯಾಣಿಕರು ಪವಾಡಸದೃಶ ಪಾರು

ಆಲಿಕಲ್ಲು ಬಡಿದು ವಿಮಾನಕ್ಕೆ ಹಾನಿ: 200 ಪ್ರಯಾಣಿಕರು ಪವಾಡಸದೃಶ ಪಾರು

by Vahini
0 comments
indigo fligt

ಹವಾಮಾನ ವೈಪರಿತ್ಯದ ನಡುವೆ ಹಾರಾಟ ನಡೆಸಿದ್ದ ಇಂಡಿಗೋ ವಿಮಾನಕ್ಕೆ ಆಗಸದಲ್ಲಿ ಆಲಿಕಲ್ಲು ಬಲವಾಗಿ ಬಡಿದು ಹಾನಿಗೊಳಗಾಗಿದ್ದು, ಪೈಲೆಟ್ ಸಮಯಪ್ರಜ್ಞೆಯಿಂದ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಇದರಿಂದ 200 ಪ್ರಯಾಣಿಕರು ಪವಾಡಸದೃಶವಾಗಿ ಪಾರಾಗಿದ್ದಾರೆ.

ಬುಧವಾರ ಸಂಜೆ ಶ್ರೀನಗರದಿಂದ ದೆಹಲಿಗೆ ಬರುತ್ತಿದ್ದ ಇಂಡಿಗೋ ವಿಮಾನ 6ಇ2142 ಸಂಚರಿಸುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಆಲಿಕಲ್ಲು ಬಡಿದ ಪರಿಣಾಮ ವಿಮಾನದ ಮೂಗು ಹಾನಿಗೊಳಗಾಗಿದೆ.

ಹವಾಮಾನ ವೈಪರಿತ್ಯದಲ್ಲಿ ದೆಹಲಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ-ಗಾಳಿ ಆಗುತ್ತಿದ್ದು ವಿಮಾನ ಒಂದು ಹಂತದಲ್ಲಿ ಬಿರುಗಾಳಿಗೆ ತತ್ತರಿಸಿ ಅಲುಗಾಡಲು ಆರಂಭಿಸಿದ್ದು, ಪ್ರಯಾಣಿಕರು ಭಯದಿಂದ ಕಿರುಚಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಭಾರೀ ಗಾಳಿಯಿಂದ ವಿಮಾನ ಅಲುಗಾಡುತ್ತಿದ್ದರಿಂದ ಲ್ಯಾಂಡ್ ಮಾಡಲು ಪ್ರಯಾಸಪಡಬೇಕಾಯಿತು. ಈ ವೇಳೆ ಪೈಲೆಟ್ ಸಮಯಪ್ರಜ್ಞೆಯಿಂದ ಸಂಜೆ 6.30ರ ಸುಮಾರಿಗೆ ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಆಗಿದೆ. ಇದರಿಂದ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

You may also like

Leave a Comment

Our Company

Lorem ipsum dolor sit amet, consect etur adipiscing elit. Ut elit tellus, luctus nec ullamcorper mattis.

Newsletter

Laest News

@2021 – All Right Reserved. Designed and Developed by PenciDesign