Kannadavahini

ಬಾರಿಸು ಕನ್ನಡ ಡಿಂಡಿಮವ

aravind kejriwal
ದೇಶ ರಾಜಕೀಯ

ಧೈರ್ಯ ಇದ್ದರೆ ಯಮುನಾ ನದಿ ನೀರು ಕುಡಿಯಿರಿ: ಚುನಾವಣಾ ಆಯೋಗಕ್ಕೆ ಕೇಜ್ರಿವಾಲ್ ಸವಾಲು

ಯಮುನಾ ನದಿ ಎಷ್ಟು ವಿಷಕಾರಿ ಎಂಬುದು ತಿಳಿಯುವ ಧೈರ್ಯ ಇದ್ದರೆ ಇದನ್ನು ಕುಡಿಯುವ ಸಾಹಸ ಮಾಡಿ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಚುನಾವಣಾ ಆಯೋಗಕ್ಕೆ ಸವಾಲು ಹಾಕಿದ್ದಾರೆ.

ಯಮುನಾ ನದಿ ಕಲುಷಿತಗೊಂಡಿದ್ದು, ಬಿಜೆಪಿ ಸರ್ಕರ ವಿಷ ಹಾಕುತ್ತಿದೆ ಎಂಬ ಹೇಳಿಕೆ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರ ಚುನಾವಣಾ ಆಯೊಗ ಅರವಿಂದ್ ಕೇಜ್ರಿವಾಲ್ ಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಶುಕ್ರವಾರ 11 ಗಂಟೆಯೊಳಗೆ ಯಮುನಾ ನದಿಗೆ ವಿಷ ಸೇರಿಸಿದ ಕುರಿತ ದಾಖಲೆಗಳನ್ನು ಸಲ್ಲಿಸಿ ಎಂದು ಗಡುವು ನೀಡಿತ್ತು.

ಕೇಂದ್ರ ಚನಾವಣಾ ಆಯೋಗ ನೋಟಿಸ್ ನಲ್ಲಿ ೫ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆ ನೀಡಬೇಕು ಎಂದು ಸೂಚಿಸಿತ್ತು. ಇದರಲ್ಲಿ ಯಮುನಾ ನದಿಗೆ ಎಲ್ಲೆಲ್ಲಿ ವಿಷ ಬೆರೆಸಲಾಗಿದೆ. ಯಾರು ಬೆರೆಸಿದ್ದಾರೆ. ಯಾವ ವಿಷ ಬೆರೆಸಿದ್ದಾರೆ ಎಂಬುದು ಸೇರಿತ್ತು

ಆಯೋಗ ನೋಟಿಸ್ ಜಾರಿ ಮಾಡಿದ ಕೆಲವೇ ಗಂಟೆಗಳಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಜ್ರಿವಾಲ್, ಯಮುನಾ ನದಿ ಸ್ವಚ್ಛವಾಗಿದೆ ಎಂದು ನೀವು ನಂಬುತ್ತಿರಾ? ಹಾಗಾದರೆ ಈ ನೀರು ಕುಸಿಯುವ ಸಾಹಸ ಮಾಡಿ ಎಂದು ಸವಾಲು ಹಾಕಿದ್ದಾರೆ.

ಯಮುನಾ ನದಿಯಿಂದ ಸಂಗ್ರಹಿಸಿದ ನಾಲ್ಕು ಬಾಟಲ್ ನೀರನ್ನು ಆಯೋಗದ ನಾಲ್ವರು ಸದಸ್ಯರಿಗೆ ಕಳುಹಿಸಿಕೊಡುತ್ತಿದ್ದೇವೆ. ನಿಮಗೆ ಧೈರ್ಯ ಇದ್ದರೆ ಇದನ್ನು ಕುಡಿದು ತೋರಿಸಿ ಎಂದು ಕೇಜ್ರಿವಾಲ್ ಸವಾಲು ಹಾಕಿದರು.

LEAVE A RESPONSE

Your email address will not be published. Required fields are marked *