Sunday, May 31, 2026
Google search engine
Homeರಾಜ್ಯಶಿವಮೊಗ್ಗದಲ್ಲಿ ತಪ್ಪಿದ ದುರಂತ: ತುಂಗಾ ಸೇತುವೆ ಮೇಲೆ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು

ಶಿವಮೊಗ್ಗದಲ್ಲಿ ತಪ್ಪಿದ ದುರಂತ: ತುಂಗಾ ಸೇತುವೆ ಮೇಲೆ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು

ಚಲಿಸುತ್ತಿದ್ದ ರೈಲಿನಿದ 6 ಬೋಗಿಗಳು ಬೇರ್ಪಟ್ಟ ಘಟನೆ ಶಿವಮೊಗ್ಗ ನಗರದ ತುಂಗಾ ಸೇತುವೆಯ ಮೇಲೆ ಸಂಭವಿಸಿದೆ.

ಶಿವಮೊಗ್ಗ ನಗರದಲ್ಲಿ ಬುಧವಾರ ಮಧ್ಯಾಹ್ನ ರೈಲಿನ 6 ಬೋಗಿಗಳು ರೈಲಿನಿಂದ ಬೇರ್ಪಟ್ಟು ಹಳಿಯ ಮೇಲೆಯೇ ನಿಂತಿದ್ದರಿಂದ ದೊಡ್ಡ ರೈಲು ದುರಂತವೊಂದು ತಪ್ಪಿದೆ.

ಶಿವಮೊಗ್ಗ ನಗರದ ಹೊಳೆ ರೈಲು ನಿಲ್ದಾಣದ ಬಳಿ ತುಂಗಾ ಸೇತುವೆ ಮೇಲೆ 21 ಬೋಗಿಗಳ ಪ್ರಯಾಣಿಕ ರೈಲಿನ 6 ಬೋಗಿಗಳು ಬೇರ್ಪಟ್ಟು ತುಂಗಾ ಸೇತುವೆ ಮೇಲೆಯೇ ನಿಂತಿದ್ದವು.

48 ನಿಮಿಷಗಳ ಕಾಲ ಕಾರ್ಯಾಚಾರಣೆ ನಡೆಸಿದ ನಂತರ ರೈಲ್ವೆ ಸಿಬ್ಬಂದಿಗಳು ಕೊನೆಗೂ ಯಶಸ್ವಿಯಾಗಿ ಬೇರ್ಪಟ್ಟ ಬೋಗಿಗಳನ್ನು ಜೋಡಿಸಿದ್ದರಿಂದ ಸುಮಾರು 50 ನಿಮಿಷಗಳ ನಂತರ ರೈಲು ಸಂಚಾರ ಪುನರಾರಂಭಗೊಂಡಿದ್ದು, ಪ್ರಯಾಣಿಕರು ನಿಟ್ಟುಸಿರುಬಿಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments