Sunday, May 17, 2026
Google search engine
Homeಕ್ರೀಡೆಸಿಎಸ್ ಕೆಗೆ ತವರಿನಲ್ಲಿ 5ನೇ ಸೋಲು, ಪಂಜಾಜ್ ಪ್ಲೇಆಫ್ ಆಸೆ ಜೀವಂತ

ಸಿಎಸ್ ಕೆಗೆ ತವರಿನಲ್ಲಿ 5ನೇ ಸೋಲು, ಪಂಜಾಜ್ ಪ್ಲೇಆಫ್ ಆಸೆ ಜೀವಂತ

ಸ್ಪಿನ್ನರ್ ಯಜುರ್ವೆಂದ್ರ ಚಾಹಲ್ ಹ್ಯಾಟ್ರಿಕ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ 4 ವಿಕೆಟ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯ ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ.

ಚೆನ್ನೈನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 19.2 ಓವರ್ ಗಳಲ್ಲಿ 190 ರನ್ ಗೆ ಆಲೌಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 19.4 ಓವರ್ ಗಳಲ್ಲಿ ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ಚೆನ್ನೈ ತವರಿನಲ್ಲಿ 5ನೇ ಬಾರಿ ಸೋಲುಂಡಿದ್ದು, ಈ ಮೂಲಕ 10 ಪಂದ್ಯಗಳಿಂದ 2 ಜಯ ಹಾಗೂ 8 ಸೋಲಿನೊಂದಿಗೆ ಪ್ಲೇಆಫ್ ರೇಸ್ ನಿಂದ ಹೊರಬಿದ್ದಿತು.

ಪಂಜಾಬ್ ಕಿಂಗ್ಸ್ 10 ಪಂದ್ಯಗಳಿಂದ 6 ಜಯ ಹಾಗೂ 3 ಸೋಲು ಹಾಗೂ 1 ಪಂದ್ಯ ರದ್ದಾಗಿದ್ದರಿಂದ ಗಳಿಸಿದ 1 ಸೇರಿದಂತೆ 13 ಅಂಕದೊಂದಿಗೆ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕುವ ಮೂಲಕ ಪ್ಲೇಆಫ್ ರೇಸ್ ಆಸೆ ಜೀವಂತವಾಗಿರಿಸಿಕೊಂಡಿತು.

ಪಂಜಾಬ್ ತಂಡಕ್ಕೆ ಪ್ರಭು ಸಿಮ್ರಾನ್ ಸಿಂಗ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅರ್ಧಶತಕಗಳಿಂದ ತಂಡವನ್ನು ಗೆಲುವಿನ ದಡ ಸೇರಿಸಿದರು. ಪ್ರಭು ಸಿಮ್ರಾನ್ 36 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ನೊಂದಿಗೆ 54 ರನ್ ಗಳಿಸಿದರು. ಇದು ಪ್ರಭು ಸಿಮ್ರಾನ್ ಗೆ 4ನೇ ಅರ್ಧಶತಕವಾಗಿದೆ.

ಮತ್ತೊಂದೆಡೆ ನಾಯಕ ಶ್ರೇಯಸ್ ಅಯ್ಯರ್ 41 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 72 ರನ್ ಬಾರಿಸಿ ತಂಡವನ್ನು ಗೆಲುವಿನ ದಡದತ್ತ ಕೊಂಡೊಯ್ದರು. ಶಶಾಂಕ್ 12 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸೇರಿ 23 ರನ್ ಸಿಡಿಸಿದರು.

ಖಲೀಲ್ ಮತ್ತು ಪತಿರಾಣ ಮತ್ತು ತಲಾ 2 ವಿಕೆಟ್ ಪಡೆದಿದ್ದೂ ಅಲ್ಲದೇ ಕೊನೆಯಲ್ಲಿ ತಿರುಗೇಟು ನೀಡಿದರೂ ನಾಟಕೀಯ ತಿರುವಿನ ನಂತರವೂ ತಂಡ ಗೆಲುವಿನ ನಗೆ ಬೀರಿತು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸ್ಯಾಮ್ ಕರನ್ (88 ರನ್, 47 ಎಸೆತ, 9 ಬೌಂಡರಿ, 4 ಸಿಕ್ಸರ್) ಅರ್ಧಶತಕದ ನೆರವಿನಿಂದ ಉತ್ತಮ ಪೇರಿಸಿತು. ಆದರೆ ಯಜುರ್ವೆಂದ್ರ ಚಾಹಲ್ ಹ್ಯಾಟ್ರಿಕ್ ಸೇರಿದಂತೆ ಒಂದೇ ಓವರ್ ನಲ್ಲಿ 4 ವಿಕೆಟ್ ಪಡೆದು ತಂಡ 200ರ ಗಡಿ ಹೊಸ್ತಿಲಲ್ಲಿ ಎಡವಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments