Sunday, May 31, 2026
Google search engine
Homeಕ್ರೀಡೆಆಟಗಾರರು ತೋಳಿಲ್ಲದ ಜೆರ್ಸಿ ಧರಿಸಿದರೆ ಬೀಳುತ್ತೆ ದಂಡ: ಐಪಿಎಲ್ ಹೊಸ ನಿಯಮ ಜಾರಿ!

ಆಟಗಾರರು ತೋಳಿಲ್ಲದ ಜೆರ್ಸಿ ಧರಿಸಿದರೆ ಬೀಳುತ್ತೆ ದಂಡ: ಐಪಿಎಲ್ ಹೊಸ ನಿಯಮ ಜಾರಿ!

ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೇಳೆ ಜಾರಿಗೆ ತರಲಾಗಿದ್ದ ಕೆಲವು ನಿಯಮಗಳನ್ನು ಬಿಸಿಸಿಐ ಐಪಿಎಲ್ ಗೂ ವಿಸ್ತರಿಸಿದ್ದು, ಮಾಸಾಂತ್ಯದಲ್ಲಿ ಆರಂಭವಾಗಲಿರುವ 2025ನೇ ಆವೃತ್ತಿಯಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ.

ಹೊಸ ನಿಯಮಗಳನ್ನು ಐಪಿಎಲ್ 10 ಫ್ರಾಂಚೈಸಿಗಳಿಗೆ ಕಳುಹಿಸಿಕೊಡಲಗಿದ್ದು, ಈ ನಿಯಮಗಳನ್ನು ಆಟಗಾರರು ಹಾಗೂ ತಂಡದ ಸಿಬ್ಬಂದಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಹೊಸ ನಿಯಮಗಳು

ಪಂದ್ಯದ ವೇಳೆ ಆಟಗಾರರು ತಂಡದ ಬಸ್ ನಲ್ಲಿಯೇ ಪ್ರಯಾಣಿಸಬೇಕು

ಆಟಗಾರರು ಅಭ್ಯಾಸದ ವೇಳೆ 2 ಬ್ಯಾಚ್ ಗಳಾಗಿ ತಂಡದ ಬಸ್ ನಲ್ಲಿಯೇ ಪ್ರಯಾಣಿಸಬೇಕು

ಅಭ್ಯಾಸದ ವೇಳೆಯೂ ಆಟಗಾರರ ಕುಟುಂಬದವರು ಡ್ರೆಸ್ಸಿಂಗ್ ರೂಮ್ ಪ್ರವೇಶಿಸುವಂತಿಲ್ಲ

ಬಸ್ ನಲ್ಲಿ ಪ್ರಯಾಣಿಸುವ ವೇಳೆ ತಂಡದ ವ್ಯವಸ್ಥಾಪಕ ಜೊತೆಯಲ್ಲಿಯೇ ಇರಬೇಕು.

ಪಂದ್ಯದ ವೇಳೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಟಗಾರರು ತೋಳಿಲ್ಲದ ಶರ್ಟ್ ಅಥವಾ ಜೆರ್ಸಿ ಧರಿಸುವಂತಿಲ್ಲ.

ಆಟಗಾರರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಬೇರೆ ವಾಹನದಲ್ಲಿ ಪ್ರಯಾಣಿಸಬಹುದು ಮತ್ತು ಆತಿಥ್ಯ ಪ್ರದೇಶದಿಂದ ತಂಡದ ಅಭ್ಯಾಸವನ್ನು ವೀಕ್ಷಿಸಬಹುದು.

ತಂಡದ ಸಿಬ್ಬಂದಿ ಸಂಖ್ಯೆ ಹೆಚ್ಚಳ ಮಾಡಬೇಕಾದರೆ (ಥ್ರೋ ಡೌನ್ ಸ್ಪೆಷಲಿಸ್ಟ್/ನೆಟ್ ಬೌಲರ್ಗಳು) ಬಿಸಿಸಿಐ ಅನುಮತಿ ಪಡೆಯಬೇಕು.

ಆಟಗಾರರು ಪಂದ್ಯದ ವೇಳೆ ಮಾನ್ಯುತೆ ಕಾರ್ಡ ತರಲು ಮರೆತರೆ, ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಸಡಿಲ ಅಥವಾ ತೋಳಿಲ್ಲದ ಜೆರ್ಸಿ ಧರಿಸಿದರೆ ದಂಡ ವಿಧಸಲಾಗುತ್ತದೆ.

ಹೆಚ್ಚುವರಿಯಾಗಿ, ಆಟಗಾರರು ತಮ್ಮ ಮಾನ್ಯತೆ ಕಾರ್ಡ್ ಅನ್ನು ಸ್ಥಳದಲ್ಲಿ ತರಲು ಮರೆತರೆ ಅಥವಾ ಸಡಿಲ ಮತ್ತು ತೋಳಿಲ್ಲದ ಬಟ್ಟೆಗಳನ್ನು ಧರಿಸಿ ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಕಾಣಿಸಿಕೊಂಡರೆ ಅವರಿಗೆ ದಂಡ ವಿಧಿಸಲಾಗುತ್ತದೆ.

ಪಂದ್ಯದ ವೇಳೆ ಆಟಗಾರರು ಹಾಗೂ ತಂಡದ ಸಿಬ್ಬಂದಿ ಮಾನ್ಯತೆ ಕಾರ್ಡ್ ಮೊದಲ ಬಾರಿ ಎಚ್ಚರಿಕೆ ನೀಡಲಾಗುತ್ತದೆ. ಎರಡನೇ ಬಾರಿ ಮರುಕಳಿಸಿದರೆ ದಂಡ ವಿಧಿಸಲಾಗುತ್ತದೆ.

ಅಭ್ಯಾಸದ ವೇಳೆ ಬ್ಯಾಟ್ಸ್ ಮನ್ ಗಳು ಚೆಂಡು ಬೌಂಡರಿ ಗೆರೆ ಹೊರಗೆ ಅಥವಾ ಎಲ್ ಇಡಿ ಬೋರ್ಡ್ ಗಳಿಗೆ ಹೊಡೆಯದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಪದೆಪದೇ ಪುನರಾವರ್ತನೆ ಆದರೆ ದಂಡ ವಿಧಿಸಲಾಗುವುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments