Monday, June 8, 2026
Google search engine
Homeಕ್ರೀಡೆನಾರ್ವೆ ಚೆಸ್‌ ಟೂರ್ನಿ ಗೆದ್ದು ಇತಿಹಾಸ ಬರೆದ ಪ್ರಜ್ಞಾನಂದ!

ನಾರ್ವೆ ಚೆಸ್‌ ಟೂರ್ನಿ ಗೆದ್ದು ಇತಿಹಾಸ ಬರೆದ ಪ್ರಜ್ಞಾನಂದ!

ಗ್ರ್ಯಾಂಡ್‌ ಮಾಸ್ಟರ್‌ ಆರ್.‌ ಪ್ರಜ್ಞಾನಂದ ನಾರ್ವೆ ಚೆಸ್‌ ಟೂರ್ನಿ ಗೆದ್ದು ಈ ಸಾಧನೆ ಮೊದಲ ಭಾರತೀಯ ಎಂಬ ಇತಿಹಾಸ ಬರೆದಿದ್ದಾರೆ.

20 ವರ್ಷದ ಯುವ ಆಟಗಾರ ಪ್ರಜ್ಞಾನಂದ ಶನಿವಾರ ನಡೆದ ಫೈನಲ್‌ ನಲ್ಲಿ ಜರ್ಮನಿಯ ವಿನ್ಸೆಂಟ್‌ ಕೇಮರ್‌ ಅವರನ್ನು ಮಣಿಸಿ ಅಪರೂಪದ ಸಾಧನೆಗೆ ಪಾತ್ರರಾದರು.

ಶನಿವಾರ ಬೆಳಿಗ್ಗೆ 15 ಅಂಕದೊಂದಿಗೆ ಮೂರನೇ ಸ್ಥಾನಿಯಾಗಿ ಆಟ ಆರಂಭಿಸಿದ ಪ್ರಜ್ಞಾನಂದ ಅದ್ಭುತ ಆಟದೊಂದಿಗೆ ಪೂರ್ಣ ಮೂರಂಕ ಗಿಟ್ಟಿಸಿದರು. ಈ ಮೂಲಕ 18 ಅಂಕದೊಂದಿಗೆ ಅಗ್ರಸ್ಥಾನ ಪಡೆದು ಪ್ರಶಸ್ತಿಗೆ ಮುತ್ತಿಕ್ಕಿದರು.

ಚೆನ್ನೈ ಮೂಲದ ಪ್ರಜ್ಞಾನಂದ ಚೆಸ್‌ ದಂತಕತೆ ವಿಶ್ವನಾಥನ್‌ ಆನಂದ್‌ ಮತ್ತು ಗುಕೇಶ್‌ ಅವರಿಂದಲೂ ಸಾಧ್ಯವಾಗದ ನಾರ್ವೆ ಪ್ರಶಸ್ತಿಯನ್ನೇ ಎರಡನೇ ಪ್ರಯತ್ನದಲ್ಲೇ ಗೆದ್ದು ಇತಿಹಾಸ ಬರೆದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments