Wednesday, May 13, 2026
Google search engine
HomeUncategorizedಮೈಸೂರಿಗೆ ವರ್ಷಾಂತ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಪ್ರವಾಸಿಗರು!

ಮೈಸೂರಿಗೆ ವರ್ಷಾಂತ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಪ್ರವಾಸಿಗರು!

ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ, ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಲ್ಲಿ ಸಫಾರಿ ಬಂದ್ ನಡುವೆಯೂ 2025ರ ವರ್ಷಾಂತ್ಯದಲ್ಲಿ ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರು ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಿದ್ದಾರೆ.

ಮೈಸೂರು ಅರಮನೆ ಮತ್ತು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ವರ್ಷಾಂತ್ಯದ ಸಂದರ್ಭದಲ್ಲಿ ಅಪಾರ ಪ್ರವಾಸಿಗರು ಭೇಟಿ ನೀಡಿದ್ದಾರೆ. ಕಳೆದ ವರ್ಷಗಳ ಅಂಕಿ ಅಂಶಗಳಿಗೆ ಹೋಲಿಸಿದರೆ ಸ್ವಲ್ಪಮಟ್ಟಿಗೆ ಇಳಿಕೆಯಾಗಿದ್ದರೂ ಭಾರಿ ಪ್ರಮಾಣದ ಬದಲಾವಣೆ ಕಂಡುಬಂದಿಲ್ಲ.

ಡಿ.21ರಿಂದ 31ರವರೆಗೆ ಮೈಸೂರು ಅರಮನೆಗೆ 2,11,639, ಚಾಮರಾಜೇಂದ್ರ ಮೃಗಾಲಯಕ್ಕೆ 2,27,135 ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದು ಕಳೆದ ವರ್ಷಗಳಿಗಿಂತಲೂ ಹೆಚ್ಚು ಎಂಬುದು ವಿಶೇಷ.

ಮೈಸೂರು ಅರಮನೆ: ವಿಶ್ವವಿಖ್ಯಾತ ಮೈಸೂರು ಅರಮನೆಗೆ ಡಿ.21ರಂದು 132 ವಿದೇಶಿಗರು ಸೇರಿ 16874, ಡಿ. 22ರಂದು 129 ವಿದೇಶಿಗರು ಸೇರಿ 11399, ಡಿ. 23ರಂದು 119 ವಿದೇಶಿಗರು ಸೇರಿ 11691, ಡಿ.24ರಂದು 114 ವಿದೇಶಿಗರು ಸೇರಿ 16788, ಡಿ.25ರಂದು 82 ವಿದೇಶಿಗರು ಸೇರಿ 24462, ಡಿ. 26ರಂದು 124 ವಿದೇಶಿಗರು ಸೇರಿ 25381, ಡಿ. 27ರಂದು 156 ವಿದೇಶಿಗರು ಸೇರಿ 28044, ಡಿ. 28ರಂದು 187 ವಿದೇಶಿಗರು ಸೇರಿ 27418, ಡಿ. 29ರಂದು 165 ವಿದೇಶಿಗರು ಸೇರಿ 19671, ಡಿ. 30ರಂದು 207 ವಿದೇಶಿಗರು ಸೇರಿ 16845, ಡಿ. 31ರಂದು 107 ವಿದೇಶಿಗರು ಸೇರಿ 13066 ಪ್ರವಾಸಿಗರು ಭೇಟಿ ನೀಡಿದ್ದಾರೆ.

2024ರ ಇದೇ ದಿನಗಳಲ್ಲಿ 2,47,479, 1548 ವಿದೇಶಿಗರು, 2023ರಲ್ಲಿ 2,45,004, 782 ವಿದೇಶಿಗರು, 2022ರಲ್ಲಿ 2,82,333, 800 ವಿದೇಶಿ ಪ್ರವಾಸಿಗರು ಭಾಗವಹಿಸಿದ್ದರು. ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

ಮೃಗಾಲಯ: ಚಾಮರಾಜೇಂದ್ರ ಮೃಗಾಲಯಕ್ಕೆ ಡಿ. 21ರಂದು 14,975, ಡಿ. 22ರಂದು 13,285, ಡಿ. 23ರಂದು 14,283, ಡಿ.24ರಂದು 21,067, ಡಿ. 25ರಂದು 27,286, ಡಿ. 26ರಂದು 27,930, ಡಿ. 27ರಂದು 35,306, 28ರಂದು 21,287, 29ರಂದು 24,427, ಡಿ. 30ರಂದು 10,159, ಡಿ. 31ರಂದು 16,289 ಪ್ರವಾಸಿಗರು ಭೇಟಿ ನೀಡಿದ್ದಾರೆ.

2024ರಲ್ಲಿ 10 ದಿನಗಳಲ್ಲಿ 2,39,852, 2023ರಲ್ಲಿ 2,28,314, 2022ರಲ್ಲಿ 285718 ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಮೃಗಾಲಯದ ನಿರ್ದೇಶಕಿ ಪಿ.ಅನುಷಾ ತಿಳಿಸಿದ್ದಾರೆ.

ಡಿ.20ರಿಂದ 23ರವರೆಗೆ ಶೇ.80ರಿಂದ 90, ಡಿ. 24ರಿಂದ 31ರವರೆಗೆ ಶೇ. 100 ಹೋಟೆಲ್ ರೂಂಗಳು ಭರ್ತಿಯಾಗಿದ್ದವು ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments