Monday, May 25, 2026
Google search engine
Homeದೇಶಕೊಳೆತ, ಅವಧಿ ಮೀರಿದ ಆಹಾರ ಪೂರೈಕೆ: ಡೆಲಿವರಿ ಏಜೆನ್ಸಿಯ ಕರಾಳ ಮುಖ ಬಿಚ್ಚಿಟ್ಟ ಮಾಜಿ ಉದ್ಯೋಗಿ

ಕೊಳೆತ, ಅವಧಿ ಮೀರಿದ ಆಹಾರ ಪೂರೈಕೆ: ಡೆಲಿವರಿ ಏಜೆನ್ಸಿಯ ಕರಾಳ ಮುಖ ಬಿಚ್ಚಿಟ್ಟ ಮಾಜಿ ಉದ್ಯೋಗಿ

ಮುಂಬೈ: ಜೆಪ್ಟೋ ಕಂಪನಿಯ ಮಾಜಿ ಉದ್ಯೋಗಿಯೊಬ್ಬರು ಕಂಪನಿಯ ಕಾರ್ಯನಿರ್ವಹಣೆಯ ಕುರಿತು `ಕಹಿ ಸತ್ಯ’ವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.

ಇದು ಕಂಪನಿಯ ಕಾರ್ಯಾಚರಣೆ ಮತ್ತು ಗ್ರಾಹಕರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.

ನಾನು ಜೆಪ್ಟೋದಲ್ಲಿ 3 ವರ್ಷ ಕೆಲಸ ಮಾಡಿದ್ದೇನೆ, ಇನ್ನು ಮೌನವಾಗಿರಲು ಸಾಧ್ಯವಿಲ್ಲ ಎಂದು ಮಾಜಿ ಉದ್ಯೋಗಿಯೊಬ್ಬರು ವೈರಲ್ ಆದ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಒಮ್ಮೆ, ಗ್ರಾಹಕರೊಬ್ಬರು ಗ್ರೀಕ್ ಮೊಸರನ್ನು ಆರ್ಡರ್ ಮಾಡಿದ್ದರು. ನಮ್ಮ ಬಳಿ ಕೇವಲ ಮೂರು ಡಬ್ಬಿಗಳಿದ್ದವು, ಅವೆಲ್ಲವೂ ಅವಧಿ ಮೀರಿದ್ದವು. ಆದರೂ, ನಮ್ಮ ಸ್ಟೋರ್ ಇನ್‌ಚಾರ್ಜ್, ‘ಅದನ್ನೇ ಕೊಡಿ ಎಂದರು.

ಜನರು ಜೆಪ್ಟೋ ಸ್ವಚ್ಛವಾಗಿದೆ ಎಂದು ಭಾವಿಸುತ್ತಾರೆ. ಆದರೆ, ವಾಸ್ತವವಾಗಿ ಅದು ಅನೈರ್ಮಲ್ಯದಿಂದ ಕೂಡಿರುತ್ತದೆ. ಪ್ರತಿ ಮಳೆಗಾಲದಲ್ಲಿ, ನಮ್ಮ ಪುಣೆ ಸ್ಟೋರ್‌ನಲ್ಲಿ ಚರಂಡಿ ನೀರಿಂದ ತುಂಬಿಹೋಗುತ್ತದೆ? ನಿಮ್ಮ ದಿನಸಿ ಸಾಮಾನುಗಳನ್ನು ಪ್ಯಾಕ್ ಮಾಡುವ ಸ್ಥಳದಲ್ಲಿಯೇ.

ನಾವು ೯ ಗಂಟೆಗಿಂತ ಹೆಚ್ಚು ಕಾಲ ಆ ಕೊಳಕಾದ ನೀರಿನಲ್ಲಿ ಬೂಟುಗಳಿಲ್ಲದೆ ನಿಂತು ಕೆಲಸ ಮಾಡಿದ್ದೇವೆ. ನಮ್ಮಲ್ಲಿ ಅನೇಕರು ಆರೋಗ್ಯ ಸಮಸ್ಯೆಗೊಳಗಾದರೂ ಯಾರಿಗೂ ವೈದ್ಯಕೀಯ ಪರಿಹಾರ ಸಿಗಲಿಲ್ಲ.

ಹಣ್ಣುಗಳು ಮತ್ತು ತರಕಾರಿಗಳು ಕೊಳೆತು ಹಾಳಾಗಿರುತ್ತವೆ, ಆದರೂ ಅವುಗಳನ್ನು ಪ್ಯಾಕ್ ಮಾಡಿ ತಲುಪಿಸಲು ಆದೇಶಿಸಲಾಗುತ್ತದೆ. ಅವಧಿ ಮೀರಿದ ಉತ್ಪನ್ನಗಳನ್ನು ಹಿಂದಕ್ಕೆ ತೆಗೆದುಕೊಳ್ಳದೆ ಕಳುಹಿಸಲಾಗುತ್ತದೆ” ಎಂದು ಆ ವ್ಯಕ್ತಿ ರೆಡ್ಡಿಟ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಜೆಪ್ಟೋದ ಕಾರ್ಯಾಚರಣೆಯು ಕೆಲವೊಮ್ಮೆ ಅನೈತಿಕವಾಗಿಯೂ ಇದೆ ಎಂದು ಈ ಉದ್ಯೋಗಿ ಬಲವಾಗಿ ಪ್ರತಿಪಾದಿಸಿದ್ದಾರೆ, ಗ್ರಾಹಕರಿಗೆ ಸತ್ಯ ತಿಳಿಯುವ ಹಕ್ಕಿದೆ ಎಂದು ಸೇರಿಸಿದ್ದಾರೆ. ಈ ಪೋಸ್ಟ್ ಶೀಘ್ರವಾಗಿ ವೈರಲ್ ಆಗಿದ್ದು, ಬಳಕೆದಾರರಿಂದ ವಿವಿಧ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.

ಈ ರೀತಿಯ ಮೋಸದ ಸೈಟ್‌ಗಳಿಗಿಂತ ಬ್ಲಿಂಕಿಟ್ ಮತ್ತು ಬಿಗ್‌ಬಾಸ್ಕೆಟ್ ಉತ್ತಮವಾಗಿವೆ; ಗ್ರಾಹಕರು ಇವುಗಳಿಂದ ಏಕೆ ಆರ್ಡರ್ ಮಾಡುತ್ತಾರೆ ಎಂದು ಗೊತ್ತಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಮೊಟ್ಟೆಯಂತಹ ಪದಾರ್ಥಗಳು ಯಾವಾಗಲೂ ಕೊಳೆತಿರುತ್ತವೆ” ಎಂದು ಬರೆದಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಮಹಾರಾಷ್ಟ್ರ ಎಫ್ಡಿಎ (ಈಆಂ) ಮುಂಬೈನ ಧಾರಾವಿಯಲ್ಲಿರುವ ಜೆಪ್ಟೋದ ಆಹಾರ ವ್ಯವಹಾರ ಪರವಾನಗಿಯನ್ನು ಅಮಾನತುಗೊಳಿಸಿತ್ತು. ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ ಕಾರಣ  ಈ ಕ್ರಮ ಕೈಗೊಳ್ಳಲಾಗಿತ್ತು.

ಅಧಿಕಾರಿಗಳು ಜೆಪ್ಟೋ ಸೌಲಭ್ಯದ ಮೇಲೆ ದಾಳಿ ನಡೆಸಿದಾಗ ಆಹಾರ ಪದಾರ್ಥಗಳ ಮೇಲೆ ಶಿಲೀಂಧ್ರ ಬೆಳವಣಿಗೆ, ಅಸಮರ್ಪಕ ಕೋಲ್ಡ್ ಸ್ಟೋರೇಜ್ ಮತ್ತು ಅವಧಿ ಮೀರಿದ ದಾಸ್ತಾನು ಕಂಡುಬಂದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments