Sunday, May 31, 2026
Google search engine
Homeದೇಶಹೋಟೆಲ್ ಮಾಲೀಕರಿಗೆ ಸಿಹಿಸುದ್ದಿ: ವಾಣಿಜ್ಯ ಎಲ್ ಪಿಜಿ ಪೂರೈಕೆ ಶೇ.10ರಷ್ಟು ಹೆಚ್ಚಿಸಿದ ಕೇಂದ್ರ!

ಹೋಟೆಲ್ ಮಾಲೀಕರಿಗೆ ಸಿಹಿಸುದ್ದಿ: ವಾಣಿಜ್ಯ ಎಲ್ ಪಿಜಿ ಪೂರೈಕೆ ಶೇ.10ರಷ್ಟು ಹೆಚ್ಚಿಸಿದ ಕೇಂದ್ರ!

ನವದೆಹಲಿ: ರಾಜ್ಯಗಳಿಗೆ ವಿತರಿಸಲಾಗುತ್ತಿದ್ದ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಶೇ.10ರಷ್ಟು ಹೆಚ್ಚಿಸಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವಾಲಯ ಮುಖ್ಯ ಕಾರ್ಯದರ್ಶಿ ಸುಜಾತಾ ಶರ್ಮ ಬುಧವಾರ ಈ ವಿಷಯ ಪ್ರಕಟಿಸಿದ್ದು, ದೇಶದಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಅಭಾವ ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ದೇಶೀಯ ಹಾಗೂ ತುರ್ತು ಸೇವೆಗಳಿಗೆ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯ ಸರ್ಕಾರಗಳಿಗೆ ಕೇಂದ್ರ ಶೇ.20ರಷ್ಟು ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುತ್ತಿದೆ. ಎಲ್ ಪಿಜಿ ಹಡಗುಗಳು ಬರುತ್ತಿರುವುದು ಹಾಗೂ ಶೇ.40ರಷ್ಟು ಎಲ್ ಪಿಜಿ ಉತ್ಪಾದನೆ ಹೆಚ್ಚಳ ಮಾಡಿರುವುದರಿಂದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆಯನ್ನು ಶೇ.10ರಷ್ಟು ಹೆಚ್ಚಿಸಲಾಗುತ್ತಿದೆ ಎಂದು ಅವರು ಹೇಳಿದರು.

ವಿವಿಧ ದೇಶಗಳಿಂದ ಶೇ.60ರಷ್ಟು ಎಲ್ ಪಿಜಿ ಆಮದು ಮಾಡಿಕೊಳ್ಳಲಾಗುತ್ತಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿಯಿಂದ ಹರ್ಮುಜ್ ಜಲಸಂಧಿಯಲ್ಲಿ ಹಡಗುಗಳು ನಿಲ್ಲಿಸಲಾಗಿತ್ತು. ಇದೀಗ ಎರಡು ಹಡಗು ಭಾರತಕ್ಕೆ ಬಂದು ತಲುಪಿದ್ದು, ರಷ್ಯಾದಿಂದಲೂ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಭಾರತದತ್ತ ಚೀನಾದ 7 ತೈಲ ಹಡಗು:

ರಷ್ಯಾದಿಂದ ತೈಲ ಹೊತ್ತು ಸಾಗುತ್ತಿದ್ದ ಚೀನಾದ 7 ಹಡಗುಗಳು ಮಾರ್ಗ ಬದಲಿಸಿ ಭಾರತದ ಕಡೆ ಆಗಮಿಸುತ್ತಿವೆ. ಇದರಿಂದ ಭಾರತದ ತೈಲ ಬಿಕ್ಕಟ್ಟಿಗೆ ತಾತ್ಕಾಲಿಕ ಪರಿಹಾರ ಸಿಗಲಿದೆ.

ಇರಾನ್ ನಲ್ಲಿ ಭೀಕರ ಯುದ್ಧ ನಡೆಯುತ್ತಿರುವ ಕಾರಣ ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ಭಾರತಕ್ಕೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಭಾರತ ರಷ್ಯಾದಿಂದ ತೈಲ ಖರೀದಿ ಪ್ರಮಾಣ ಹೆಚ್ಚಿಸಿದೆ. ಇದರಿಂದ ಚೀನಾಗೆ ಸಾಗಬೇಕಾಗಿದ್ದ ಹಡಗು ಭಾರತದ ಕಡೆ ಬರುತ್ತಿವೆ ಎಂದು ಹೇಳಲಾಗಿದೆ.

ಸಮುದ್ರದಲ್ಲಿ ಸಿಲುಕಿರುವ “ಅನುಮೋದಿತ” ರಷ್ಯಾದ ತೈಲವನ್ನು ಖರೀದಿಸಲು ಭಾರತವು ಅಮೆರಿಕದಿಂದ ತಾತ್ಕಾಲಿಕ ವಿನಾಯಿತಿ ಪಡೆದ ನಂತರ, ಹಡಗು ಟ್ರ್ಯಾಕಿಂಗ್ ಸಂಸ್ಥೆ ವೋರ್ಟೆಕ್ಸಾ ಲಿಮಿಟೆಡ್ ಮೇಲ್ವಿಚಾರಣೆಯಲ್ಲಿ ಈ ಹಡಗುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಚೀನಾದ 7 ಹಡಗುಗಳ ಪೈಕಿ ಮಧ್ಯಮ ಗಾತ್ರದ ಕಚ್ಚಾ ತೈಲ ಹಡಗು ಅಕ್ವಾ ಟೈಟಾನ್ ಮಾರ್ಚ್ 21ರಂದು ಕರ್ನಾಟಕದ ಕಡಲ ತೀರವಾದ ಮಂಗಳೂರಿಗೆ ಬಂದು ಸೇರಲಿದೆ ಎಂದು ಹೇಳಲಾಗಿದೆ.

ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಬಂದರಿನಲ್ಲಿ ತೈಲ ತುಂಬಿಸಿದ ಟ್ಯಾಂಕರ್ ಮೂಲತಃ ಚೀನಾದ ರಿಜಾವೊ ಬಂದರಿಗೆ ತೆರಳುತ್ತಿತ್ತು. ಭಾರತವು ಅಮೆರಿಕದ ವಿನಾಯಿತಿ ಪಡೆದು ಖರೀದಿಗೆ ಮುಂದಾಗಿ ತುರ್ತು ಬೇಡಿಕೆ ಹಿನ್ನೆಲೆಯಲ್ಲಿ ಈ ಹಡಗುಗಳ ಮಾರ್ಗ ಬದಲಿಸಿ ಭಾರತಕ್ಕೆ ಕಳುಹಿಸಿಕೊಡಲಾಗಿದೆ.

ಸೂಯೆಜ್‌ ಮ್ಯಾಕ್ಸ್ ಝೌಜೌ ಎನ್ ಹೆಸರಿನ ಮತ್ತೊಂದು ಹಡಗು ಗುಜರಾತ್‌ನ ಜಾಮ್‌ನಗರದ ಸಿಕ್ಕಾ ಬಂದರಿಗೆ ಮಾರ್ಚ್ 25ರಂದು ಆಗಮಿಸುವ ನಿರೀಕ್ಷೆಯಿದೆ.

ಮಾರ್ಚ್ ಆರಂಭದಲ್ಲಿ ಚೀನಾದ ಹಡಗುಗಳು ತನ್ನ ಮಾರ್ಗ ಬದಲಿಸಿ ಭಾರತದ ಕಡೆ ಪ್ರಯಾಣ ಆರಂಭಿಸಿದ್ದವು ಎಂದು ಹೇಳಲಾಗಿದೆ.

ಯುದ್ಧದ ಕಾರಣ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ ಹಿನ್ನೆಲೆಯಲ್ಲಿ ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ 30 ದಿನಗಳ ವಿನಾಯಿತಿ ನೀಡಿತ್ತು. ಇದೀಗ ಹರ್ಮುಜ್ ಜಲಸಂಧಿಯಲ್ಲಿ ಭಾರತದ 20ಕ್ಕೂ ಅಧಿಕ ಹಡಗು ಸೇರಿದಂಗತೆ 70 ಹಡಗುಗಳು ಸಿಲುಕಿವೆ. ಇದರಿಂದ ಒಟ್ಟಾರೆ 20 ಹಡಗುಗಳನ್ನು ಇರಾನ್ ಬಿಡುಗಡೆ ಮಾಡಿದೆ ಎಂದು ಹೇಳಲಾಗಿದೆ.

ಭಾರತ ಕೇವಲ ಒಂದು ವಾರದಲ್ಲಿ ಸುಮಾರು 30 ಮಿಲಿಯನ್ ಬ್ಯಾರೆಲ್ ರಷ್ಯಾದ ಕಚ್ಚಾ ತೈಲವನ್ನು ಖರೀದಿಸಿದೆ. ಜನವರಿಯಲ್ಲಿ, ಭಾರತವು ಯುಎಸ್ ಜೊತೆ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿದ್ದರಿಂದ ರಷ್ಯಾದಿಂದ ಒಟ್ಟಾರೆ ತೈಲ ಆಮದು 21% ಕ್ಕೆ ಇಳಿದಿದೆ.

ಭಾರತ ತನ್ನ ಖರೀದಿಗಳನ್ನು ಕಡಿಮೆ ಮಾಡುತ್ತಿದ್ದಂತೆ, ಚೀನಾ ರಷ್ಯಾದ ತೈಲದ ಮೇಲಿನ ಆಳವಾದ ರಿಯಾಯಿತಿಗಳನ್ನು ಬಂಡವಾಳ ಮಾಡಿಕೊಂಡಿತು ಮತ್ತು ಅದರ ಖರೀದಿಗಳನ್ನು ಹೆಚ್ಚಿಸಿತು. ಆದಾಗ್ಯೂ, ಯುಎಸ್ ಈಗ ಹೆಚ್ಚಿನ ದೇಶಗಳಿಗೆ ರಷ್ಯಾದ ತೈಲವನ್ನು ಖರೀದಿಸಲು ಅವಕಾಶ ನೀಡುವುದರೊಂದಿಗೆ, ಸ್ಪರ್ಧೆ ತೀವ್ರಗೊಳ್ಳುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments