Wednesday, May 20, 2026
Google search engine
Homeವಿದೇಶಬಂಡುಕೋರರ ವಶಕ್ಕೆ ಡಾಮಸ್ಕೊ: ಸಿರಿಯಾ ಅಧ್ಯಕ್ಷ ಅಸ್ಸಾದ್ ಪರಾರಿ!

ಬಂಡುಕೋರರ ವಶಕ್ಕೆ ಡಾಮಸ್ಕೊ: ಸಿರಿಯಾ ಅಧ್ಯಕ್ಷ ಅಸ್ಸಾದ್ ಪರಾರಿ!

ಸಿರಿಯಾ ರಾಜಧಾನಿ ಡಾಮಸ್ಕೊ ವಶಪಡಿಸಿಕೊಳ್ಳುವ ಮೂಲಕ ಬಂಡುಕೋರರು ಸಿರಿಯಾ ಮೇಲೆ ಅಧಿಪತ್ಯ ಸ್ಥಾಪಿಸುತ್ತಿದ್ದಂತೆ ಅಧ್ಯಕ್ಷ ಬಾಶರ್ ಅಲ್-ಅಸ್ಸಾದ್ ಪರಾರಿಯಾಗಿದ್ದಾರೆ.

ವಾರದ ಹಿಂದೆಯಷ್ಟೇ ದಾಳಿ ಆರಂಭಿಸಿದ್ದ ಬಂಡುಕೋರರು ಸಂಪೂರ್ಣ ಸಿರಿಯಾ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿರಿಯಾ ಅಧ್ಯಕ್ಷ ಅಸ್ಸಾದ್ ವಿಮಾನದ ಮೂಲಕ ಗೌಪ್ಯ ಸ್ಥಳಕ್ಕೆ ಪರಾರಿಯಾಗಿದ್ದಾರೆ. ಇದರೊಂದಿಗೆ ಅಸ್ಸಾದ್ ಅವರ 24 ವರ್ಷಗಳ ಆಡಳಿತ ಅಂತ್ಯಗೊಂಡಿದೆ.

ಬಂಡುಕೋರರು ಸಿರಿಯಾ ಅಸ್ಸಾದ್ ದೌರ್ಜನ್ಯದಿಂದ ಸ್ವತಂತ್ರಗೊಂಡಿದೆ ಎಂದು ಘೋಷಿಸಿದ್ದಾರೆ. ಮತ್ತೊಂದೆಡೆ ಪರಾರಿಯಾಗಿರುವ ಅಸ್ಸಾದ್ ಪಡೆಯಿಂದ ರಾಸಾಯನಿಕ ದಾಳಿ ನಡೆಯಬಹುದು ಎಂದು ಅಮೆರಿಕ ಆತಂಕ ವ್ಯಕ್ತಪಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments