Tuesday, May 26, 2026
Google search engine
Homeದೇಶಗೋವಾ ಕ್ಲಬ್‌ ಸ್ಫೋಟದಲ್ಲಿ 25 ಮಂದಿ ದುರ್ಮರಣ: ಮ್ಯಾನೇಜರ್‌ ಅರೆಸ್ಟ್‌

ಗೋವಾ ಕ್ಲಬ್‌ ಸ್ಫೋಟದಲ್ಲಿ 25 ಮಂದಿ ದುರ್ಮರಣ: ಮ್ಯಾನೇಜರ್‌ ಅರೆಸ್ಟ್‌

ಗೋವಾ ನೈಟ್‌ ಕ್ಲಬ್‌ ನಲ್ಲಿ ಶನಿವಾರ ರಾತ್ರಿ ಮೋಜು ಮಸ್ತಿಯಲ್ಲಿ ಮುಳುಗಿದ್ದ ಪ್ರವಾಸಿಗರು, ಸಿಬ್ಬಂದಿ ಸೇರಿದಂತೆ 25 ಮಂದಿ ಮೃತಪಟ್ಟಿದ್ದು, ಮ್ಯಾನೇಜರ್‌ ನನ್ನು ಬಂಧಿಸಲಾಗಿದೆ.

ಉತ್ತರ ಗೋವಾದ ಬಾಗಾದಲ್ಲಿರುವ ನೈಟ್‌ ಕ್ಲಬ್‌ ರೊಮಿಯೊ ಲೇನ್‌ ಕ್ಲಬ್‌ ವೀಕೆಂಡ್‌ ನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಶನಿವಾರ ಹಾಡಿಗೆ ಡ್ಯಾನ್ಸರ್‌ ನೃತ್ಯ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ೬ ಮಂದಿ ಗಾಯಗೊಂಡಿದ್ದಾರೆ.

ಶನಿವಾರ ತಡರಾತ್ರಿ ಸಂಭವಿಸಿದ್ದು, ತಪ್ಪಿಸಿಕೊಳ್ಳಲು ಮಾರ್ಗ ಚಿಕ್ಕದಾಗಿ ಇದ್ದಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ದುರ್ಘಟನೆ ವೇಳೆ ೧೦೦ಕ್ಕೂ ಹೆಚ್ಚು ಪ್ರವಾಸಿಗರು ಮೋಜು ಮಸ್ತಿ ನಡೆಸುತ್ತಿದ್ದರು ಎಂದು ಹೇಳಲಾಗಿದೆ.

ಗೋವಾ ಪೊಲೀಸರು ನೈಟ್‌ ಕ್ಲಬ್‌ ವಿರುದ್ಧ ಎಫ್‌ ಐಆರ್‌ ದಾಖಲಿಸಿಕೊಂಡಿದ್ದು, ಮ್ಯಾನೇಜರ್‌ ನನ್ನು ಬಂಧಿಸಿದ್ದಾರೆ.

ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ದುರ್ಘಟನೆ ಕುರಿತು ಆಘಾತ ವ್ಯಕ್ತಪಡಿಸಿದ್ದು, ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಘಟನೆಗೆ ಸಂಬಂಧಿಸಿ ಕ್ಲಬ್‌ ಮಾಲೀಕರು ಮತ್ತು ಮ್ಯಾನೇಜರ್‌ ಸೇರಿ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ್ಕೈಗೊಳ‍್ಳಲಾವುದು ಎಂದು ಅವರು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments