ಬೆಂಗಳೂರು: ಭಾರತದ ಅತ್ಯಂತ ದೊಡ್ಡ ವಾಹನಗಳ ಟೈರ್ ವಾಲ್ವ್ ಗಳ ಉತ್ಪಾದಕ ಮತ್ತು ಕೈಗಾರಿಕೆಗಳಿಗೆ ಮುಂಚೂಣಿಯ ಎಂಜಿನಿಯರಿಂಗ್ ಪಾಲುದಾರರಾದ ಟ್ರೈಟಾನ್ ವಾಲ್ವ್ಸ್ ಲಿಮಿಟೆಡ್ ಸೆಪ್ಟೆಂಬರ್ 10, 2025ರಂದು ಬೆಂಗಳೂರಿನ ಐಟಿಸಿ ಗಾರ್ಡೆನಿಯಾದ ಮೈಸೂರ್ ಹಾಲ್ ನಲ್ಲಿ 50ನೇ ವರ್ಷದ ಅದ್ಧೂರಿ ಸಮಾರಂಭ ಆಯೋಜಿಸಿತ್ತು.
ಈ ಕಾರ್ಯಕ್ರಮವು ಶ್ರೇಷ್ಠತೆ, ಆವಿಷ್ಕಾರ ಮತ್ತು ಸದೃಢತೆಯಲ್ಲಿ ಮುಂಚೂಣಿಯಲ್ಲಿರುವುದರ ಹಿನ್ನೆಲೆಯಲ್ಲಿ ಆಯೋಜಿತವಾಗಿದ್ದು ವಾಹನೋದ್ಯಮ ಕ್ಷೇತ್ರದ ಪ್ರಮುಖ ಗಣ್ಯರು, ಪಾಲುದಾರರು ಮತ್ತು ಉದ್ಯಮದ ನಾಯಕರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮೈಸೂರಿನ ಮಹಾರಾಜ ಶ್ರೀಮಾನ್ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಶ್ರೀ ನಂದನ್ ನೀಲೇಕಣಿ ಮತ್ತು ಏಥರ್ ಎನರ್ಜಿ ಸಹ-ಸಂಸ್ಥಾಪಕ ಶ್ರೀ ಸ್ವಪ್ನಿಲ್ ಜೈನ್ ಅವರೊಂದಿಗೆ ಉದ್ಯಮದ ನಾಯಕರು, ಪಾಲುದಾರರು ಮತ್ತು ಉದ್ಯೋಗಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಜೆಯು ಐದು ದಶಕಗಳ ವಾಹನೋದ್ಯಮದ ಆವಿಷ್ಕಾರದ ಅವಿಸ್ಮರಣೀಯ ಪ್ರಯಾಣಕ್ಕೆ ವೇದಿಕೆ ಒದಗಿಸುವುದರೊಂದಿಗೆ ಪ್ರಾರಂಭವಾಯಿತು.
ಕಾರ್ಯಕ್ರಮದ ಪ್ರಮುಖಾಂಶವೆಂದರೆ ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು “ಕೋರ್ ಸ್ಟ್ರೆಂಥ್” ಎಂಬ ವಿಶೇಷ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಈ ಕೃತಿಯ ಲೇಖಕಿ ರೂಪಾ ಪೈ ಕೃತಿಯ ಕೆಲ ಪ್ರಮುಖ ಅಧ್ಯಾಯಗಳನ್ನು ಆಕರ್ಷಕವಾಗಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮಾನ್ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, “ಟ್ರೈಟಾನ್ ವಾಲ್ವ್ಸ್ ಮೈಸೂರಿನ ಆವಿಷ್ಕಾರದ ಪರಂಪರೆ ಮತ್ತು ಭಾರತದ ಸ್ವಾವಲಂಬನೆಯ ಸ್ಫೂರ್ತಿಗೆ ಹೆಮ್ಮೆಯ ಸಾಕ್ಷಿಯಾಗಿದೆ. ಐವತ್ತು ವರ್ಷಗಳಿಂದಲೂ ಇದು ಸದೃಢತೆ, ಗುಣಮಟ್ಟ ಮತ್ತು ವೈವಿಧ್ಯೀಕರಣಕ್ಕೆ ಉದಾಹರಣೆಯಾಗಿದ್ದು ಭಾರತ ಮಾತ್ರವಲ್ಲದೆ ವಿಶ್ವದ ಮೂಲೆ ಮೂಲೆಗೆ ಸೇವೆ ಒದಗಿಸುತ್ತಿದೆ. ನಾವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವಾಗಲು ಶ್ರಮಿಸುತ್ತಿದ್ದು ಟ್ರೈಟಾನ್ ನಮ್ಮೆಲ್ಲರಿಗೂ ಮೇಕ್ ಇನ್ ಇಂಡಿಯಾ ಶಕ್ತಿಯಲ್ಲಿ ನಂಬಿಕೆ ಇರಿಸಲು ಮತ್ತು ಬದ್ಧತೆ, ದೂರದೃಷ್ಟಿ ಮತ್ತು ಶ್ರೇಷ್ಠತೆಯಿಂದ ಉಂಟಾದ ಮಹತ್ತರ ಸಾಧನೆಗಳನ್ನು ಸಂಭ್ರಮಿಸಲು ಸ್ಫೂರ್ತಿ ತುಂಬಿದೆ” ಎಂದರು.
ಭಾರತದ ಉದ್ಯಮಶೀಲತೆ ಮತ್ತು ಪ್ರಗತಿಯ ಪ್ರಯಾಣವನ್ನು ಸಂಭ್ರಮಿಸುವ ಈ ಕಾರ್ಯಕ್ರಮದಲ್ಲಿ “ಹಾನರಿಂಗ್ ದಿ ಪಾಸ್ಟ್, ಇನ್ಸ್ಪೈರಿಂಗ್ ದಿ ಫ್ಯೂಚರ್ (ಭೂತಕಾಲಕ್ಕೆ ಗೌರವ, ಭವಿಷ್ಯಕ್ಕೆ ಸ್ಫೂರ್ತಿ)” ಎಂಬ ಮಾತುಕತೆ ನಡೆದಿದ್ದು ಅದು ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ಶ್ರೀ ನಂದನ್ ನೀಲೇಕಣಿ, ಏಥರ್ ಎನರ್ಜಿಯ ಸಹ-ಸಂಸ್ಥಾಪಕ ಶ್ರೀ ಸ್ವಪ್ನಿಲ್ ಜೈನ್ ಮತ್ತು ಶ್ರೀ ಆದಿತ್ಯ ಎಂ. ಗೋಕರ್ಣ್ ಒಳಗೊಂಡು ಮೂರು ತಲೆಮಾರುಗಳನ್ನು ಒಗ್ಗೂಡಿಸಿತು.
ಈ ಕಾರ್ಯಕ್ರಮದ ಮಾಡರೇಟರ್ ಹಣಕಾಸು ಕಂಟೆಂಟ್ ಕ್ರಿಯೇಟರ್ ಸೋನಿಯಾ ಶಣೈ ಉದ್ಯಮಶೀಲತೆಯ ಪ್ರಯಾಣಗಳು, ಉದಯೋನ್ಮುಖ ವಲಯಗಳಲ್ಲಿ ಅವಕಾಶಗಳು, ವಿಕಾಸಗೊಳ್ಳುತ್ತಿರುವ ಸವಾಲುಗಳು, ಸರ್ಕಾರ ಮತ್ತು ನೀತಿಯ ಬೆಂಬಲ, ಸಂಶೋಧನೆ ಮತ್ತು ಅಭಿವೃದ್ಧಿಯ ನೆರವು, ಉದ್ಯೋಗದ ಸ್ಥಳದ ಸಂಸ್ಕೃತಿ ಮತ್ತು ಭಾರತದ ಆರ್ಥಿಕ ಪ್ರಗತಿಗೆ ಪೂರಕವಾದ ಮುಂದಿನ ಪ್ರವೃತ್ತಿಗಳ ಕುರಿತು ಚರ್ಚೆಯನ್ನು ನಡೆಸಿಕೊಟ್ಟರು.
ಟ್ರೈಟಾನ್ ಹಿಂದಿನ ಮಾರ್ಗದರ್ಶಕ ಶಕ್ತಿಯಾಗಿರುವ ಅನುರಾಧಾ ಎಂ. ಗೋಕರ್ಣ್ ಗ್ರಾಹಕರು, ಷೇರುದಾರರು, ಲೆಕ್ಕ ಪರಿಶೋಧಕರು, ಪಾಲುದಾರರು ಮತ್ತು ಅತಿಥಿಗಳಿಗೆ ತಮ್ಮ ಹೃದಯಪೂರ್ವಕ ಕೃತಜ್ಞತೆ ವ್ಯಕ್ತಪಡಿಸಿ ಕಂಪನಿಯ 50 ವರ್ಷದ ಪ್ರಯಾಣವನ್ನು ಹಾಗೂ ತಮ್ಮದೇ ಆದ ಸ್ಫೂರ್ತಿಯುತ ಕಥೆಯನ್ನು ಹಂಚಿಕೊಂಡರು. “50 ವರ್ಷಗಳ ಟ್ರೈಟಾನ್ ಪ್ರಯಾಣವು ಬರೀ ಕಾರ್ಪೊರೇಟ್ ಮೈಲಿಗಲ್ಲಲ್ಲ, ಇದು ಸದೃಢತೆ ಮತ್ತು ದೂರದೃಷ್ಟಿಯಿಂದ ಕನಸುಗಳು ವಾಸ್ತವವಾಗಿ ಬದಲಾದ ಕಥೆಯಾಗಿದೆ. 1975ರಲ್ಲಿ ಸಂಸ್ಥಾಪಕರ ಕನಸಿನಿಂದ ಸವಾಲುಗಳನ್ನು ಎದುರಿಸಿ ಹೊರಬರುವವರೆಗೆ `ಮೇಡ್ ಇನ್ ಇಂಡಿಯಾ’ ಎಂಬ ಹೆಮ್ಮೆಯ ಸಂಕೇತವಾಗಿರುವ ಇಂದಿನ ಕಂಪನಿಯನ್ನು ನಿರ್ಮಿಸುವವರೆಗೆ ಇದು ಉದ್ಯೋಗಿಗಳು, ಪಾಲುದಾರರು ಮತ್ತು ಹಿತೈಷಿಗಳ ಒಗ್ಗಟ್ಟಿನ ಪ್ರಯತ್ನವಾಗಿದೆ. ಈ ಪ್ರಯಾಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ನಾನು ಆಭಾರಿಯಾಗಿದ್ದೇನೆ. ಟ್ರೈಟಾನ್ ಬರೀ ಕಂಪನಿಯಲ್ಲ; ಇದು ದೇಶದ ಪ್ರಗತಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಬಲ್ಲ ನಂಬಿಕೆ, ಪರಿಶ್ರಮ ಮತ್ತು ಬದ್ಧತೆಯ ಆಧಾರದಲ್ಲಿ ನಿರ್ಮಿಸಿದ ಕುಟುಂಬವಾಗಿದೆ” ಎಂದರು.
ಈ ಸಂಜೆಯ ಸಂಭ್ರಮಾಚರಣೆಗಳು ಟ್ರೈಟಾನ್ ನ 50ನೇ ವರ್ಷದ ಮೈಲಿಗಲ್ಲನ್ನು ಗುರುತಿಸುವ ಇಂಡಿಯಾ ಪೋಸ್ಟ್ ವಿಶೇಷ ಸ್ಮರಣೆಯ ಲಕೋಟೆ ಬಿಡುಗಡೆ ಮಾಡಿತು. ಅನುರಾಧಾ ಎಂ. ಗೋಕರ್ಣ್ ಜಿಪಿಒ ಬೆಂಗಳೂರಿನ ಅಸಿಸ್ಟೆಂಟ್ ಡೈರೆಕ್ಟರ್ ಅಮಿತ್ ಕುಮಾರ್ ಝಾ ಅವರಿಂದ ಈ ಲಕೋಟೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಭಿಕರನ್ನು ಕುರಿತು ಮಾತನಾಡಿದ ಆದಿತ್ಯ ಎಂ. ಗೋಕರ್ಣ್ ಕಂಪನಿಯ ಅಸಾಧಾರಣ ಪ್ರಯಾಣ ಕುರಿತು ಮಾತನಾಡಿದರು. “ನಮ್ಮ ಸುವರ್ಣ ಸಂಭ್ರಮಾಚರಣೆಯು ಉದ್ಯಮದಲ್ಲಿ 50 ವರ್ಷಗಳ ಸಂಭ್ರಮಾಚರಣೆ ಮಾತ್ರವಲ್ಲ, ಇದು ನನ್ನ ತಂದೆ ಎಂ.ವಿ. ಗೋಕರ್ಣ್ ಹಾಗೂ ನನ್ನ ತಾಯಿ ಅನುರಾಧಾ ಎಂ. ಗೋಕರ್ಣ್ ಅವರ ಅಸಾಧಾರಣ ಪರಿಶ್ರಮ ಮತ್ತು ನಾಯಕತ್ವಕ್ಕೆ ನೀಡಿದ ಗೌರವವಾಗಿದೆ, ಅವರು ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸಿದರು ಮತ್ತು ಭಾರತದಲ್ಲಿ ಟ್ರೈಟಾನ್ ನ ನಾಯಕತ್ವ ಸ್ಥಾನವನ್ನು ಉಳಿಸಿದರು. ಅವರ ಪರಂಪರೆಯು ನಮಗೆ ಪ್ರತಿನಿತ್ಯ ಸ್ಫೂರ್ತಿ ತುಂಬುತ್ತದೆ. ನಾವು ಮುಂದೆ ನೋಡಿದಾಗ ಟ್ರೈಟಾನ್ ಆವಿಷ್ಕಾರದ ಉತ್ತೇಜನಕ್ಕೆ ಬದ್ಧವಾಗಿದೆ, ಜಾಗತಿಕ ಚಲನೆಗೆ ಶಕ್ತಿ ತುಂಬುತ್ತಿದೆ ಮತ್ತು ಭಾರತದ ಎಂಜಿನಿಯರಿಂಗ್ ಶ್ರೇಷ್ಠತೆಯ ಭವಿಷ್ಯ ರೂಪಿಸುತ್ತಿದೆ. ನಾವು ಬರೀ ವಾಲ್ವ್ ಗಳನ್ನು ತಯಾರಿಸುತ್ತಿಲ್ಲ; ನಾವು ಭಾರತವನ್ನು ಮುನ್ನಡೆಸುವ ಮೂಲಸೌಕರ್ಯ ನಿರ್ಮಿಸುತ್ತಿದ್ದೇವೆ” ಎಂದರು.
ಟ್ರೈಟಾನ್ ವಾಲ್ವ್ಸ್ 50ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯಲ್ಲಿ ಆದಿತ್ಯ ಎಂ. ಗೋಕರ್ಣ್ ಕಂಪನಿಯನ್ನು ಸ್ಥಾಪಿಸಿದ್ದಕ್ಕೆ ಅವರ ಪೋಷಕರಿಗೆ ಕೃತಜ್ಞತೆ ಅರ್ಪಿಸಿದ್ದು ಅವರ ತಂದೆಯ ಪರಂಪರೆಯು ತಮ್ಮ ಚಾಲಕಶಕ್ತಿ ಎಂದರು ಮತ್ತು ಉದ್ಯೋಗಿಗಳು, ಗ್ರಾಹಕರು, ಪಾಲುದಾರರು ಹಾಗೂ ಅತಿಥಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿ ಮುಂದಿನ 50 ವರ್ಷಗಳು ಕಂಪನಿಯ ಪ್ರಗತಿಯಲ್ಲಿ ತಮ್ಮ ವಿಶ್ವಾಸ ವ್ಯಕ್ತಪಡಿಸಿದರು.
ಟ್ರೈಟಾನ್ ವಾಲ್ವ್ಸ್ ಸುವರ್ಣ ಸಂಭ್ರಮಾಚರಣೆಯು ಭಾರತದ ಉದ್ಯಮಶೀಲತೆ ಮತ್ತು ಉತ್ಪಾದನಾ ಶ್ರೇಷ್ಠತೆಯಲ್ಲಿ ಗೆಲುವಿನ ಸಂಭ್ರಮವಾಗಿದೆ. 1975ರಲ್ಲಿ ಸ್ಥಾಪನೆಯಾದ ದಿನದಿಂದ ಇಂದು ಶೇ.70ರಷ್ಟು ಮಾರುಕಟ್ಟೆ ಪಾಲು ಪಡೆಯುವವರೆಗೆ ಭಾರತದ ರಸ್ತೆಗಳಲ್ಲಿ ಪ್ರತಿ ಮೂರು ಟೈರ್ ಗಳಲ್ಲಿ ಎರಡಕ್ಕೆ ಟ್ರೈಟಾನ್ ವಾಲ್ವ್ ಗಳು ಜೋಡಿಸಲ್ಪಟ್ಟಿರುತ್ತವೆ. ಟ್ರೈಟಾನ್ ₹488.37 ಕೋಟಿ ಒಟ್ಟು ಆದಾಯ ಮತ್ತು ಶೇ.21.3ರಷ್ಟು ಸಿಎಜಿಆರ್ ಪ್ರಗತಿಯೊಂದಿಗೆ ಭಾರತದ ಮೊಬಿಲಿಟಿ ಕನಸುಗಳಿಗೆ ಶಕ್ತಿ ತುಂಬಲು ಮತ್ತು ಜಾಗತಿಕ ಆರ್ಥಿಕ ನಾಯಕನಾಗಿ ದೇಶ ಹೊರಹೊಮ್ಮಲು ಕೊಡುಗೆ ನೀಡಲು ಬದ್ಧವಾಗಿದೆ. ಟ್ರೈಟಾನ್ ಜಾಗತಿಕ ವ್ಯಾಪ್ತಿಯು ಈಗ 12 ದೇಶಗಳಿಗೆ ವಿಸ್ತರಿಸಿದ್ದು ವಿಸ್ತಾರ ವಾಹನೋದ್ಯಮದಿಂದ ವೈಮಾನಿಕ, ಎಚ್.ವಿ.ಎ.



