Tuesday, June 30, 2026
Google search engine
Homeದೇಶ20 ಕಾರುಗಳ ಮೇಲೆ ಹರಿದ ನಿಯಂತ್ರಣ ತಪ್ಪಿದ ಲಾರಿ!

20 ಕಾರುಗಳ ಮೇಲೆ ಹರಿದ ನಿಯಂತ್ರಣ ತಪ್ಪಿದ ಲಾರಿ!

ಚಾಲಕನ ನಿಯಂತ್ರಣ ತಪ್ಪಿದ ಕಾರು 20 ಕಾರುಗಳ ಮೇಲೆ ಹರಿದ ಆಘಾತಕಾರಿ ಘಟನೆ ರೈಗಾದ್‌ ಜಿಲ್ಲೆಯ ಖೋಪೊಲಿ ಬಳಿಯ ಮುಂಬೈ- ಪುಣೆ ಎಕ್ಸ್‌ ಪ್ರೆಸ್‌ ವೇನಲ್ಲಿ ಶನಿವಾರ ಸಂಭವಿಸಿದೆ.

ಹೆದ್ದಾರಿ ಇಳಿಜಾರು ರಸ್ತೆಯಲ್ಲಿ ಕಂಟೇನರ್‌ ಹೊತ್ತು ಸಾಗುತ್ತಿದ್ದ ಲಾರಿ ಬ್ರೇಕ್‌ ಫೇಲ್‌ ಆಗಿದ್ದರಿಂದ ಅಡ್ಡಾದಿಡ್ಡಿಯಾಗಿ ಚಲಿಸಿದ್ದು, ಸುಮಾರು 20 ಕಾರುಗಳ ಮೇಲೆ ಹರಿದಿದೆ.

ಆಹಾರ ಮಳಿಗೆ ಬಳಿಯ ನೂತನವಾಗಿ ನಿರ್ಮಿಸಿದ ಸುರಂಗದ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಲಾರಿ ಬ್ರೇಕ್‌ ಫೇಲ್‌ ಆಗಿದ್ದರಿಂದ ಬಿಎಂಡಬ್ಲ್ಯೂ, ಮರ್ಸಿಡೀಸ್‌ ಮುಂತಾದ ಐಷಾರಾಮಿ ಕಾರುಗಳಲ್ಲದೇ ಹಲವಾರು ಕಾರುಗಳು ಹಾನಿಯಾಗಿದ್ದುಉ, 19 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments