ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನುಡಿದಂತೆ ಭಾರತದ ಮೇಲೆ ಹೆಚ್ಚುವರಿ ಶೇ.25ರಷ್ಟು ಸುಂಕ ವಿಧಿಸಿದ್ದು, ಇದರಿಂದ ಭಾರತ ಮೇಲೆ ಒಟ್ಟಾರೆ ಸುಂಕ ಪ್ರಮಾಣ ಶೇ.50ಕ್ಕೆ ಏರಿಕೆಯಾದಂತಾಗಿದೆ.
ರಷ್ಯಾದಿಂದ ತೈಲ ಹಾಗೂ ಶಸ್ತ್ರಾಸ್ತ್ರ ಖರೀದಿ ನಿಲ್ಲಿಸದಂತೆ 24 ಗಂಟೆಯಲ್ಲಿ ಸುಂಕ ಪ್ರಮಾಣ ಹೆಚ್ಚಿಸುವುದಾಗಿ ಹೇಳಿಕೆ ನೀಡಿದ್ದ ಡೊನಾಲ್ಡ್ ಟ್ರಂಪ್ ಬುಧವಾರ ಹೆಚ್ಚುವರಿ ಶೇ.25 ಸುಂಕ ವಿಧಿಸಿದ್ದಾರೆ. ಈ ಮೂಲಕ ಭಾರತದ ಮೇಲಿನ ಸುಂಕ ಪ್ರಮಾಣ ಶೇ.50ಕ್ಕೆ ಏರಿಕೆಯಾಗಿದೆ.
ಭಾರತದಿಂದ ಆಮದು ಆಗುವ ವಸ್ತುಗಳ ಮೇಲೆ ಶೇ.50ರಷ್ಟು ಸುಂಕದ ಹೊರೆ ಬೀಳಲಿದೆ. ಭಾರತದ ಮೇಲೆ ಸುಂಕದ ಜೊತೆಗೆ ದಂಡ ವಿಧಿಸಲಾಗಿದ್ದು, ಮುಂದಿನ 21 ದಿನಗಳ ನಂತರ ಜಾರಿಗೆ ಬರಲಿದೆ.
ಚೀನಾ ಮೇಲೆ ಶೇ.31ರಷ್ಟು ಸುಂಕ ಹೇರಲಾಗಿದ್ದು, ಇದೀಗ ಚೀನಾಗಿಂತ ಭಾರತದ ಮೇಲೆ ಶೇ.೨೧ರಷ್ಟು ಸುಂಕ ವಿಧಿಸಲಾಗಿದೆ. ವಿಶೇಷ ಅಂದರೆ ಭಯೋತ್ಪಾದನೆಗೆ ನೆರವು ನೀಡುತ್ತಿದೆ ಎಂದು ಆರೋಪಿಸಲಾಗುವ ಪಾಕಿಸ್ತಾನದ ಮೇಲೆ ಶೇ.೧೯ರಷ್ಟು ಮಾತ್ರ ಸುಂಕ ವಿಧಿಸಲಾಗಿದೆ.
ಭಾರತ ನಮಗೆ ಉತ್ತಮ ಸ್ನೇಹಿತ ರಾಷ್ಟ್ರ. ಅವರಿಗೆ ವಿಧಿಸಲಾಗಿರುವ ಸುಂಕ ಶೇ.25ಕ್ಕೆ ಉಳಿಸಲು ಬಯಸಿದ್ದೇವು. ಆದರೆ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವುದರಿಂದ ಸುಂಕ ಹೆಚ್ಚಿಸಲಾಗುವುದು ಎಂದು ಅಮೆರಿಕ ಸೆನೆಟರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.



