Wednesday, July 29, 2026
Google search engine
Homeವಿದೇಶಉಕ್ರೇನ್‌ ಸ್ವಾತಂತ್ರ್ಯ ದಿನಾಚರಣೆಯಂದು ರಷ್ಯಾದ ಪರಮಾಣು ಕೇಂದ್ರದ ಮೇಲೆ ಡ್ರೋಣ್ ದಾಳಿ‌

ಉಕ್ರೇನ್‌ ಸ್ವಾತಂತ್ರ್ಯ ದಿನಾಚರಣೆಯಂದು ರಷ್ಯಾದ ಪರಮಾಣು ಕೇಂದ್ರದ ಮೇಲೆ ಡ್ರೋಣ್ ದಾಳಿ‌

ಉಕ್ರೇನ್‌ ಸ್ವಾತಂತ್ರ್ಯ ದಿನಾಚರಣೆ ವೇಳೆ ರಷ್ಯಾದ ಪರಮಾಣು ಕೇಂದ್ರದ ಮೇಲೆ ಪರಮಾಣು ದಾಳಿ ನಡೆಸಿದ್ದು, ಇದರಿಂದ ಪರಮಾಣು ಕೇಂದ್ರದಲ್ಲಿ ಬೆಂಕಿಯ ಜ್ವಾಲೆ ಕಾಣಿಸಿಕೊಂಡ ಘಟನೆ ಭಾನುವಾರ ನಡೆದಿದೆ.

ಉಕ್ರೇನ್‌ ಭಾನುವಾರ 34ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಆಚರಿಸಿದ್ದು, ಈ ವೇಳೆ ದಾಳಿ ನಡೆಸುತ್ತಿರುವ ರಷ್ಯಾದ ಕ್ರುಸ್ಕ್‌ ನಲ್ಲಿರುವ ಪರಮಾಣು ಕೇಂದ್ರದ ಮೇಲೆ ಡ್ರೋಣ್‌ ದಾಳಿ ನಡೆಸಿದೆ.

ತಡರಾತ್ರಿ ರಷ್ಯಾದ ಹಲವಾರು ಎಲೆಕ್ಟ್ರಾನಿಕ್‌ ಮತ್ತು ವಿದ್ಯುತ್‌ ಸಂಪರ್ಕ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, ಪರಮಾಣು ಕೇಂದ್ರದ ಮೇಲೆ ದಾಳಿಯಲ್ಲಿ ಯಾವುದೇ ಸಾವು ನೋವು ವರದಿಯಾಗಿಲ್ಲ ಎಂದು ವರದಿಗಳು ಹೇಳಿವೆ.

ದಾಳಿಯಲ್ಲಿ ಟ್ರಾನ್ಸ್‌ ಫಾರ್ಮರ್‌ ಗಳಿಗೆ ಹಾನಿಯಾಗಿದ್ದರೂ ವಿದ್ಯುತ್‌ ಪ್ರಸಾರದಲ್ಲಿ ಯಾವುದೇ ಅಡಚಣೆ ಉಂಟಾಗಿಲ್ಲ. ಎಲ್ಲಾ ಪರಮಾಣು ಕೇಂದ್ರಗಳಿಗೆ ಸೂಕ್ತ ಭದ್ರತೆ ಒದಗಿಸುವ ಅವಶ್ಯಕತೆ ಇದೆ ಎಂದು ರಷ್ಯಾ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments