Wednesday, May 13, 2026
Google search engine
Homeದೇಶಕೇಂದ್ರ ಬಜೆಟ್: ತೆಂಗು, ಶ್ರೀಗಂಧ, ಗೋಡಂಬಿ ಬೆಳೆಗೆ ಪ್ರೋತ್ಸಾಹ

ಕೇಂದ್ರ ಬಜೆಟ್: ತೆಂಗು, ಶ್ರೀಗಂಧ, ಗೋಡಂಬಿ ಬೆಳೆಗೆ ಪ್ರೋತ್ಸಾಹ

ನವದೆಹಲಿ: ತೆಂಗು, ಶ್ರೀಗಂಧ, ಗೋಡಂಬಿ ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆಗಳ ಉತ್ತೇಜನಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಬಜೆಟ್‌ನಲ್ಲಿ ಹಲವು ಘೋಷಣೆಗಳನ್ನು ಮಾಡಿದ್ದಾರೆ.

ಈ ಬಾರಿ ಕೃಷಿಗಾಗಿ ಬರೋಬ್ಬರಿ 1,62,671 ಕೋಟಿ ರೂ. ಮೀಸಲಿಡಲಾಗಿದ್ದು, ನಿರ್ದಿಷ್ವಗಾಗಿ ತೆಂಗು, ಶ್ರೀಗಂಧ, ಗೋಡಂಬಿ ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆಗಳ ಉತ್ತೇಜನ ಪ್ರಕಟಿಸಿದ್ದಾರೆ.

ತೆಂಗು ಪ್ರೋತ್ಸಾಹಕ ಯೋಜನೆ

ಭಾರತದ ತೆಂಗು ಕೃಷಿಯನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲು ಹೊಸ ‘ತೆಂಗು ಪ್ರೋತ್ಸಾಹಕ ಯೋಜನೆ’ಯನ್ನು ಸಚಿವರು ಘೋಷಿಸಿದ್ದಾರೆ. ತೆಂಗಿನ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು. ತೆಂಗು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಹಳೆಯ ಮತ್ತು ಇಳುವರಿ ನೀಡದ ಮರಗಳನ್ನು ತೆಗೆದು, ಅವುಗಳ ಬದಲಿಗೆ ಹೆಚ್ಚಿನ ಇಳುವರಿ ನೀಡುವ ಆಧುನಿಕ ತಳಿಗಳ ಸಸಿಗಳನ್ನು ನೆಡಲು ಸರ್ಕಾರ ನೆರವು ನೀಡಲಿದೆ. ಕೇಂದ್ರದ ಈ ಯೋಜನೆ ಕರ್ನಾಟಕದ ರೈತರಿಗೆ ಹೆಚ್ಚು ವರದಾನ ಆಗಲಿದೆ.

ಗೋಡಂಬಿ ಮತ್ತು ಕೋಕೋ ಸ್ವಾವಲಂಬನೆ

ಭಾರತವನ್ನು ಗೋಡಂಬಿ ಮತ್ತು ಕೋಕೋ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿಸಲು ವಿಶೇಷ ಕಾರ್ಯಕ್ರಮವನ್ನು ಪ್ರಕಟಿಸಲಾಗಿದೆ.

ಬ್ರ್ಯಾಂಡ್ ಇಂಡಿಯಾ: 2030ರ ವೇಳೆಗೆ ಭಾರತೀಯ ಗೋಡಂಬಿ ಮತ್ತು ಕೋಕೋ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ‘ಪ್ರೀಮಿಯಂ ಬ್ರ್ಯಾಂಡ್’ ಆಗಿ ರೂಪಿಸುವ ಗುರಿ ಹೊಂದಲಾಗಿದೆ. ಕಚ್ಚಾ ಗೋಡಂಬಿ ಉತ್ಪಾದನೆ ಮತ್ತು ಸಂಸ್ಕರಣೆಯನ್ನು ಹೆಚ್ಚಿಸುವ ಮೂಲಕ ರಫ್ತು ಸಾಮರ್ಥ್ಯಕ್ಕೆ ಉತ್ತೇಜನ ನೀಡಲಾಗುವುದು.

ಶ್ರೀಗಂಧದ ಕೃಷಿಗೆ ಮರುಜೀವ

ಶ್ರೀಗಂಧವು ಭಾರತದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ ಎಂದು ಬಣ್ಣಿಸಿದ ಸಚಿವರು, ಶ್ರೀಗಂಧದ ಅರಣ್ಯ ಸಂಪತ್ತನ್ನು ಮರುಸ್ಥಾಪಿಸಲು ಒತ್ತು ನೀಡಿದ್ದಾರೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳೊಂದಿಗೆ ಸೇರಿ ಶ್ರೀಗಂಧದ ವ್ಯವಸ್ಥಿತ ಕೃಷಿ ಮತ್ತು ಕೊಯ್ಲು ನಂತರದ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಮುಂದಾಗಿದೆ. ಇದರಿಂದ ಶ್ರೀಗಂಧದ ಪರಿಸರ ವ್ಯವಸ್ಥೆ ಮತ್ತೆ ಪುನಶ್ಚೇತನಗೊಳ್ಳಲಿದೆ.

ಒಣ ಹಣ್ಣುಗಳ ತೋಟಗಳ ಪುನಶ್ಚೇತನ

ಆಕ್ರೋಟ್, ಬಾದಾಮಿ ಮತ್ತು ಪೈನ್ ನಟ್ಸ್ ಬೆಳೆಗಾರರಿಗೆ ಬಜೆಟ್‌ನಲ್ಲಿ ಸಿಹಿ ಸುದ್ದಿ ನೀಡಲಾಗಿದೆ. ಕಡಿಮೆ ಇಳುವರಿ ನೀಡುವ ಹಳೆಯ ತೋಟಗಳನ್ನು ಆಧುನೀಕರಿಸಲು ಮತ್ತು ಹೆಚ್ಚಿನ ಸಾಂದ್ರತೆಯ ಕೃಷಿ ಪದ್ಧತಿಯನ್ನು ವಿಸ್ತರಿಸಲು ಸರ್ಕಾರ ಬೆಂಬಲ ನೀಡಲಿದೆ. ಇದು ರೈತರ ಆದಾಯ ಹೆಚ್ಚಿಸುವುದಲ್ಲದೆ, ಯುವಜನತೆಗೆ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶ ನೀಡಲಿದೆ.

ಪಶುಸಂಗೋಪನೆ ಮತ್ತು ಹೈನುಗಾರಿಕೆ

ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗಾಗಿ ಪಶುಸಂಗೋಪನಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಾಲ ಆಧಾರಿತ ಸಬ್ಸಿಡಿ ಕಾರ್ಯಕ್ರಮದ ಮೂಲಕ ಪಶುಸಂಗೋಪನಾ ಉದ್ಯಮಗಳನ್ನು ಆಧುನೀಕರಿಸಲಾಗುವುದು. ಡೈರಿ (ಹೈನುಗಾರಿಕೆ) ಮತ್ತು ಕುಕ್ಕುಟೋದ್ಯಮ ಕ್ಷೇತ್ರಗಳಲ್ಲಿ ಮೌಲ್ಯವರ್ಧಿತ ಸರಪಳಿಯನ್ನು ಅಭಿವೃದ್ಧಿಪಡಿಸಲಾಗುವುದು. ಪಶುಸಂಗೋಪನೆ ಮಾಡುವ ರೈತರಿಗಾಗಿ ಪ್ರತ್ಯೇಕ ‘ರೈತ ಉತ್ಪಾದಕ ಸಂಸ್ಥೆ’ಗಳನ್ನು ರಚಿಸಲು ಸರ್ಕಾರ ಉತ್ತೇಜನ ನೀಡಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments