Sunday, June 14, 2026
Google search engine
Homeವಿದೇಶಇರಾನ್ ಎಚ್ಚರಿಕೆ ನಡುವೆ ಮಧ್ಯಪ್ರಾಚ್ಯದತ್ತ ಅಮೆರಿಕದ ಯುದ್ಧನೌಕೆ ದೌಡು!

ಇರಾನ್ ಎಚ್ಚರಿಕೆ ನಡುವೆ ಮಧ್ಯಪ್ರಾಚ್ಯದತ್ತ ಅಮೆರಿಕದ ಯುದ್ಧನೌಕೆ ದೌಡು!

ಈ ಬಾರಿ ಗುರಿ ತಪ್ಪಲ್ಲ ಎಂದು ಇರಾನ್ ಎಚ್ಚರಿಕೆ ನಡುವೆಯೇ ಅಮೆರಿಕದ ಯುದ್ಧ ನೌಕೆಗಳು ಮಧ್ಯಪ್ರಾಚ್ಯದತ್ತ ನುಗ್ಗುತ್ತಿದ್ದು, ಯುದ್ಧ ಭೀತಿ ಆವರಿಸಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ನಿಯೋಜಿಸಲಾಗಿದ್ದ ಯುದ್ಧ ವಿಮಾನಗಳನ್ನು ಹೊತ್ತು ಸಾಗುವ ನೌಕೆಗಳನ್ನು ಮಧ್ಯಪ್ರಾಚ್ಯದತ್ತ ತೆರಳಲು ಸೂಚಿಸಲಾಗಿದೆ ಎಂದು ಅಮೆರಿಕ ರಕ್ಷಣಾ ಮುಖ್ಯ ಕಚೇರಿ ಹೇಳಿದೆ.

ಇರಾನ್ ಆಡಳಿತದ ವಿರುದ್ಧದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 4000 ಗಡಿ ತಲುಪಿದೆ. ಇರಾನ್ ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ನಡುವೆ ಪ್ರತಿಭಟನೆ ಮುಂದುವರಿಸಿ ನಿಮ್ಮ ನೆರವಿಗೆ ಬರುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು.

ಅಲ್ಲದೇ ಈ ಬಾರಿ ಇರಾನ್ ಮೇಲಿನ ದಾಳಿಯನ್ನು ದೀರ್ಘ ಕಾಲ ಎಳೆಯುವುದಿಲ್ಲ. ಬೇಗನೇ ಮುಗಿಸುತ್ತೇವೆ ಎಂದು ಟ್ರಂಪ್ ಮತ್ತೊಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದರ ಬೆನ್ನಲ್ಲೇ ಇರಾನ್ ಈ ಬಾರಿ ನಮ್ಮ ತಂಟೆಗೆ ಬಂದರೆ ಗುರಿ ತಪ್ಪಲ್ಲ ಎಂದು ತಿರುಗೇಟು ನೀಡಿದೆ.

ಈ ಎಲ್ಲಾ ಬೆಳವಣಿಗೆ ನಡುವೆ ಅಮೆರಿಕದ ಸೆಂಟ್ರಲ್ ಕಮಾಂಡ್ ವಿಭಾಗ ದಾಳಿ ಗುಂಪನ್ನು ಇರಾನ್ ಕಡೆಗೆ ರವಾನಿಸುತ್ತಿದೆ. ಈ ಗುಂಪಿನಲ್ಲಿ ಕನಿಷ್ಠ ಒಂದು ದಾಳಿ ನಡೆಸುವ ಸಬ್ ಮರೀನ್, ದಾಳಿ ನಡೆಸುವ ಯುದ್ಧ ವಿಮಾನಗಳನ್ನು ನಿಲುಗಡೆಗೆ ಅವಕಾಶ ನೀಡುವ ನೌಕೆಗಳು ಸೇರಿವೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments