Monday, June 15, 2026
Google search engine
Homeದೇಶಸರ್ಕಾರಿ ಕಾರ್ಯಕ್ರಮಗಳಲ್ಲಿ ಜನಗಣಮನಕ್ಕೂ ಮುನ್ನ ವಂದೇ ಮಾತರಂ ಗೀತೆ ಹಾಡುವುದು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ

ಸರ್ಕಾರಿ ಕಾರ್ಯಕ್ರಮಗಳಲ್ಲಿ ಜನಗಣಮನಕ್ಕೂ ಮುನ್ನ ವಂದೇ ಮಾತರಂ ಗೀತೆ ಹಾಡುವುದು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ

ಎಲ್ಲಾ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಇನ್ನು ಮುಂದೆ ರಾಷ್ಟ್ರಗೀತೆ ಜನಗಣಮನಕ್ಕೂ ಮುನ್ನ ವಂದೇ ಮಾತರಂ ಹಾಡುವುದು ಕಡ್ಡಾಯ ಹಾಗೂ ಗೀತೆಯ ವೇಳೆ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

3 ನಿಮಿಷ 10 ಸೆಕೆಂಡ್‌ ಗಳ ಕಾಲ ವಂದೇ ಮಾತರಂ ಹಾಡುವಾಗ ಜನಗಣಮನ ಹಾಡುವಾಗ ನೀಡುವ ಗೌರವದಂತೆ ವಂದೇ ಮಾತರಂ ಹಾಡಿಗೂ ನೀಡಬೇಕು ಎಂದು ಕೇಂದ್ರ ಸರ್ಕಾರ ಆದೇಶದಲ್ಲಿ ತಿಳಿಸಿದೆ.

3 ನಿಮಿಷ 10 ಸೆಕೆಂಡ್‌ ಗಳ ಕಾಲ ವಂದೇ ಮಾತರಂ ಹಾಡುವಾಗ ಜನಗಣಮನ ಹಾಡುವಾಗ ನೀಡುವ ಗೌರವದಂತೆ ವಂದೇ ಮಾತರಂ ಹಾಡಿಗೂ ನೀಡಬೇಕು ಎಂದು ಕೇಂದ್ರ ಸರ್ಕಾರ ಆದೇಶದಲ್ಲಿ ತಿಳಿಸಿದೆ. ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದವರಿಗೆ ಗರಿಷ್ಠ 3 ವರ್ಷ ಶಿಕ್ಷೆ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸರ್ಕಾರಿ ಕಾರ್ಯಕ್ರಮ, ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮಾತ್ರವಲ್ಲದೇ, ಪದ್ಮಶ್ರೀ ಸೇರಿದಂತೆ ನಾಗರಿಕ ಸೇವಾ ಪ್ರಶಸ್ತಿ ಕಾರ್ಯಕ್ರಮಗಳಲ್ಲಿ, ರಾಷ್ಟ್ರಪತಿ ಪಾಲ್ಗೊಳ್ಳುವ ಕಾರ್ಯಕ್ರಮ ಹಾಗೂ ಸಿನಿಮಾ ಹಾಲ್‌ ಗಳಲ್ಲಿ ಕೂಡ ವಂದೇ ಮಾತರಂ ಗೀತೆ ಹಾಡಬೇಕು. ಆದರೆ ಈ ಕಾರ್ಯಕ್ರಮಗಳಲ್ಲಿ ಎದ್ದು ನಿಂತು ಗೌರವ ಸಲ್ಲಿಸುವುದು ಕಡ್ಡಾಯವೇನಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

1937ರಲ್ಲಿ ಕಾಂಗ್ರೆಸ್‌ ತೆಗೆಯಲಾಗಿದ್ದ ವಂದೇ ಮಾತರಂ ಗಾಯನದ ೪ ಸಾಲುಗಳನ್ನು ಕೂಡ ಸೇರಿಸಲಾಗಿದೆ. ಈ ಮೂಲಕ ವಂದೇ ಮಾತರಂ ಗಾಯನ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಕಳೆದ ಕೆಲವು ತಿಂಗಳಿಂದ ವಂದೇ ಮಾತರಂ ಗಾಯನವನ್ನು ರಾಷ್ಟ್ರಗೀತೆಗೆ ಸೇರ್ಪಡೆಗೊಳಿಸುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅಲ್ಲದೇ ಕಾಂಗ್ರೆಸ್‌ ಆಡಳಿತದಲ್ಲಿ ತೆಗೆಯಲಾಗಿದ್ದ ವಿವಾದಾತ್ಮಕ ಸಾಲುಗಳ ಬಗ್ಗೆ ಚರ್ಚೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲೂ ನಡೆದಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments