Wednesday, 28 October 2026 — Kannadavahini
BREAKING NEWS
ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್ ರಾಜ್ಯ ಅ. 24ರಿಂದ ಹೊಸ ಮೆರುಗಿನಲ್ಲಿ ‘ಗೋಲ್ಡನ್ ಚಾರಿಯಟ್’ ಐಷಾರಾಮಿ ಯಾತ್ರೆ ಆರಂಭ ಅಪರಾಧ ಬೆಂಗಳೂರಿನಲ್ಲಿ ನಿಗೂಢ ಸ್ಫೋಟ: ಎನ್ ಐಎ ತನಿಖೆ ರಾಜ್ಯ ಐತಿಹಾಸಿಕ ಜಂಬೂಸವಾರಿ: ಚಾಮುಂಡೇಶ್ವರಿ ಮೆರವಣಿಗೆಗೆ ಸಿಎಂ ಪುಷ್ಪಾರ್ಚನೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್ ರಾಜ್ಯ ಅ. 24ರಿಂದ ಹೊಸ ಮೆರುಗಿನಲ್ಲಿ ‘ಗೋಲ್ಡನ್ ಚಾರಿಯಟ್’ ಐಷಾರಾಮಿ ಯಾತ್ರೆ ಆರಂಭ ಅಪರಾಧ ಬೆಂಗಳೂರಿನಲ್ಲಿ ನಿಗೂಢ ಸ್ಫೋಟ: ಎನ್ ಐಎ ತನಿಖೆ ರಾಜ್ಯ ಐತಿಹಾಸಿಕ ಜಂಬೂಸವಾರಿ: ಚಾಮುಂಡೇಶ್ವರಿ ಮೆರವಣಿಗೆಗೆ ಸಿಎಂ ಪುಷ್ಪಾರ್ಚನೆ
ತಾಜಾ ಸುದ್ದಿ

ಬಿರ್ಲಾ ಒಪಸ್ ಪೇಂಟ್ಸ್ ನ `ಹೊಸ ಯುಗದ ಹೊಸ ಪೇಂಟ್’ ಜಾಹಿರಾತಿನಲ್ಲಿ ವಿಕ್ಕಿ ಕೌಶಾಲ್, ರಶ್ಮಿಕಾ ಮಂದಣ್ಣ!

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
3 ನಿಮಿಷ ಓದು 1 ವೀಕ್ಷಣೆಗಳು
rashmika mandanna
rashmika mandanna

ಬಿರ್ಲಾ ಒಪಸ್ ಪೇಂಟ್ಸ್ ನ `ನಯೇ ಜಮಾನೇಕಾ ನಯಾ ಪೇಂಟ್’ (ಹೊಸ ಯುಗದ ಹೊಸ ಪೇಂಟ್) ಜಾಹಿರಾತಿನಲ್ಲಿ ಬಾಲಿವುಡ್ ನಟ ವಿಕ್ಕಿ ಕೌಶಾಲ್ ಮತ್ತು ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ.

ಲಿಯೊ ಬರ್ನೆಟ್ ಇಂಡಿಯಾದ ಪರಿಕಲ್ಪನೆಯ ಈ ಜಾಹೀರಾತಿನಲ್ಲಿ ನಟ-ನಟಿಯರಾದ ವಿಕ್ಕಿ ಕೌಶಾಲ್ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಬ್ರಾಂಡ್ ರಾಯಭಾರಿಗಳನ್ನಾಗಿ ಹೊಂದಿದ್ದು, ಅವರು ಈ ಪೇಂಟ್ಸ್ ಹೊಂದಿರುವ ವೈಶಿಷ್ಟ್ಯಗಳ ಕುರಿತು ಹಿರಿಯ ಕಲಾವಿದರಾದ ನೀನಾ ಗುಪ್ತಾ ಮತ್ತು ಸೌರಭ್ ಶುಕ್ಲಾ ಅವರೊಂದಿಗೆ ಮಾತನಾಡುತ್ತಾರೆ.

ಈ ವಿಶಿಷ್ಟ ಐಡಿಯಾ, ಆಕರ್ಷಕ ತಾರಾಗಣ ಮತ್ತು ಸದೃಢ ಪರಿಕಲ್ಪನೆಯು ಬಿರ್ಲಾ ಒಪಸ್ ಪೇಂಟ್ಸ್ ಅನ್ನು ಹೊಸ ಮತ್ತು ಎಲ್ಲರೂ ಬಯಸುವ ಉತ್ಪನ್ನವಾಗಿಸಿದೆ.

ಈ ಅಭಿಯಾನವನ್ನು ಹಿಂದಿ ಮತ್ತು ಎಲ್ಲ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಮಾಡಲಾಗುತ್ತದೆ ಮತ್ತು ಟಿ.ವಿ., ಡಿಜಿಟಲ್. ಒಒಎಚ್, ಮುದ್ರಣ ಮತ್ತು ರೇಡಿಯೊಗಳಲ್ಲಿ 360 ಡಿಗ್ರಿ ಆಕ್ಟಿವೇಷನ್ ಬೆಂಬಲ ಪಡೆದಿದ್ದು, ಅದು ಅರಿವನ್ನು ಮೂಡಿಸಲಿದೆ ಮತ್ತು ಪ್ರಾಯೋಗಿಕ ಬಳಕೆ ಉತ್ತೇಜಿಸಲಿದೆ.

ಬಿರ್ಲಾ ಒಪಸ್ ಪೇಂಟ್ಸ್ ಸಿಇಒ ರಕ್ಷಿತ್ ಹರ್ಗವೆ ಮಾತನಾಡಿ, ಈ ಹಬ್ಬದ ಋತುವಿನಲ್ಲಿ ಪ್ರಾರಂಭಿಸಿದ ನಮ್ಮ ಹೊಸ ಅಭಿಯಾನ `ನಯೆ ಜಮಾನೇಕಾ ನಯಾ ಪೇಂಟ್’ನಲ್ಲಿ ನಾವು ಡೈನಮಿಕ್ ತಾರಾಗಣದ ಮೂಲಕ ನಮ್ಮ ಉತ್ಪನ್ನದ ಕಾರ್ಯಕ್ಷಮತೆಯನ್ನು ಎತ್ತಿ ತೋರಿಸುತ್ತಿದ್ದು ವಿಕ್ಕಿ ಕೌಶಾಲ್ ಮತ್ತು ರಶ್ಮಿಕಾ ಮಂದಣ್ಣ ಅವರ ಯುವಶಕ್ತಿಯು ಸೌರಭ್ ಶುಕ್ಲಾ ಮತ್ತು ನೀನಾ ಗುಪ್ತಾ ಅವರ ಸಮಯರಹಿತ ಮೋಡಿಯೊಂದಿಗೆ ಸಂಯೋಜನೆಗೊಂಡಿದೆ. ಈ ಅಭಿಯಾನವು ನಮ್ಮ ಗ್ರಾಹಕರನ್ನು ಅಭಿರುಚಿಯನ್ನು ಆಳವಾಗಿ ಬಿಂಬಿಸುತ್ತಿದ್ದು ನಮ್ಮ ಆವಿಷ್ಕಾರಕ ಮತ್ತು ಸ್ಫೂರ್ತಿದಾಯಕ ವಿಧಾನವನ್ನು ಪ್ರದರ್ಶಿಸುತ್ತದೆ ಎಂದರು.

ಖ್ಯಾತ ಬಾಲಿವುಡ್ ನಟ ವಿಕ್ಕಿ ಕೌಶಾಲ್, “ಬಿರ್ಲಾ ಒಪಸ್ ಪೇಂಟ್ಸ್ ಕುಟುಂಬದ ಭಾಗವಾಗಲು ನಾನು ರೋಮಾಂಚಿತನಾಗಿದ್ದೇನೆ ಮತ್ತು ಗ್ರಾಹಕರ ಜೀವನಗಳಲ್ಲಿ ಉಜ್ವಲತೆ ಮತ್ತು ಬಣ್ಣಗಳನ್ನು ಹರಡಲು ಎದುರು ನೋಡುತ್ತಿದ್ದೇನೆ. ಈ ಅಭಿಯಾನಕ್ಕೆ ನಿಜಕ್ಕೂ ವಿಭಿನ್ನ ರೀತಿಯಲ್ಲಿ ಸೃಜನಶೀಲ ರೀತಿಯಲ್ಲಿ ಜೀವ ತುಂಬಲಾಗಿದೆ. ಈ ಜಾಹೀರಾತು ಚಿತ್ರ ಚಿತ್ರೀಕರಣದಲ್ಲಿ ಖ್ಯಾತ ನಟ ಸೌರಭ್ ಶುಕ್ಲಾ ಅವರೊಂದಿಗೆ ನಟಿಸುವುದು ನಿಜಕ್ಕೂ ವಿನೋದಮಯವಾಗಿತ್ತು, ಚಿತ್ರೀಕರಣದ ಸಮಯದಲ್ಲಿ ಅವರ ಸುಧಾರಣೆಗಳನ್ನು ವೀಕ್ಷಿಸುವುದು ನಿಜಕ್ಕೂ ಆನಂದದಾಯಕವಾಗಿತ್ತು” ಎಂದರು.

ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ, “ಬದಲಾಗುತ್ತಿರುವ ಸಮಯದೊಂದಿಗೆ ವಿಕಾಸಗೊಳ್ಳಬೇಕು ಎಂದು ನಾನು ನಂಬಿದ್ದೇನೆ. ಬಿರ್ಲಾ ಒಪಸ್ ಪೇಂಟ್ಸ್ ನೊಂದಿಗೆ ನಮ್ಮ ಹೊಚ್ಚಹೊಸ ಅಭಿಯಾನವು ವಾಸ್ತವಾಂಶಗಳೊಂದಿಗೆ ಬಂದಿರುವ ನನ್ನ ನಂಬಿಕೆಯ ಪ್ರತಿಫಲನವಾಗಿದಯೇ ಹೊರತು ಸಾಮಾನ್ಯ ರೂಢಿಯನ್ನು ಅನುಸರಿಸುವುದರಿಂದ ಅಲ್ಲ. ಬಿರ್ಲಾ ಒಪಸ್ ಅವರ ಬ್ರಾಂಡ್ ರಾಯಭಾರಿಯಾಗಿ ಸಹಯೋಗ ಹೊಂದಲು ನಾನು ಬಹಳ ಸಂತೋಷ ಹೊಂದಿದ್ದೇನೆ. ಬಿರ್ಲಾ ಒಪಸ್ ಪೇಂಟ್ಸ್ ಜೊತೆಯಲ್ಲಿ ಮಹತ್ತರ ಸಹಯೋಗ ನಿರೀಕ್ಷೆ ಮಾಡುತ್ತಿದ್ದೇನೆ” ಎಂದರು.

ಲಿಯೊ ಬರ್ನೆಟ್- ಸೌಥ್ ಏಷ್ಯಾ ಅಧ್ಯಕ್ಷ ರಾಜ್ ದೀಪಕ್ ದಾಸ್, “ನಾವು ಸತತವಾಗಿ ಪರಿವರ್ತನೆಯಾಗುತ್ತಿರುವ ನಮ್ಮ ಮನೆಗಳು, ಅಗತ್ಯಗಳು ಮತ್ತು ದೃಷ್ಟಿಕೋನಗಳನ್ನು ಮರು ರೂಪಿಸುತ್ತಿರುವ ವಿಶ್ವದಲ್ಲಿ ಜೀವಿಸುತ್ತಿದ್ದೇವೆ. ನಮ್ಮ ತಾರೆಯರ ಸಮೂಹ ಹೊಂದಿರುವ ಜಾಹೀರಾತು ಚಿತ್ರವು ಹೇಗೆ ಹಿಂದಿನ ಕಾಲದ ಪೇಂಟ್ ಹೇಗೆ ಕೆಲಸ ಮಾಡುತ್ತದೆ ಎಂದು ಮನರಂಜನೆಯ ದೃಷ್ಟಿಕೋನ ತರುತ್ತದೆ, ಹೊಸ ಭಾರತದ ಸದಾ ಬದಲಾಗುತ್ತಿರುವ ಅಗತ್ಯಗಳಿಗೆ ಎಚ್ಚರಿಕೆಯಿಂದ ವಿನ್ಯಾಸಗೊಳಿಸಿದ ಮುಂದಿನ ತಲೆಮಾರಿನ ಪೇಂಟ್ ಗಳನ್ನು ಹೊಂದಲು ಇದು ಸಕಾಲ ಎಂದರು.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8389 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment