ಬೆಂಗಳೂರು, ಭಾರತ- ಏಪ್ರಿಲ್ 16, 2026: ಮುಂಚೂಣಿಯ ಎಐ-ಪವರ್ಡ್ ತಂತ್ರಜ್ಞಾನ ಸೇವೆಗಳು ಮತ್ತು ಕನ್ಸಲ್ಟಿಂಗ್ ಕಂಪನಿ ವಿಪ್ರೋ ಲಿಮಿಟೆಡ್ ಮಾರ್ಚ್ 31,2026ಕ್ಕೆ ಅಂತ್ಯವಾದ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಇಂಟರ್ನ್ಯಾಷನಲ್ ಫೈನಾನ್ಷಿಯಲ್ ರಿಪೋರ್ಟಿಂಗ್ ಸ್ಟಾಂಡರ್ಡ್ಸ್ (ಐ.ಎಫ್.ಆರ್.ಎಸ್.) ಅಡಿಯಲ್ಲಿ ಪ್ರಕಟಿಸಿದೆ.
ಈ ಫಲಿತಾಂಶಗಳ ಪ್ರಮುಖಾಂಶಗಳು:
1.ನಿವ್ವಳ ಆದಾಯ ₹24,240 ಕೋಟಿ (2,583 ಮಿಲಿಯನ್ ಡಾರ್) ಇದ್ದು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ.2.9, ವರ್ಷದಿಂದ ವರ್ಷಕ್ಕೆ ಶೇ.7.7
2. ಐಟಿ ಸೇವೆಗಳ ವಲಯದ ಆದಾಯವು 2651 ಮಿಲಿಯನ್ ಡಾಲರ್ ಇದ್ದು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ.0.6ರಷ್ಟು ಹೆಚ್ಚಳ
3. ತ್ರೈಮಾಸಿಕದ ನಿವ್ವಳ ಆದಾಯ ₹3,500 ಕೋಟಿ (373.2ಮಿಲಿಯನ್ ಡಾಲರ್) ಇದ್ದು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ.12.3ರಷ್ಟು ವೃದ್ಧಿಸಿದೆ
4.ಐಟಿ ಸೇವೆಗಳ ಆಪರೇಟಿಂಗ್ ಮಾರ್ಜಿನ್ ಶೇ.17.3ರಷ್ಟಿದ್ದು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ.0.3ರಷ್ಟು ಕುಗ್ಗಿದೆ
ವಿಪ್ರೋ ಇಂದು ಮಾರ್ಚ್ 31, 2026ಕ್ಕೆ ಅಂತ್ಯವಾದ ತ್ರೈಮಾಸಿಕದಲ್ಲಿ ಕಂಪನಿಯು 24,240 ಕೋಟಿ ನಿವ್ವಳ ಆದಾಯ ಮತ್ತು 3,500 ಕೋಟಿ ಲಾಭ ಗಳಿಸಿದೆ ಎಂದು ಪ್ರಕಟಿಸಿದೆ. ಈ ತ್ರೈಮಾಸಿಕಕ್ಕೆ ಐಟಿ ಸೇವೆಗಳ ಕಾರ್ಯಾಚರಣೆಯ ಮಾರ್ಜಿನ್ ಶೇ.17.3ರಷ್ಟಿದ್ದು ಅದು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ.0.3ರಷ್ಟು ಕುಸಿದಿದೆ.
ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀನಿ ಪಲ್ಲಿಲ, “ಎಐನಲ್ಲಿ ಸುಧಾರಣೆಗಳು ಗ್ರಾಹಕರ ಆದ್ಯತೆಗಳನ್ನು ಮರು ರೂಪಿಸತ್ತಿವೆ ಮತ್ತು ನಮಗೆ ಹೆಚ್ಚು ಆಳವಾದ ಮೌಲ್ಯ ಪ್ರೇರಿತ ಫಲಿತಾಂಶಗಳನ್ನು ಪೂರೈಸಲು ಸಹಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ.
ಎಐ-ಪ್ರಥಮ ಜಗತ್ತಿನಲ್ಲಿ ನಮ್ಮ ಸ್ಥಾನ ಸದೃಢಗೊಳಿಸಿಕೊಳ್ಳಲು ನಾವು ಸರ್ವೀಸಸ್-ಆಸ್-ಎ- ಸಾಫ್ಟ್ ವೇರ್ ಮಾದರಿಗೆ ಎಐ ನೇಟಿವ್ ಬಿಸಿನೆಸ್ ಅಂಡ್ ಪ್ಲಾಟ್ ಫಾರಮ್ಸ್ ಘಟಕದ ಮೂಲಕ ಬದಲಾಗಿದ್ದೇವೆ. ಓಲಂ ಸಮೂಹದೊಂದಿಗೆ ನಮ್ಮ ದಿಟ್ಟ ಕಾರ್ಯತಂತ್ರೀಯ ವಹಿವಾಟು ದೊಡ್ಡ ಮಟ್ಟದಲ್ಲಿ ನಾವು ಅವಕಾಶಗಳನ್ನು ಪಡೆದುಕೊಳ್ಳಲು ನಿರ್ಣಾಯಕ ಹೂಡಿಕೆಗಳು ನಾವು ಮಾಡುತ್ತಿರುವುದನ್ನು ತೋರುತ್ತದೆ” ಎಂದರು.
ನಮ್ಮ ನಿರ್ದೇಶಕರ ಮಂಡಳಿಯು ಷೇರುದಾರರ ಅನುಮೋದನೆಯ ನಂತರ ₹250ರ ಬೆಲೆಯಲ್ಲಿ ₹15,000 ಕೋಟಿ ಷೇರು ಬೈಬ್ಯಾಕ್ ಪ್ರಕಟಿಸಿದೆ.



