ಹಾಡುಹಗಲೇ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಸೋದರ ಸಂಬಂಧಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಹೊರಹೊಲಯ ಪೀಣ್ಯ ದಾಸರಹಳ್ಳಿ ಬಳಿಯ ಕುದುರೆಗೆರೆ ಕಾಲೋನಿ ಬಳಿ ಸೋಮವಾರ ನಡೆದಿದ್ದು, 55 ವರ್ಷದ ದಾಕ್ಷಾಯಿಣಿ (55) ಕೊಲೆಯಗಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಕುದುರುಗೆರೆ ಕಾಲೋನಿ ಬಳಿ ಶಾಲೆಯಲ್ಲಿದ್ದ ಮೊಮ್ಮಗನಿಗೆ ಊಟ ಕೊಟ್ಟು ಬರುವಾಗ ದ್ವಿಚಕ್ರ ವಾಹನದಲ್ಲಿ ಬಂದು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಭೂ ವಿವಾದ ಕೊಲೆಗೆ ಕಾರಣ
ಭೂ ವಿವಾದ ಹಾಗೂ ಮಾವ ವೀರಭದ್ರ ಜೊತೆ ಅನೈತಿಕ ಸಂಬಂಧ ಇದೆ ಎಂಬ ಕಾರಣಕ್ಕೆ ಸೇಡಿನಿಂದ ಸೋದರ ಸಂಬಂಧಿ ಕೊಡಲಿಯಿಂದ ಕತ್ತು ಸೀಳಿ ಭೀಕರ ಹತ್ಯೆ ಮಾಡಿದ್ದಾನೆ ಎಂದು ಮೃತ ದಾಕ್ಷಾಯಿಣಿ ಮಕ್ಕಳು ಆರೋಪ ಮಾಡಿದ್ದಾರೆ.
ಹಾಡುಹಗಲೇ ಮಹಿಳೆಯ ಕೊಲೆ ಕುದುರೆಗೆರೆ ಸುತ್ತ ಮುತ್ತ ಕಾಡ್ಗಿಚ್ಚಿನಂತೆ ಹಬ್ಬಿದ್ದು ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಹಾಗೂ ವಾಯುವ್ಯ ವಿಭಾಗ ಡಿಸಿಪಿ ಡಿ.ಎಲ್ ನಾಗೇಶ್, ಫೋರೆನ್ಸಿಕ್ ತಂಡ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾಆಸ್ಪತ್ರೆಗೆ ರವಾನೆ ಮಾಡಿದ್ದಾರೆ
ಕೊಲೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಎಸ್ಕೇಪ್ ಆಗಿರುವ ಕೊಲೆಗಾರನ ಹುಡುಕಾಟಕ್ಕೆ ತಂಡ ರಚಿಸಿದ್ದಾರೆ.



