Friday, May 15, 2026
Google search engine
Homeವಿದೇಶಮೆಕ್ಕಾ-ಮದೀನಾ ಪವಿತ್ರ ಯಾತ್ರೆಗೆ ತೆರಳಿದ್ದ 42 ಭಾರತೀಯರ ದುರ್ಮರಣ

ಮೆಕ್ಕಾ-ಮದೀನಾ ಪವಿತ್ರ ಯಾತ್ರೆಗೆ ತೆರಳಿದ್ದ 42 ಭಾರತೀಯರ ದುರ್ಮರಣ

ಮುಸ್ಲಿಮರ ಪವಿತ್ರಾ ಕ್ಷೇತ್ರವಾದ ಸೌದಿ ಅರೆಬಿಯಾದ ಮೆಕ್ಕಾ ಮದೀನಾ ರಸ್ತೆಯಲ್ಲಿ ಬಸ್ ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 42 ಭಾರತೀಯರು ಸೇರಿ ಕನಿಷ್ಠ 45 ಮಂದಿ ಮೃತಪಟ್ಟಿದ್ದಾರೆ.

ಮೆಕ್ಕಾದಿಂದ ಮದೀನಾಗೆ ಪ್ರಯಾಣಿಸುತ್ತಿದ್ದ ಬಸ್  ಮುಫ್ರಿಹತ್ ಬಳಿ ಭಾನುವಾರ ತಡರಾತ್ರಿ 1.30ರ ಸುಮಾರಿಗೆ ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಮೃತಪಟ್ಟ ಭಾರತೀಯರ ಪೈಕಿ ಬಹುತೇಕ ಮಂದಿ ತೆಲಂಗಾಣದ ಹೈದರಾಬಾದ್ ಮತ್ತು ಖಲೀಜ್ ಟೈಮ್ಸ್ ನಿವಾಸಿಗಳಾಗಿದ್ದಾರೆ.

ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಡೀಸೆಲ್ ಟ್ಯಾಂಕರ್ ಸ್ಫೋಟಗೊಂಡು ಬೆಂಕಿ ಅತ್ಯಂತ ವೇಗವಾಗಿ ಬಸ್ ಗೆ ಅಂಟಿಕೊಂಡಿದೆ. ಯಾತ್ರಿಕರು ನಿದ್ದೆಯಲ್ಲಿ ಇದ್ದಿದ್ದರಿಂದ ಪರಾರಾಗಲು ಸಮಯ ಕಡಿಮೆ ಇದ್ದಿದ್ದರಿಂದ ಬಸ್ ನಲ್ಲಿ ಸಜೀವದಹನಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟವರಲ್ಲಿ 11 ಮಹಿಳೆಯರು ಮತ್ತು 10 ಮಕ್ಕಳು ಸೇರಿದ್ದಾರೆ. ಬಸ್ ಸಂಪೂರ್ಣ ಸುಟ್ಟು ಹೋಗಿರುವುದರಿಂದ ಮೃತರ ಶವಗಳನ್ನು ಗುರುತಿಸಲು ಅಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಮೊಹಮದ್ ಅಬ್ದುಲ್ ಶೋಯಿಬ್ ಎಂಬ ಒಬ್ಬ ಪ್ರಯಾಣಿಕರೊಬ್ಬರನ್ನು ರಕ್ಷಿಸಲಾಗಿದೆ.

ದುರಂತ ಕುರಿತು ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿದಂತೆ ಹಲವು ಮುಖಂಡರು ಶೋಕ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments